ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಹುಬ್ಬಳ್ಳಿ ಹಾಗೂ ಬೆಂಗಳೂರು ವಿಶೇಷ ರೈಲು ಸೇವೆಗಳು ರದ್ದುಗೊಂಡಿವೆ ಎಂಬ ಸುದ್ದಿಗಳು ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ಇವು ಸತ್ಯಕ್ಕೆ ದೂರವಾಗಿದೆ ಎಂದು ನೈಋತ್ಯ ರೈಲ್ವೆ Southern Western Railway ಸ್ಪಷ್ಟೀಕರಣ ನೀಡಿದೆ.
ಈ ಕುರಿತಂತೆ ನೈರುತ್ಯ ರೈಲ್ವೆ ಸ್ಪಷ್ಟೀಕರಣ ಬಿಡುಗಡೆ ಮಾಡಿದ್ದು, ಹುಬ್ಬಳ್ಳಿ-ಬೆಂಗಳೂರು ವಿಶೇಷ ರೈಲು ಸೇವೆಯ ರದ್ದತಿ ಕುರಿತಂತೆ ಕೆಲವು ವೆಬ್ ಹಾಗೂ ಇತರ ಮಾಧ್ಯಮಗಳಲ್ಲಿ ನೈಋತ್ಯ ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿಗಳದ್ದು ಎಂದು ಉಲ್ಲೇಖಿಸಲಾದ ಹೇಳಿಕೆಯ ವರದಿ ಸತ್ಯಕ್ಕೆ ದೂರವಾಗಿರುತ್ತದೆ. ಅಲ್ಲದೇ ಸಾರ್ವಜನಿಕರಿಗೆ ತಪ್ಪು ಮಾಹಿತಿಯನ್ನು ನೀಡುವಂತಿದೆ ಎಂದಿದೆ.,
ಪತ್ರಿಕಾ ಪ್ರಕಟಣೆಯಲ್ಲಾಗಲಿ ಅಥವಾ ಯಾವುದೇ ವಾಹಿನಿಗೆ ನೈಋತ್ಯ ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಈ ರೀತಿಯ (ಶಕ್ತಿ ಯೋಜನೆಗೆ ಸಂಬಂಧಿಸಿದ) ಹೇಳಿಕೆ ನೀಡಿರುವುದಿಲ್ಲ ಎಂದಿದೆ.
Also read: ಸಣ್ಣ ಕ್ಯಾಂಟೀನ್’ನಲ್ಲಿ ಚಹಾ ಸವಿಯುತ್ತಾ ಜನರ ಕುಶಲೋಪರಿ ವಿಚಾರಿಸಿದ ಸಂಸದ ರಾಘವೇಂದ್ರ
ಇನ್ನು, ವಿಶೇಷ ರೈಲು ಸೇವೆಗಳನ್ನು ಟ್ರೈನ್ ಆನ್ ಡಿಮಾನ್ಡ್(ಬೇಡಿಕೆ ಆಧಾರಿತ ರೈಲುಗಳಾಗಿ) ತಾತ್ಕಾಲಿಕ ಅವಧಿಗೆ ಓಡಿಸಲಾಗುತ್ತದೆ. ಹಬ್ಬದ ಸಂದರ್ಭದಲ್ಲಿ, ರಜಾ ದಿನದಂತಹ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಇರುವಾಗ ಸಾರ್ವಜನಿಕರ ಅನುಕೂಲದ ದೃಷ್ಠಿಯಿಂದ ವಿಶೇಷ ರೈಲುಗಳನ್ನು ಓಡಿಸಲಾಗುತ್ತದೆ. ಬೇಡಿಕೆಯನ್ನು ಆಧರಿಸಿ ಸೇವೆಯನ್ನು ಪ್ರಾರಂಭ/ರದ್ದುಗೊಳಿಸುವ ನಿರ್ಧಾರವನ್ನು ಸೂಕ್ತವಾಗಿ ಪರಾಮರ್ಷಿಸಿ ತೆಗೆದುಕೊಳ್ಳಲಾಗುತ್ತದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ರಾಜ್ಯದ ಹಾಗೂ ದೇಶದ ನಾನಾ ಕಡೆಗೆ 20ಕ್ಕೂ ಹೆಚ್ಚು ವಿಶೇಷ ರೈಲುಗಳನ್ನು ಓಡಿಸಲಾಗಿತ್ತು ಎಂಬುದನ್ನು ಉಲ್ಲೇಖಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post