ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ನೈಋತ್ಯ ರೈಲ್ವೆಯ #SouthWesternRailway ವ್ಯಾಪ್ತಿಯಲ್ಲಿನ ಹಲವು ರೈಲುಗಳಲ್ಲಿ ಮಾರ್ಗ ಬದಲಾವಣೆ, ಒಂದು ರೈಲು ರದ್ದತಿ, ರೈಲುಗಳ ನಿಯಂತ್ರಣ ಹಾಗೂ ರೈಲುಗಳ ಮರು ವೇಳಾಪಟ್ಟಿಯಲ್ಲಿ ಪ್ರಕಟಿಸಲಾಗಿದೆ.
ಯಾವ ರೈಲುಗಳಲ್ಲಿ ಬದಲಾವಣೆ?
ಮಾರ್ಗ ಬದಲಾವಣೆ: ರೈಲು ಸಂಖ್ಯೆ 06246 ಹರಿಹರ-ಹೊಸಪೇಟೆ #Hospet ಪ್ಯಾಸೆಂಜರ್ ರೈಲು ಜನವರಿ 07, 14, 21 ಮತ್ತು 28, 2025 ರಿಂದ ಹರಿಹರ, ಅಮರಾವತಿ ಕಾಲೋನಿ ತೆಲಿಗಿ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಈ ರೈಲು ದಾವಣಗೆರೆ #Davanagere ಮತ್ತು ತೋಳಹುಣಸೆ ನಿಲ್ದಾಣಗಳಲ್ಲಿ ತನ್ನ ನಿಯಮಿತ ನಿಲುಗಡೆಯನ್ನು ತಪ್ಪಿಸುತ್ತದೆ.
ರೈಲುಗಳ ರದ್ದತಿ: ರೈಲು ಸಂಖ್ಯೆ 06245 ಹೊಸಪೇಟೆ – ಹರಿಹರ ಪ್ಯಾಸೆಂಜರ್ ರೈಲು ಫೆಬ್ರವರಿ 03, 2025 ರಂದು ಒಂದು ದಿನ ರದ್ದಾಗಲಿದೆ.
ರೈಲು ಸಂಖ್ಯೆ 06246 ಹರಿಹರ- ಹೊಸಪೇಟೆ ಪ್ಯಾಸೆಂಜರ್ ರೈಲು ಫೆಬ್ರವರಿ 04, 2025 ರಂದು ಒಂದು ದಿನ ರದ್ದಾಗಲಿದೆ.
ರೈಲುಗಳ ನಿಯಂತ್ರಣ: ರೈಲು ಸಂಖ್ಯೆ 16213 ಅರಸೀಕೆರೆ – ಹುಬ್ಬಳ್ಳಿ ಡೈಲಿ ಎಕ್ಸ್’ಪ್ರೆಸ್ ರೈಲು ಜನವರಿ 7 21, 2025 ರಂದು ಮಾರ್ಗ ಮಧ್ಯದಲ್ಲಿ 75 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
ರೈಲು ಸಂಖ್ಯೆ 16213 ಅರಸೀಕೆರೆ -ಹುಬ್ಬಳ್ಳಿ ಡೈಲಿ ಎಕ್ಸ್’ಪ್ರೆಸ್ ರೈಲು ಫೆಬ್ರವರಿ 4 ರಂದು ಮಾರ್ಗ ಮದ್ಯದಲ್ಲಿ 60 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
ರೈಲುಗಳ ಮರು ವೇಳಾಪಟ್ಟಿ: ರೈಲು ಸಂಖ್ಯೆ 06246 ಹರಿಹರ-ಹೊಸಪೇಟೆ ಡೈಲಿ ಪ್ಯಾಸೆಂಜರ್ ರೈಲು ಫೆಬ್ರವರಿ 11, 2025 ರಂದು ಹರಿಹರ ನಿಲ್ದಾಣದಿಂದ 45 ನಿಮಿಷ ತಡವಾಗಿ ಹೊರಡಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post