ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಜಮ್ಮು ಕಾಶ್ಮೀರದಲ್ಲಿ ರಾಹುಲ್ ಬಾಬಾ ಅಲ್ಲ ಅವರ ತಾತ, ಮುತ್ತಾತ ಬಂದ್ರೂ ಆರ್ಟಿಕಲ್ 370 ವಾಪಸ್ ತರಲು ಆಗಲ್ಲ ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ ಜೋಶಿ #Pralhad Joshi ಹೇಳಿದರು.
ಧಾರವಾಡದಲ್ಲಿ ಬಿಜೆಪಿ ಸಮಾವೇಶ ಉದ್ದೇಶಿಸಿ ಮಾತನಾಡಿ, ರಾಹುಲ್ ಗಾಂಧಿ #Rahul Gandhi ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆರ್ಟಿಕಲ್ 370 ಯನ್ನು ವಾಪಸ್ ತರುತ್ತೇವೆ ಎಂದೇ ಘೋಷಿಸುತ್ತಿದ್ದಾರೆ. ಆದರೆ ಅದು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.
ಪ್ರಧಾನಿ ಅಭ್ಯರ್ಥಿ ಘೋಷಿಸಿ ಮೊದಲು:
ಕಾಂಗ್ರೆಸ್ ಪಕ್ಷ, ಇಂಡಿ ಕೂಟ ತನ್ನ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸುವ ಧೈರ್ಯ ತೋರಲಿ ಮೊದಲು ಎಂದು ಜೋಶಿ ಸವಾಲೆಸೆದರು.
ಬಿಜೆಪಿ-NDA ಒಕ್ಕೂಟ ನಮ್ಮ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ #Narendra Modi ಎಂದು ಘೋಷಿಸಿದೆ. ಆದರೆ, ಕಾಂಗ್ರೆಸ್- ಇಂಡಿ ಕೂಟ ಪ್ರಧಾನಿ ಅಭ್ಯರ್ಥಿ ಯಾರೆಂದು ಘೋಷಿಸಲಿ ನೋಡೋಣ ಎಂದರು.
ರಾಹುಲ್ ಬಾಬಾ ಮೇಲೆ ಇಂಡಿ ಕೂಟದ ಯಾರಿಗೂ ನಂಬಿಕೆಯಿಲ್ಲ. ಸ್ವತಃ ಕಾಂಗ್ರೆಸ್ಸಿಗರಿಗೇ ವಿಶ್ವಾಸವಿಲ್ಲ. ಇಂಡಿ ಕೂಟದ ಸ್ಥಿತಿ ಇಂದು “ದಿಲ್ಲಿ ಮೇ ದೋಸ್ತಿ- ಕಲ್ಕತ್ತಾ ಮೇ ಕುಸ್ತಿ” ಎನ್ನುವಂತಿದೆ ಎಂದು ಜೋಶಿ ಲೇವಡಿ ಮಾಡಿದರು.
ದೇಶ ವಿರೋಧಿ ನಂಟು: ದೇಶ ವಿರೋಧಿಗಳ ಜತೆ, ಪಿಎಫ್ ಐನೊಂದಿಗೆ ಕಾಂಗ್ರೆಸ್ ನಂಟು ಬೆಳೆಸಿಕೊಂಡಿದೆ. ಕಾಂಗ್ರೆಸ್ ಧ್ವಜದಲ್ಲಿ ಕೇಸರಿ ಇರುವ ಕಾರಣಕ್ಕೆ ರಾಹುಲ್ ಗಾಂಧಿ #Rahul Gandhi ನಾಮಪತ್ರ ಸಲ್ಲಿಕೆ ವೇಳೆ ಕೇರಳದಲ್ಲಿ ಮುಸ್ಲಿಂ ಲೀಗ್ ಕಾಂಗ್ರೆಸ್ ಧ್ವಜ ಬಿಟ್ಟು ಬರುವಂತೆ ಹೇಳಿತು. ರಾಹುಲ್ ಮುಸ್ಲಿಂ ಲೀಗ್ ಧ್ವಜ ಹಿಡಿದೇ ಹೋದರು. ಇದು ನಮ್ಮ ದೇಶದ ದುರ್ದೈವ ಎಂದು ಜೋಶಿ ಹೇಳಿದರು.
Also read: ಕಿಡ್ನಾಪ್ ಪ್ರಕರಣ | ದೇವೇಗೌಡರ ನಿವಾಸದಿಂದಲೇ ಮಾಜಿ ಸಚಿವ ರೇವಣ್ಣ ಅರೆಸ್ಟ್
ಸಿದ್ದರಾಮಯ್ಯ ರೂಪದಲ್ಲಿದ್ದಾರೆ ಹಿಂದೂ ವಿರೋಧಿಗಳು: ಸಿಎಂ ಸಿದ್ದರಾಮಯ್ಯ #CM Siddaramaiah ಅಕ್ಕ-ಪಕ್ಕದಲ್ಲಿ ಇರುವವರು ಹಿಂದೂ ಧರ್ಮವನ್ನು ಸಂಪೂರ್ಣ ನಿರ್ನಾಮ ಮಾಡುತ್ತೇವೆಂದು ಹೇಳಿದ್ದಾರೆ. ಸಿದ್ದರಾಮಯ್ಯ ಅವರ ರೂಪದಲ್ಲೇ ಇದ್ದಾರೆ ಹಿಂದೂ ವಿರೋಧಿಗಳು ಎಂದು ಆರೋಪಿಸಿದರು.
ಜಗತ್ತಿನ ಕಣ್ಣು ಕುಕ್ಕುವಂತಿದೆ ಭಾರತದ ಅಭಿವೃದ್ಧಿ: ಭಾರತದಲ್ಲಿ ಆರ್ಥಿಕ ಸುಧಾರಣೆ ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡ ವಿಕಸಿತ ಭಾರತದತ್ತದ ಹೆಜ್ಜೆ ಜಗತ್ತಿನ ಕಣ್ಣು ಕುಕ್ಕುವಂತಿದೆ. ಸುರಕ್ಷಿತ ಭಾರತ ನಿರ್ಮಾಣಕ್ಕಾಗಿ ಮೋದಿ ಸಂಕಲ್ಪ ತೊಟ್ಟಿದ್ದಾರೆ. ಇಂಥ ಒಬ್ಬ ಸಂತನನ್ನು ಮತ್ತೆ ಪ್ರಧಾನಿಯಾಗಿಸಲು ಬಿಜೆಪಿಎನ್ನು ಗೆಲ್ಲಿಸಿ ಎಂದು ಜೋಶಿ ಮನವಿ ಮಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post