ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಭಾರತದಲ್ಲಿ ವಕ್ಫ್ #Waqf ಕಾನೂನು ಮಾಡಿದ್ದೇ ತಪ್ಪು. ಮೊದಲಿದನ್ನು ತೆಗೆದು ಹಾಕುವುದೇ ಸೂಕ್ತ” ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ #Pralhad Joshi ಹೇಳಿದರು.
ಧಾರವಾಡದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ನೆಹರು ಕಾಲದಲ್ಲಿ ಕಾಂಗ್ರೆಸ್ ಅದೇಕೆ ವಕ್ಫ್ ಕಾನೂನು ಮಾಡಿತೋ? ಗೊತ್ತಿಲ್ಲ. ಆದರೆ, 2013ರಲ್ಲಿ ವಕ್ಫ್ ಗೆ ಮತ್ತೆ ಅಪರಿಮಿತ ಅಧಿಕಾರ ಕೊಟ್ಟಿದ್ದೇಕೆ? ಎಂದು ಆಕ್ಷೇಪಿಸಿದರು.

Also read: 900 Days and Counting: Minister NS Boseraju Demands Urgent Action on AIIMS for Raichur
ವಕ್ಫ್ ಕಾನೂನು ತಿದ್ದುಪಡಿ ಅಗತ್ಯ: ಪ್ರಸ್ತುತ ಬೆಳವಣಿಗೆ ನೋಡಿದರೆ ಕಡೇ ಪಕ್ಷ ವಕ್ಫ್ ಕಾನೂನು ತಿದ್ದುಪಡಿ ತರುವ ಅವಶ್ಯಕತೆಯಿದೆ. ಅಲ್ಲಾನ ನೆಪದಲ್ಲಿ ವಕ್ಫ್ ಮೂಲಕ ಭೂ ಕಬಳಿಸುವವರಿಗೆ ಕಡಿವಾಣ ಹಾಕಬೇಕಿದೆ ಎಂದು ಜೋಶಿ ಹೇಳಿದರು.

ನಾವಿರುವ ಮನೆ, ನಿಂತ ನೆಲವೂ ತನ್ನದೇ ಎನ್ನಬಹುದು ವಕ್ಫ್: ಮುಂದೊಂದು ದಿನ ನಾವಿರುವ ಮನೆ, ನಿಂತ ನೆಲವನ್ನೇ ವಕ್ಫ್ ತನ್ನ ಆಸ್ತಿ ಎಂದರೂ ಅಚ್ಚರಿಯಿಲ್ಲ. ಅಷ್ಟೊಂದು ಅಪರಿಮಿತ ಅಧಿಕಾರ ಕೊಟ್ಟು ತುಷ್ಟೀಕರಣದ ರಾಜಕಾರಣ ಮಾಡುತ್ತಿದೆ ಕಾಂಗ್ರೆಸ್. ಯಾವುದೇ ಕಾರಣಕ್ಕೂ ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post