ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ದೌಂಡ್-ಕುರ್ದುವಾಡಿ ಭಾಗದ ಭಿಗ್ವಾನ್ ಮತ್ತು ವಾಷಿಂಬೆ ನಿಲ್ದಾಣಗಳ ನಡುವೆ ಜೋಡಿ ಮಾರ್ಗದ ಕಾರ್ಯಕ್ಕೆ ಸಂಬಂಧಿಸಿದಂತೆ ನಾನ್-ಇಂಟರ್ ಲಾಕಿಂಗ್ ಕಾಮಗಾರಿಯ ನಿಮಿತ್ತ ಕೇಂದ್ರೀಯ ರೈಲ್ವೆ ಸೂಚನೆಯಂತೆ ಈ ಕೆಳಗಿನ ರೈಲುಗಳನ್ನು ರದ್ದುಗೊಳಿಸಲಾಗುತ್ತಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
ಈ ಕುರಿತಂತೆ ಪ್ರಕಟಣೆ ಹೊರಡಿಸಿರುವ ಇಲಾಖೆ, ನಾಲ್ಕು ರೈಲುಗಳನ್ನು ರದ್ದುಗೊಳಿಸಲಿದ್ದು, ಒಂದು ರೈಲು ಸಂಚಾರದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.
ಯಾವೆಲ್ಲಾ ರೈಲುಗಳು ರದ್ದು?
1. ರೈಲು ಸಂಖ್ಯೆ 22601 ಎಂಜಿಆರ್ ಚೆನ್ನೈ ಸೆಂಟ್ರಲ್-ಸಾಯಿನಗರ ಶಿರಡಿ ಸಾಪ್ತಾಹಿಕ ಸೂಪರ್ ಫಾಸ್ಟ್ ಎಕ್ಸ್’ಪ್ರೆಸ್ ರೈಲಿನ ಸೇವೆಯನ್ನು 27.07.2022 ಮತ್ತು 03.08.2022 ರಂದು ರದ್ದು.
2. ರೈಲು ಸಂಖ್ಯೆ 22602 ಸಾಯಿನಗರ ಶಿರಡಿ-ಎಂಜಿಆರ್ ಚೆನ್ನೈ ಸೆಂಟ್ರಲ್ ಸಾಪ್ತಾಹಿಕ ಸೂಪರ್ ಫಾಸ್ಟ್ ಎಕ್ಸ್’ಪ್ರೆಸ್ ರೈಲಿನ ಸೇವೆ 29.07.2022 ಮತ್ತು 05.08.2022 ರಂದು ರದ್ದು.
3. ರೈಲು ಸಂಖ್ಯೆ 16502 ಯಶವಂತಪುರ-ಅಹ್ಮದಾಬಾದ್ ಸಾಪ್ತಾಹಿಕ ಎಕ್ಸ್’ಪ್ರೆಸ್ ರೈಲಿನ ಸೇವೆಯನ್ನು 31.07.2022 ಮತ್ತು 07.08.2022 ರಂದು ರದ್ದು.
4. ರೈಲು ಸಂಖ್ಯೆ 16501 ಅಹ್ಮದಾಬಾದ್-ಯಶವಂತಪುರ ಸಾಪ್ತಾಹಿಕ ಎಕ್ಸ್’ಪ್ರೆಸ್ ರೈಲಿನ ಸೇವೆಯನ್ನು 02.08.2022 ಮತ್ತು 09.08.2022 ರಂದು ರದ್ದು.
24.07.2022 ರ ಪತ್ರಿಕಾ ಪ್ರಕಟಣೆ ಸಂಖ್ಯೆ 117 ರಲ್ಲಿ ತಿದ್ದುಪಡಿ: ರೈಲು ಸಂಖ್ಯೆ 16570 ಕಾಚಿಗುಡ – ಯಶವಂತಪುರ ಸಾಪ್ತಾಹಿಕ ಎಕ್ಸ್’ಪ್ರೆಸ್, ಧರ್ಮಾವರಂ ನಿಲ್ದಾಣಕ್ಕೆ ರಾತ್ರಿ 11.43 ಗಂಟೆಗೆ ಆಗಮಿಸುವುದು (ಈ ಮೊದಲು ಸೂಚಿಸಿದ ಸಮಯ ರಾತ್ರಿ 10.43 ಗಂಟೆ).
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post