No Result
View All Result
mysuru rss journey exhibition showcasing its history
English Articles

A Century of RSS Through a Unique Exhibition

by kalpa News
September 17, 2026
0

Kalpa Media House  |  Mysuru | A century of service. A hundred years of organisation, sacrifice and social work And...

Read moreDetails
Mysuru say no to drugs walkathon dcp harsha students

BEDA BRO Should Be Everyone’s Goal : Mysuru DCP Priyamvada calls for Drug-Free Society

September 17, 2026
Sparsh Hospital Sarjapur Bengaluru 1st Anniversary

SPARSH Hospital Sarjapur Celebrates 1st Anniversary, Expands Advanced Healthcare Access

September 16, 2026
Hero Motocorp Glamour x Integrated ABS

Hero Motocorp Launches Glamour x With Integrated-ABS

September 12, 2026
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
  • Advertise With Us
  • Grievances
  • About Us
  • Contact Us
Thursday, September 17, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Rail Dairy (ರೈಲ್ವೆ ಸುದ್ದಿಗಳು)

ಸರಕು ಸಾಗಣೆ, ಆದಾಯ ವೃದ್ಧಿಯಲ್ಲಿ ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗ ಮೈಲಿಗಲ್ಲು ದಾಖಲೆ

kalpa News by kalpa News
April 2, 2026
in Rail Dairy (ರೈಲ್ವೆ ಸುದ್ದಿಗಳು)
0
ಸರಕು ಸಾಗಣೆ, ಆದಾಯ ವೃದ್ಧಿಯಲ್ಲಿ ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗ ಮೈಲಿಗಲ್ಲು ದಾಖಲೆ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಹುಬ್ಬಳ್ಳಿ  |

ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗವು South Western Railway Hubli division 2025–26ನೇ ಆರ್ಥಿಕ ವರ್ಷದಲ್ಲಿ ಅತ್ಯುತ್ತಮ ಸಾಧನೆ ದಾಖಲಿಸಿದೆ.

ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಬೇಲಾ ಮೀನಾ ಅವರ, ದೂರದೃಷ್ಟಿಯ ಆಡಳಿತದಲ್ಲಿ ಸರಕು ಸಾಗಣೆ, ಆದಾಯ ಸೃಷ್ಟಿ, ಸಮಯಪಾಲನೆ, ಮೂಲಸೌಕರ್ಯ ಬಲಪಡಿಸುವಿಕೆ ಹಾಗೂ ರೈಲ್ವೆ ಸಂಚಾರ ಕಾರ್ಯಾಚರಣೆಯಲ್ಲಿ ಅತ್ಯುತ್ತಮ ಮೈಲಿಗಲ್ಲು ದಾಖಲಿಸಿದೆ.
ಸರಕು ಸಾಗಣೆ-ಆದಾಯ ಸಂಗ್ರಹಣೆಯಲ್ಲಿ ವೃದ್ಧಿ

ಹುಬ್ಬಳ್ಳಿ ವಿಭಾಗವು 2025–26ರಲ್ಲಿ 39.498 ಮಿಲಿಯನ್ ಟನ್ (MT) ಸರಕು ಸಾಗಣೆ ಮಾಡುವ ಮೂಲಕ ಇತಿಹಾಸದಲ್ಲೇ ಗರಿಷ್ಠ ಸಾಧನೆ ದಾಖಲಿಸಿದೆ. ಕಳೆದ ವರ್ಷದ 32.61 MT ಗಿಂತ ಇದು 22% ಹೆಚ್ಚಳವಾಗಿದೆ. 10 MT ಗಿಂತ ಹೆಚ್ಚಿನ ಸರಕು ಸಾಗಣೆ ನಡೆಸುವ ಭಾರತೀಯ ರೈಲ್ವೆ ವಿಭಾಗಗಳ ಪೈಕಿ ಅತ್ಯಧಿಕ ಹೆಚ್ಚುವರಿ ಸರಕು ಸಾಗಣೆ ಸಾಧಿಸಿದ ವಿಭಾಗವಾಗಿದೆ. ಡಿಸೆಂಬರ್ 2025ರಲ್ಲಿ 3.783 MT ಸರಕು ಸಾಗಣೆ ಮೂಲಕ ಗರಿಷ್ಠ ಸಾರ್ವಕಾಲಿಕ ಮಾಸಿಕ ದಾಖಲೆ ನಿರ್ಮಿಸಲಾಗಿದೆ.

