ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ನೈಋತ್ಯ ರೈಲ್ವೆ ಹುಬ್ಬಳ್ಳಿ #Southwestern Railway Hubli ವಿಭಾಗದ ವತಿಯಿಂದ ಗದಗ ರಸ್ತೆಯ ಎರಡನೇ ಪ್ರವೇಶ ದ್ವಾರದಲ್ಲಿ ವೀರ ರಾಣಿ ಕಿತ್ತೂರ ಚೆನ್ನಮ್ಮ ಜಯಂತ್ಯೋತ್ಸವ ಆಚರಣೆ ಮಾಡಲಾಯಿತು.
ವಿಭಾಗೀಯ ರೈಲ್ವೆ ಹೆಚ್ಚುವರಿ ವ್ಯವಸ್ಥಾಪಕರಾದ ಪ್ರೇಮಚಂದ್ರ ಅವರು ರಾಣಿ ಚನ್ನಮ್ಮ #Rani Chennamma ಪ್ರತಿಮೆಗೆ ಹೂವಿನ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ವಿಭಾಗೀಯ ರೈಲ್ವೆ ಹಿರಿಯ ವಾಣಿಜ್ಯ ವ್ಯವಸ್ಥಾಪಕರಾದ ಡಾ. ಕಾರ್ತಿಕ್ ವಿ. ಹೆಗಡೆಕಟ್ಟಿ ಮಾತನಾಡಿ, ರಾಣಿ ಕಿತ್ತೂರ ಚನ್ನಮ್ಮ ಶೌರ್ಯದ ಸಂಕೇತವಾಗಿದ್ದು, ಇಡೀ ವಿಶ್ವದಲ್ಲಿ ವಿಶೇಷ ಗೌರವಕ್ಕೆ ಪಾತ್ರವಾಗಿದ್ದಾರೆ. ಅವರ ಮೌಲ್ಯಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಗದಗ ರಸ್ತೆ 2ನೇ ಪ್ರವೇಶ ದ್ವಾರದಲ್ಲಿ ರೈಲ್ವೆ ಪ್ರಯಾಣಿಕರು ಹಾಗೂ ಸ್ಥಳೀಯ ನಾಗರಿಕರೊಂದಿಗೆ ಆಯೋಜಿಸಲಾಗಿದ್ದ ಅಮೃತ ಸಂವಾದ #Amrutha Samvada ಕಾರ್ಯಕ್ರಮ ಯಶಸ್ವಿಯಾಯಿತು.
ಈ ಸಂವಾದದ ಪ್ರಮುಖ ಉದ್ದೇಶ ಪ್ರಯಾಣಿಕರ ಅಭಿಪ್ರಾಯಗಳನ್ನು ತಿಳಿದುಕೊಳ್ಳುವುದು, ಅವರ ಪ್ರತಿಕ್ರಿಯೆಗಳನ್ನು ಸಂಗ್ರಹಿಸುವುದು ಹಾಗೂ ಭಾರತೀಯ ರೈಲ್ವೆಯು ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತು ಮಾಹಿತಿ ಹಂಚಿಕೊಳ್ಳುವುದು ಆಗಿತ್ತು.
ವಿಭಾಗೀಯ ರೈಲ್ವೆ ಹೆಚ್ಚುವರಿ ವ್ಯವಸ್ಥಾಪಕರಾದ ಪ್ರೇಮಚಂದ್ರ ಮಾತನಾಡಿ, ಅಮೃತ ಸಂವಾದವು ರೈಲ್ವೆ ಹಾಗೂ ಪ್ರಯಾಣಿಕರ ಮಧ್ಯೆ ನೇರ ಸಂವಹನಕ್ಕಾಗಿ ಅತ್ಯಂತ ಮಹತ್ವದ ವೇದಿಕೆಯಾಗಿದೆ . ಇದು ಸಾರ್ವಜನಿಕರ ನಿರೀಕ್ಷೆಗಳನ್ನು ಅರಿತು, ಅವರ ಅಭಿಪ್ರಾಯಗಳನ್ನು ಸಂಗ್ರಹಿಸಿ ಭವಿಷ್ಯದ ಅಭಿವೃದ್ಧಿ ಯೋಜನೆಗಳಲ್ಲಿ ಅಳವಡಿಸಲು ಸಹಕಾರ ಆಗಿದೆ ಎಂದರು.

ಸ್ಥಳೀಯರಾದ ಜಯದೇವ ಅವರು ಮಾತನಾಡಿ , ರೈಲ್ವೆ ಇಲಾಖೆ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಇನ್ನು ಹೆಚ್ಚಿನ ರೈಲು ಸೇವೆ ಆರಂಭಿಸಬೇಕು ಎಂದು ಮನವಿ ಸಲ್ಲಿಸಿದರು.
ಖಂಡೋಬ ಕಲ್ಸನ್ನವರ್ ಮಾತನಾಡಿ, ರೈಲ್ವೆ ಇಲಾಖೆ ಕೈಗೊಂಡ ಕಾರ್ಯಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ವಂದೇ ಭಾರತ ರೈಲು ಸಂಚಾರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಅಮೃತ ಸಂವಾದಲ್ಲಿ ಡಾ .ಕಾರ್ತಿಕ್ ವಿ ಹೆಗಡೆಕಟ್ಟಿ , ವಿಭಾಗೀಯ ರೈಲ್ವೆ ಹಿರಿಯ ವಾಣಿಜ್ಯ ವ್ಯವಸ್ಥಾಪಕರು, ಮೃದುಲ್ ಸಕಾರರ್, ಹಿರಿಯ ವಿಭಾಗೀಯ ಯಾಂತ್ರಿಕ ಇಂಜಿನಿಯರ್, ರಾಜಕುಮಾರ್ ಡಿ., ವಿಭಾಗೀಯ ಹೆಚ್ಚುವರಿ ವಾಣಿಜ್ಯ ವ್ಯವಸ್ಥಾಪಕರು ಸೇರಿದಂತೆ ಹಿರಿಯ ರೈಲ್ವೆ ಅಧಿಕಾರಿಗಳು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post