ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಲೋಕಸಭೆ ಚುನಾವಣೆ ಐತಿಹಾಸಿಕ ಗೆಲುವಿಗೆ ಬಿಜೆಪಿ ಬೂತ್ ಮಟ್ಟದಿಂದಲೇ ತಯಾರಿ ನಡೆಸಲು ಡಿಜಿಟಲ್ ಜತೆ ಹೆಜ್ಜೆ ಹಾಕಿದ್ದು, ಕಾರ್ಯಕರ್ತರೆಲ್ಲ ಇದಕ್ಕೆ ಸಾಥ್ ನೀಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ Minister Prahlad Joshi ಕರೆ ನೀಡಿದರು.
ಹುಬ್ಬಳ್ಳಿಯಲ್ಲಿ ಏರ್ಪಡಿಸಿದ್ದ ಧಾರವಾಡ ವಿಧಾನಸಭಾ-74 ಕ್ಷೇತ್ರದ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದರು.

ಹೀಗಿದೆ ಬೂತ್ ಮಟ್ಟದಲ್ಲಿ ಡಿಜಿಟಲ್ ವ್ಯವಸ್ಥೆ: ಬಿಜೆಪಿ ಈಗಾಗಲೇ ಬೂತ್ ಮಟ್ಟದಲ್ಲಿ ಪ್ರತಿ ಕಾರ್ಯಕರ್ತರನ್ನು ಮತ್ತು ಕೇಂದ್ರ ಸರ್ಕಾರದ ಫಲಾನುಭವಿಗಳನ್ನು ಡಿಜಿಟಲ್ ವ್ಯವಸ್ಥೆಯೊಳಗೆ ತರಲು ಶ್ರಮಿಸುತ್ತಿದೆ ಎಂದು ಹೇಳಿದರು.
ಬೂತ್ ಮಟ್ಟದ ಕಮಿಟಿಯಲ್ಲಿ ಇರುವವರ ಮೊಬೈಲ್ ನಂಬರ್ ಅನ್ನು ಆಯಾ ಕ್ಷೇತ್ರದ ಸಂಸದರ ಕಚೇರಿ ನಂಬರ್ ಗೆ ಲಿಂಕ್ ಆಗಿರುತ್ತದೆ. ವಾಟ್ಸಾಪ್ ಗ್ರೂಪ್ ರಚನೆಯಾಗುತ್ತದೆ. ಬೂತ್ ಕಮಿಟಿ ಸದಸ್ಯರು ಕೈಗೊಂಡ ಕಾರ್ಯ ಚಟುವಟಿಕೆಗಳ ಫೋಟೋ, ವಿಡಿಯೋವನ್ನು ಇದರಲ್ಲಿ ಅಪ್ ಲೋಡ್ ಮಾಡಬೇಕು. ಅಲ್ಲದೇ, ಕೇಂದ್ರ ಸರ್ಕಾರದ ಯೋಜನೆ ಫಲಾನುಭವಿಗಳನ್ನೂ ಸಂಘಟಿಸುವ ಕೆಲಸ ಮಾಡಬೇಕು ಎಂದು ಸಚಿವರು ಕರೆ ನೀಡಿದರು.

Also read: ರಾಕಿಂಗ್ ಸ್ಟಾರ್ ಯಶ್ ಜೊತೆ ಆಕ್ಟ್ ಮಾಡೋಕೆ ಇಷ್ಟ ಇದೆಯಾ? ಇಲ್ಲಿದೆ ಅವಕಾಶ?
ಏಪ್ರಿಲ್ 8 ಕೊನೆ: ಬೂತ್ ಮಟ್ಟದಲ್ಲಿ ಕೇಂದ್ರ ಸರ್ಕಾರದ ಯೋಜನೆ ಫಲಾನುಭವಿಗಳನ್ನು ಡಿಜಿಟಲ್ ವ್ಯವಸ್ಥೆಗೆ ತರಲು ಏಪ್ರಿಲ್ 8 ಡೆಡ್ ಲೈನ್ ಇದೆ. ಅಷ್ಟರೊಳಗೆ ಬೂತ್ ಕಮಿಟಿ ಸದಸ್ಯರು ಕ್ರಿಯಾಶೀಲರಾಗಿ ಕಾರ್ಯಕರ್ತರ ಸಂಘಟನೆ ಮತ್ತು ಯೋಜನೆ ಫಲಾನುಭವಿಗಳನ್ನು ಸಂಘಟಿಸುವಲ್ಲಿ ಮುಂದಾಗಬೇಕು ಎಂದು ಸಚಿವ ಪ್ರಹ್ಲಾದ ಜೋಶಿ ಸಲಹೆ ನೀಡಿದರು.

ಧಾರವಾಡ -74 ವಿಧಾನಸಭಾ ಕ್ಷೇತ್ರದ ಎಲ್ಲಾ ವಾರ್ಡ್ ಪ್ರಮುಖರೊಂದಿಗೆ ಚರ್ಚೆ ನಡೆಸಿದರು. ಸಭೆಯಲ್ಲಿ ಪ್ರತಿ ವಾರ್ಡ್‌ಗಳಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡು ಮತ್ತೆ ಮೋದಿ ಪ್ರಧಾನಿಯಾಗಿಸಲು ಬಿಜೆಪಿ ಗೆಲ್ಲಿಸುವ ಸಂಕಲ್ಪ ತೊಟ್ಟಿದ್ದೇವೆ ಎಂದು ಭರವಸೆ ನೀಡಿದರು.
ಸಭೆಯಲ್ಲಿ ಶಾಸಕರಾದ ಅರವಿಂದ ಬೆಲ್ಲದ, ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಮಂಡಲ ಅಧ್ಯಕ್ಷ ಬಸವರಾಜ ಗರಗ, ಪಾಲಿಕೆ ಸದಸ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post