ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ನಗರದ ಗೋಕುಲ ರಸ್ತೆಯ ಬಂಜಾರ ಕಾಲೋನಿಯಲ್ಲಿ ಬಂಜಾರ ಸಮುದಾಯದ ವತಿಯಿಂದ ಹೋಳಿ ಹಬ್ಬವನ್ನು ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು.
ಸಾಂಪ್ರದಾಯಿಕ ಪದ್ಧತಿಯಂತೆ ಹೋಳಿ ದಹನ ನೆರವೇರಿಸುವ ಮೂಲಕ ಸಮುದಾಯದ ಬಾಂಧವರು ಹಬ್ಬದ ಮೆರುಗನ್ನು ಹೆಚ್ಚಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ರಾಮಸಿಂಗ್ ಮಹಾರಾಜ್ ಅವರು ಮಾತನಾಡಿ, “ನಮ್ಮ ಪೂರ್ವಜರಿಂದ ಬಂದಿರುವ ಹೋಳಿ ಹಬ್ಬದ ಶ್ರೀಮಂತ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಯುವ ಪೀಳಿಗೆಯು ಇಂತಹ ಆಚರಣೆಗಳ ಮೂಲಕ ತಮ್ಮ ಬೇರುಗಳನ್ನು ಮರೆಯದೆ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು” ಎಂದು ಕಿವಿಮಾತು ಹೇಳಿದರು.
ಈ ಸಂಭ್ರಮಾಚರಣೆಯಲ್ಲಿ ಪಾಂಡುರಂಗ ಪಮ್ಮಾರ, ಶಂಕರ್ ಕಟ್ಟಿಮನಿ, ಶಿವರಾಮ ರಾಥೋಡ, ಮೋತಿಲಾಲ ರಾಥೋಡ, ವೈ.ಡಿ. ನಾಯಕ, ಉಮೇಶ ಚವ್ಹಾಣ, ಅಶೋಕ ಕಾರಭಾರಿ, ಭೀಮಣ್ಣ ರಜಪೂತ, ಸಕ್ಕರಪ್ಪ, ಅಶೋಕ ಪಮ್ಮಾರ ಸೇರಿದಂತೆ ಸಮುದಾಯದ ಅನೇಕ ಮುಖಂಡರು ಹಾಗೂ ಯುವಕರು ಭಾಗವಹಿಸಿದ್ದರು.
ಬಣ್ಣಗಳ ಹಬ್ಬದ ಅಂಗವಾಗಿ ಪರಸ್ಪರ ಬಣ್ಣ ಹಚ್ಚಿ, ಶುಭಾಶಯ ವಿನಿಮಯ ಮಾಡಿಕೊಳ್ಳುವ ಮೂಲಕ ಬಂಜಾರ ಸಮುದಾಯದವರು ಭ್ರಾತೃತ್ವ ಮೆರೆದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















