ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ನೈಋತ್ಯ ರೈಲ್ವೆಯ ಹುಬ್ಬಳ್ಳಿ #Southwestern Railway Hubli ವಿಭಾಗದ ಅಧಿಕಾರಿಗಳ ಕ್ಲಬ್’ನಲ್ಲಿ ಆಯೋಜಿಸಲಾಗಿದ್ದ ವಿಚಕ್ಷಣ ಜಾಗೃತಿ ಸಪ್ತಾಹ – 2025 ಯಶಸ್ವಿಯಾಗಿ ನಡೆಯಿತು.
ಹಿರಿಯ ಉಪ ಪ್ರಧಾನ ವ್ಯವಸ್ಥಾಪಕರಾದ ಅಣ್ಣಾದೊರೈ ಅವರು ಕಾರ್ಯಾಗಾರದ ಕುರಿತು ಸಮಗ್ರ ಮತ್ತು ಆಳವಾದ ಪ್ರಸ್ತುತಿಯನ್ನು ನೀಡಿದರು.
ರೈಲ್ವೆ ಇಲಾಖೆಯ ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ನೈತಿಕತೆ ಹಾಗೂ ಪಾರದರ್ಶಕತೆಯ ಅಗತ್ಯವನ್ನು ಒತ್ತಿ ಹೇಳಿದರು. ಕೇಂದ್ರ ಸರ್ಕಾರಿ ನೌಕರರ ನಡುವೆ ನಮ್ಮ ಹಂಚಿಕೊAಡ ಜವಾಬ್ದಾರಿ ಎಂಬ ಈ ಬಾರಿ ವಿಜಿಲೆನ್ಸ್ ವಿಷಯವನ್ನು ಸವಿಸ್ತಾರವಾಗಿ ವಿವರಿಸಿದರು.
ಹುಬ್ಬಳ್ಳಿ ವಿಭಾಗೀಯ ವ್ಯವಸ್ಥಾಪಕರಾದ ಬೇಲಾ ಮೀನಾ, ವಿಜಿಲೆನ್ಸ್ ಅಧಿಕಾರಿಗಳು, ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪಾಲ್ಗೊಂಡು, ಪ್ರಾಮಾಣಿಕತೆ, ಜವಾಬ್ದಾರಿತನ ಮತ್ತು ಉತ್ತಮ ಆಡಳಿತ ತತ್ವಗಳಿಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.
ಈ ಕಾರ್ಯಕ್ರಮವು ವಿಜಿಲೆನ್ಸ್ ಕುರಿತು ಜಾಗೃತಿ ಹರಿಸುವ ವೇದಿಕೆಯಾಗಿದ್ದು, ಸಂಸ್ಥೆಯೊಳಗೆ ಪ್ರಾಮಾಣಿಕತೆ ಮತ್ತು ಜವಾಬ್ದಾರಿಯ ಮೌಲ್ಯಗಳನ್ನು ಬಲಪಡಿಸುವ ದಿಶೆಯಲ್ಲಿ ನೌಕರರನ್ನು ಪ್ರೋತ್ಸಾಹಿಸಲು ಕಾರಣವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post