ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಕಾರ್ತಿಕ ಏಕಾದಶಿ ಉತ್ಸವಕ್ಕೆ ತೆರಳುವ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಮತ್ತು ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ನಿವಾರಿಸುವ ದೃಷ್ಟಿಯಿಂದ, ನೈಋತ್ಯ ರೈಲ್ವೆ ವಲಯವು ಶ್ರೀ ಸಿದ್ಧಾರೂಢ ಸ್ವಾಮಿಜಿ ಹುಬ್ಬಳ್ಳಿ ಮತ್ತು ಪಂಢರಪುರ ನಡುವೆ ಕಾಯ್ದಿರಿಸದ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಕಾರ್ಯಾಚರಣೆ ಮಾಡಲಿದೆ.
ರೈಲು ಸಂಖ್ಯೆ 07351/07352 ಎಸ್ಎಸ್ಎಸ್ ಹುಬ್ಬಳ್ಳಿ-ಪಂಢರಪುರ-ಎಸ್ಎಸ್ಎಸ್ ಹುಬ್ಬಳ್ಳಿ ಕಾಯ್ದಿರಿಸದ ವಿಶೇಷ ಎಕ್ಸ್‌ಪ್ರೆಸ್ (2 ಟ್ರಿಪ್):
ರೈಲು ಸಂಖ್ಯೆ 07351 ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಅಕ್ಟೋಬರ್ 29 ಮತ್ತು ನವೆಂಬರ್ 1, 2025 ರಂದು ಬೆಳಿಗ್ಗೆ 05:10 ಗಂಟೆಗೆ ಹೊರಟು, ಅದೇ ದಿನ ಸಂಜೆ 04:00 ಗಂಟೆಗೆ ಪಂಢರಪುರ ತಲುಪಲಿದೆ. ಮತ್ತೊಂದೆಡೆ, ಮರಳಿ ಬರುವ ರೈಲು ಸಂಖ್ಯೆ 07352 ಪಂಢರಪುರದಿಂದ ಅಕ್ಟೋಬರ್ 29 ಮತ್ತು ನವೆಂಬರ್ 1, 2025 ರಂದು ಸಂಜೆ 06:00 ಗಂಟೆಗೆ ಹೊರಟು, ಮರುದಿನ ಬೆಳಿಗ್ಗೆ 04:00 ಗಂಟೆಗೆ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣಕ್ಕೆ ಆಗಮಿಸಲಿದೆ.

ರೈಲು ಸಂಖ್ಯೆ 07367/07368 ಎಸ್ಎಸ್ಎಸ್ ಹುಬ್ಬಳ್ಳಿ-ಪಂಢರಪುರ-ಎಸ್ಎಸ್ಎಸ್ ಹುಬ್ಬಳ್ಳಿ ಕಾಯ್ದಿರಿಸದ ವಿಶೇಷ ಎಕ್ಸ್‌ಪ್ರೆಸ್ (4 ಟ್ರಿಪ್):
ರೈಲು ಸಂಖ್ಯೆ 07367 ಎಸ್ಎಸ್ಎಸ್.ಹುಬ್ಬಳ್ಳಿ ನಿಲ್ದಾಣದಿಂದ ಅಕ್ಟೋಬರ್ 30, 31, ಮತ್ತು ನವೆಂಬರ್ 2, 3, 2025 ರಂದು ಬೆಳಿಗ್ಗೆ 05:10 ಗಂಟೆಗೆ ಹೊರಟು, ಅಂದೇ ಸಂಜೆ 04:00 ಗಂಟೆಗೆ ಪಂಢರಪುರ ತಲುಪಲಿದೆ. ಮರಳಿ ಬರುವ ರೈಲು ಸಂಖ್ಯೆ 07368 ಪಂಢರಪುರದಿಂದ ಅಕ್ಟೋಬರ್ 30, 31, ಮತ್ತು ನವೆಂಬರ್ 2, 3, 2025 ರಂದು ಸಂಜೆ 06:00 ಗಂಟೆಗೆ ಹೊರಟು, ಮರುದಿನ ಬೆಳಿಗ್ಗೆ 04:00 ಗಂಟೆಗೆ ಎಸ್ಎಸ್ಎಸ್ ಹುಬ್ಬಳ್ಳಿ ಆಗಮಿಸಲಿದೆ. ಈ ರೈಲಿನಲ್ಲಿ 10 ಸ್ಲೀಪರ್ ಕ್ಲಾಸ್/ಸಾಮಾನ್ಯ ದ್ವಿತೀಯ ದರ್ಜೆ ಮತ್ತು 2 ಎಸ್‌ಎಲ್‌ಆರ್/ಡಿ ಬೋಗಿಗಳು ಇರುತ್ತವೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post