2025–26ನೇ ಆರ್ಥಿಕ ವರ್ಷದಲ್ಲಿ ಹುಬ್ಬಳ್ಳಿ ವಿಭಾಗವು 112.658 ಮಿಲಿಯನ್ ಟನ್ (MT) Cargo ಸರಕು ನಿರ್ವಹಣೆಯಲ್ಲಿ ಗರಿಷ್ಠ ದಾಖಲೆಯನ್ನು ನಿರ್ಮಿಸಿದೆ. ಈ ಸಾಧನೆ ಉತ್ತಮ ಟರ್ಮಿನಲ್ ದಕ್ಷತೆ, ಸುಧಾರಿತ ಸರಕು ಕಾರ್ಯಾಚರಣೆ ಮತ್ತು ಗ್ರಾಹಕರೊಂದಿಗೆ ಬಲವಾದ ಸಂವಹನವನ್ನು ಪ್ರತಿಬಿಂಬಿಸುತ್ತದೆ.

2025–26ರಲ್ಲಿ ಹುಬ್ಬಳ್ಳಿ ವಿಭಾಗವು ಪ್ರಯಾಣಿಕರ ಆದಾಯ ₹565.73 ಕೋಟಿಗೆ ಏರಿಕೆಯಾಗಿ, ಕಳೆದ ವರ್ಷದ ₹522.94 ಕೋಟಿಯೊಂದಿಗೆ ಹೋಲಿಸಿದರೆ ಇದು 8.18% ಹೆಚ್ಚಳವಾಗಿದೆ. ಸರಕು ಸಾಗಣೆ ಆದಾಯ ₹3996.28 ಕೋಟಿಗೆ ಏರಿಕೆಯಾಗಿದ್ದು, ಕಳೆದ ವರ್ಷದ ₹3437.06 ಕೋಟಿಯೊಂದಿಗೆ ಹೋಲಿಸಿದರೆ 16.27% ಹೆಚ್ಚಳವಾಗಿದೆ.
ವಿಶೇಷ ರೈಲುಗಳು-ಸುಧಾರಿತ ಸಮಯಪಾಲನೆ

ಮೇಲ್/ಎಕ್ಸ್ಪ್ರೆಸ್ ರೈಲುಗಳ ಸಮಯಪಾಲನೆ ಕಳೆದ ವರ್ಷದ 86.74% ಗಿಂತ ಈ ಆರ್ಥಿಕ ವರ್ಷದಲ್ಲಿ  93.97%ಕ್ಕೆ ಏರಿಕೆಯಾಗಿ,  ಪ್ರಯಾಣಿಕರ ಹೆಚ್ಚಿದ ಬೇಡಿಕೆಯನ್ನು ಪೂರೈಸಲು ಏಪ್ರಿಲ್ 2025ರಿಂದ ಮಾರ್ಚ್ 2026ರವರೆಗೆ 328 ವಿಶೇಷ ರೈಲುಗಳನ್ನು ಓಡಿಸಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 233 ವಿಶೇಷ ರೈಲುಗಳನ್ನು ಸಂಚರಿಸಲಾಗಿದ್ದು, ಇದು  40% ಹೆಚ್ಚಳವಾಗಿದೆ.

