ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕುಡಿದ ಅಮಲಿನಲ್ಲಿ ಆಟೋ #Auto ಚಾಲನೆ ಮಾಡುತ್ತಿದ್ದ ಚಾಲಕನಿಂದ ತಪ್ಪಿಸಿಕೊಳ್ಳುವ ಸಲುವಾಗಿ ಚಲಿಸುತ್ತಿದ್ದ ಆಟೋದಿಂದ ಮಹಿಳೆಯೊಬ್ಬರು ಹೊರಕ್ಕೆ ಜಿಗಿದಿರುವ ಘಟನೆ ಬೆಂಗಳೂರಿನಲ್ಲಿ #Bengaluru ನಡೆದಿದೆ.
ಘಟನೆ ಕುರಿತಂತೆ ಮಹಿಳೆಯ ಪತಿ ದೂರು ದಾಖಲಿಸಿದ್ದು, ಆಟೋ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
Also Read>> ಯಕಶ್ಚಿತ್ ಒಂದು ಸೌತೆಕಾಯಿ ವಿಚಾರಕ್ಕೆ ಸ್ವಂತ ತಂಗಿಯನ್ನೇ ಕೊಂದ ಕಿರಾತಕ ಅಣ್ಣ
ಘಟನೆ ನಡೆದಿದ್ದು ಹೇಗೆ?
ತಮ್ಮ ಪತ್ನಿ ಹೊರಮಾವಿನಿಂದ ಬೆಂಗಳೂರಿನ ಥಣಿಸಂಧ್ರಕ್ಕೆ ನಮ್ಮ ಯಾತ್ರಿ ಮೂಲಕ ಆಟೋ ಬುಕ್ ಮಾಡಿದ್ದರು. ಆದರೆ ಡ್ರೈವರ್ ಕುಡಿದು ಹೆಬ್ಬಾಳದ ಬಳಿ ತಪ್ಪಾದ ಸ್ಥಳಕ್ಕೆ ಕರೆದೊಯ್ದಿದ್ದಾನೆ. ನಿಲ್ಲಿಸುವಂತೆ ಎಷ್ಟೇ ಕೇಳಿಕೊಂಡರೂ ಆತ ಕೇಳಲಿಲ್ಲ. ಹೀಗಾಗಿ, ತನ್ನ ರಕ್ಷಣೆ ಮಾಡಿಕೊಳ್ಳಲು ಆಕೆ ಆಟೋದಿಂದ ಜಿಗಿಯಬೇಕಾಯಿತು ಎಂದು ಸಾಮಾಜಿಕ ಜಾಲತಾಣದಲ್ಲಿ #SocialMedia ಆರೋಪಿಸಿದ್ದಾರೆ.
ತುರ್ತು ಸಂದರ್ಭದಲ್ಲಿ ಸಂಪರ್ಕಿಸಲು ನಮ್ಮ ಯಾತ್ರಿ ಕಸ್ಟಮರ್ ಕೇರ್ ನಂಬರ್ ಸಹ ಇಲ್ಲ ಎಂದು ವ್ಯಕ್ತಿ ದೂರಿದ್ದಾರೆ.
ನಮ್ಮ ಯಾತ್ರಿ ಸಂಸ್ಥೆಯು ಗ್ರಾಹಕರ ಕುಂದುಕೊರತೆಗಳನ್ನು ಆಲಿಸಲು ಸೂಕ್ತ ವ್ಯವಸ್ಥೆ ಇರುವುದಿಲ್ಲ. ಇದು ಆ ಸಂಸ್ಥೆಯ ದೊಡ್ಡ ಸಮಸ್ಯೆಯಾಗಿದೆ ಎಂದು ಆರೋಪಿಸಿದ್ದಾರೆ.
ಕಂಪೆನಿಯ ಮೊರೆ ಹೋದರೆ ನಮ್ಮನ್ನು 24 ಗಂಟೆಗಳ ಕಾಲ ನಿರೀಕ್ಷಿಸುವಂತೆ ಕೇಳುತ್ತದೆ. ತುರ್ತು ಪರಿಸ್ಥಿತಿಯಲ್ಲಿ 24 ಗಂಟೆಗಳ ಕಾಲ ಕಾಯುವುದು ಹೇಗೆ? ಮಹಿಳೆಯರು ಎಷ್ಟು ಸುರಕ್ಷಿತರಾಗಿದ್ದಾರೆ ಎಂದು ಬೆಂಗಳೂರು ಪೊಲೀಸರನ್ನು ಪ್ರಶ್ನಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post