ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಕಿತ್ತೂರು ರಾಣಿ ಚೆನ್ನಮ್ಮ, #Kittu Rani Chennamma ಕಿತ್ತೂರಿನ ವೀರ ರಾಣಿ ಮತ್ತು ಭಾರತದ ಮೊದಲ ಮಹಿಳಾ ಸ್ವಾತಂತ್ರö್ಯ ಹೋರಾಟಗಾರ್ತಿ, ಅವರ ಜನ್ಮ ದಿನಾಚರಣೆಯನ್ನು ಇಂದು ನೈಋತ್ಯ ರೈಲ್ವೆಯ ಪ್ರಧಾನ ಕಛೇರಿಯಾದ ರೈಲ್ ಸೌಧದಲ್ಲಿ ಗೌರವಪೂರ್ವಕವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ, ನೈಋತ್ಯ ರೈಲ್ವೆಯ #Southwestern Railway ಮಹಾ ಪ್ರಬಂಧಕರಾದ ಮುಕುಲ್ ಶರಣ್ ಮಾಥುರ್ ಅವರು ರಾಣಿ ಚೆನ್ನಮ್ಮ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ತಮ್ಮ ನಾಡು ಮತ್ತು ಜನರ ರಕ್ಷಣೆಗಾಗಿ ಬ್ರಿಟಿಷರ ವಿರುದ್ಧ ರಾಣಿ ಚೆನ್ನಮ್ಮ ನಡೆಸಿದ ಅಸಾಧಾರಣ ಶಕ್ತಿ ಮತ್ತು ಶೌರ್ಯದ ಹೋರಾಟವನ್ನು ಸಭಿಕರು ಹೆಮ್ಮೆಯಿಂದ ಸ್ಮರಿಸಿದರು.

ಈ ಕಾರ್ಯಕ್ರಮವು ರಾಣಿ ಚೆನ್ನಮ್ಮ ಅವರ ಮಾತೃಭೂಮಿಗೆ ನೀಡಿದ ಅಚಲ ಭಕ್ತಿ ಮತ್ತು ಅವರ ಶಾಶ್ವತ ಪರಂಪರೆಯನ್ನು ನೆನಪಿಸಿತು. ಇದು ಸತ್ಯ, ನ್ಯಾಯ ಮತ್ತು ಸ್ವಾತಂತ್ರಕ್ಕಾಗಿ ದೃಢವಾಗಿ ನಿಲ್ಲಲು ಮುಂದಿನ ಪೀಳಿಗೆಗಳಿಗೆ ಪ್ರೇರಣೆಯಾಗಿ ಮುಂದುವರೆದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post