2025–26ರಲ್ಲಿ ಹಳಿ ನವೀಕರಣ,  ನಿರ್ವಹಣೆ, ಸಿಗ್ನಲಿಂಗ್ ಮತ್ತು ವಿದ್ಯುತ್ ವ್ಯವಸ್ಥೆ ಸುಧಾರಣೆ  ಕೈಗೊಳ್ಳಲಾಗಿದೆ.  ಇದರಿಂದ ಪ್ರಯಾಣಿಕರಲ್ಲಿ  ಸುರಕ್ಷತೆ ಮತ್ತು ವಿಶ್ವಾಸಾರ್ಹತೆ ಹೆಚ್ಚಿಸಲಾಗಿದೆ.
ಕ್ಯಾಸಲ್ ರಾಕ್–ಕುಲೇಮ್ ಘಾಟ್ ವಿಭಾಗದ ಪರಿವರ್ತನೆ

ಘಾಟ್ ವಿಭಾಗದಲ್ಲಿ ಡಿಸೆಂಬರ್ 2025ರಲ್ಲಿ 688 ರೈಲು ಸಂಚಾರಗಳು ನಡೆದಿದ್ದು, ಇದು ಗರಿಷ್ಠ ದಾಖಲೆ ಆಗಿದೆ. ಕ್ಯಾಸಲ್ ರಾಕ್–ಕುಲೇಮ್ ಘಾಟ್ ವಿಭಾಗದಲ್ಲಿ ಇಳಿಜಾರು ಪ್ರದೇಶದಲ್ಲಿ  19 ಕಿ.ಮೀ. ಹಳಿ ನವೀಕರಣ ಮತ್ತು 20 ಕಿ.ಮೀ. ಬ್ಯಾಲಸ್ಟ್ ಕ್ಲೀನಿಂಗ್ ಕಾರ್ಯಗಳನ್ನು  ಪೂರ್ಣಗೊಳಿಸಲಾಗಿದೆ. ಇದರಿಂದ ಹಳಿ  ಬಲವರ್ಧನೆಗೆ ಸಾಧಿಸಲಾಗಿದೆ.

ಸ್ಕ್ರಾಪ್ ವಿಲೇವಾರಿ 10,547 MT  ವಿಲೇವಾರಿ  ಮಾಡಲಾಗಿದೆ,  ಇದು ಕಳೆದ ವರ್ಷದ 8,990 MT ಗಿಂತ 17.76% ಹೆಚ್ಚಳವಾಗಿದೆ. ಸ್ಕ್ರಾಪ್ ದಿಂದ   ವಿಭಾಗಕ್ಕೆ  ₹32 ಕೋಟಿ ಆದಾಯ ಗಳಿಸಲಾಗಿದೆ.
ಹುಬ್ಬಳ್ಳಿ ವಿಭಾಗಕ್ಕೆ ಐತಿಹಾಸಿಕ ವರ್ಷ

ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ 146.5 ಕಿ.ಮೀ. ಹಳಿಯನ್ನು 25 ಟನ್ ಅಕ್ಷಭಾರ (25T Axle Load)ಕ್ಕೆ ಅಪ್ಗ್ರೇಡ್ ಮಾಡಲಾಗಿದ್ದು, ಇದರ ಮೂಲಕ ಭಾರೀ ಸರಕು ರೈಲುಗಳ ಸಂಚಾರ ಸಾಮರ್ಥ್ಯ ಹೆಚ್ಚಿಸಲಾಗಿದೆ. 264.4 ರೂಟ್ ಕಿ.ಮೀ. ವ್ಯಾಪ್ತಿಯಲ್ಲಿ ಗರಿಷ್ಠ ವೇಗವನ್ನು 110 ಕಿಮೀ/ಗಂಗೆ ಹೆಚ್ಚಿಸಲಾಗಿದ್ದು, 15 ನಿಲ್ದಾಣಗಳಲ್ಲಿ ಲೂಪ್ ಲೈನ್ ವೇಗವನ್ನು ಹೆಚ್ಚಿಸುವ ಮೂಲಕ ರೈಲುಗಳ ಚಲನವಲನ ಸುಗಮಗೊಳಿಸಲಾಗಿದೆ ಹಾಗೂ ಸಮಯಪಾಲನೆ ಸುಧಾರಿಸಲಾಗಿದೆ.

ಇದಲ್ಲದೆ, 16 ಪರ್ಮನೆಂಟ್ ಸ್ಪೀಡ್ ರಿಸ್ಟ್ರಿಕ್ಷನ್ಗಳನ್ನು ತೆಗೆದುಹಾಕಲಾಗಿದ್ದು, 69 ದೋಷಪೂರಿತ ಟ್ರ್ಯಾಕ್ ವಿನ್ಯಾಸಗಳನ್ನು ಸರಿಪಡಿಸಲಾಗಿದೆ. ಜೊತೆಗೆ 16.65 ಕಿ.ಮೀ. ಸುರಕ್ಷತಾ ಬೇಲಿಯನ್ನು ಅಳವಡಿಸುವ ಮೂಲಕ ಸುರಕ್ಷತೆ ಮತ್ತಷ್ಟು ಬಲಪಡಿಸಲಾಗಿದೆ.

ಹುಬ್ಬಳ್ಳಿ ವಿಭಾಗದಲ್ಲಿ ಈ ಸಮಗ್ರ  ಸುಧಾರಣಾ ಕ್ರಮಗಳಿಂದ ರೈಲು ಸಂಚಾರದ ದಕ್ಷತೆ, ಸುರಕ್ಷತೆ ಮತ್ತು ಸರಕು ಸಾಗಣೆ ಸೇರಿದಂತೆ ಹಲವು ವಿಭಾಗದಲ್ಲಿ  ಗಮನಾರ್ಹವಾಗಿ ಸುಧಾರಣೆಯಾಗಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

https://kalpa.news/wp-content/uploads/2024/04/VID-20240426-WA0008.mp4

 

Tags: HubballiKannada NewsKannada News LiveKannada News OnlineKannada News WebsiteKannada WebsiteLatest News KannadaNews in KannadaNews KannadaSouth Western Railway Hubli Divisionನೈಋತ್ಯ ರೈಲ್ವೆಯ ಹುಬ್ಬಳ್ಳಿಹುಬ್ಬಳ್ಳಿ
Share198Tweet124Send
Aniruddha Vasishta S R

Aniruddha Vasishta S R

Editor-in-Chief

Previous Post

2025–26ನೇ ಹಣಕಾಸು ವರ್ಷದಲ್ಲಿ ನೈಋತ್ಯ ರೈಲ್ವೆ ಗಳಿಸಿದ ಒಟ್ಟು ಆದಾಯವೆಷ್ಟು ಗೊತ್ತಾ?

Next Post

ವಾಸ್ತವತೆಯ ವಿಮರ್ಶಿಸುವ ಕುತೂಹಲ ಬೆಳೆಸಿಕೊಳ್ಳಿ | ನಾರಾಯಣ ರಾವ್

kalpa News

kalpa News

Next Post
ವಾಸ್ತವತೆಯ ವಿಮರ್ಶಿಸುವ ಕುತೂಹಲ ಬೆಳೆಸಿಕೊಳ್ಳಿ | ನಾರಾಯಣ ರಾವ್

ವಾಸ್ತವತೆಯ ವಿಮರ್ಶಿಸುವ ಕುತೂಹಲ ಬೆಳೆಸಿಕೊಳ್ಳಿ | ನಾರಾಯಣ ರಾವ್

Leave a Reply Cancel reply

Your email address will not be published. Required fields are marked *

No Result
View All Result
mysuru rss journey exhibition showcasing its history
English Articles

A Century of RSS Through a Unique Exhibition

by kalpa News
September 17, 2026
0

Kalpa Media House  |  Mysuru | A century of service. A hundred years of organisation, sacrifice and social work And...

Read moreDetails
Mysuru say no to drugs walkathon dcp harsha students

BEDA BRO Should Be Everyone’s Goal : Mysuru DCP Priyamvada calls for Drug-Free Society

September 17, 2026
Sparsh Hospital Sarjapur Bengaluru 1st Anniversary

SPARSH Hospital Sarjapur Celebrates 1st Anniversary, Expands Advanced Healthcare Access

September 16, 2026
Hero Motocorp Glamour x Integrated ABS

Hero Motocorp Launches Glamour x With Integrated-ABS

September 12, 2026
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL