ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
2030ರ ವೇಳೆಗೆ ಇಂಗಾಲ ತಟಸ್ಥ ರೈಲ್ವೆ ಯಾಗುವ ಗುರಿಯೊಂದಿಗೆ ದಾಪುಗಾಲು ಹಾಕುತ್ತಾ ನೈಋತ್ಯ ರೈಲ್ವೆ Southwestern Railway ತನ್ನ ಸಂಪರ್ಕಜಾಲದ 511.7 ರೂಟ್ ಕಿ.ಮೀ.ಗಳ ವಿದ್ಯುದೀಕರಣವನ್ನು ದಿನಾಂಕ 28.03.2022 ರಂದು ಪೂರ್ಣಗೊಳಿಸಿದೆ. ಇದು ಪ್ರಸ್ತುತ ವರ್ಷದ ರೈಲ್ವೆ ಮಂಡಳಿ ನೀಡಿದ ಗುರಿ ಯಾದ 459 ರೂಟ್ ಕಿಮೀ ಗಳನ್ನು ಮೀರಿದ ಸಾಧನೆಯಾಗಿದೆ ಎಂದು ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ ಹೆಗಡೆ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಕಳೆದ ಹಣಕಾಸು ವರ್ಷದಲ್ಲಿ ನೈಋತ್ಯ ರೈಲ್ವೆ ತನ್ನ ಸಂಪರ್ಕ ಜಾಲದಲ್ಲಿ ಒಟ್ಟು 476.7 ರೂಟ್ ಕಿ.ಮೀ.ಗಳ ವಿದ್ಯುದೀಕರಣವನ್ನು ಸಾಧಿಸಿತ್ತು. ಮಾರ್ಚ್ 2022 ರಲ್ಲಿ ನೈಋತ್ಯ ರೈಲ್ವೆಯಾದ್ಯಂತ ಈ ಭಾಗಗಳಲ್ಲಿ ವಿದ್ಯುದೀಕರಣ ಪೂರ್ಣಗೊಂಡಿದೆ ಎಂದಿದ್ದಾರೆ.
Also read: ಸಂತೋಷ್ ಕೆ ಪಾಟೀಲ್ ಸುಳ್ಳು ಆರೋಪ ಹಿನ್ನೆಲೆ ಮಾನನಷ್ಟ ಮೊಕದ್ದಮೆ ದಾಖಲು: ಸಚಿವ ಈಶ್ವರಪ್ಪ
ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ರವರು ನೈಋತ್ಯ ರೈಲ್ವೆಯ ಯೋಜನೆಗಳ ಗುರಿ ಮೀರುವ ಸಾಧನೆಗಾಗಿ ಸರ್ವ ಪ್ರಯತ್ನಗಳನ್ನೂ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಪರಿಚಲನಾ ಹಾಗೂ ವಿದ್ಯುತ್ ವಿಭಾಗಗಳ ಸಮನ್ವಯ ಹಾಗೂ ಸಹಕಾರದಿಂದ ವಿದ್ಯುದೀಕರಣ ಕಾರ್ಯಗಳಿಗೆ ಅವಶ್ಯಕವಾದ ಲೈನ್ ಬ್ಲಾಕ್ ಗಳನ್ನು ಸಕಾಲಕ್ಕೆ ಪಡೆಯಲು ಸಾಧ್ಯವಾಯಿತು ಎಂದು ಅವರು ತಿಳಿಸಿದರು. ವಿದ್ಯುದೀಕರಣ ಕಾಮಗಾರಿಯನ್ನು ಕಾರ್ಯಗತಗೊಳಿಸುವ ಸಂಸ್ಥೆಗಳಾದ CORE, RVNL ಹಾಗೂ PGCIL ಗಳಿಗೆ ಶ್ರೀ ಕಿಶೋರ್ ಅವರು ತಮ್ಮ ಕೃತಜ್ಞತೆಗಳನ್ನು ಸಲ್ಲಿಸಿದರು.
ಈ ಮಾರ್ಗಗಳ ಸಂಪೂರ್ಣ ವಿದ್ಯುದೀಕರಣದೊಂದಿಗೆ ನೈಋತ್ಯ ರೈಲ್ವೆ ತನ್ನ ಸಂಪರ್ಕಜಾಲದ ಬಹುತೇಕ ಭಾಗದಲ್ಲಿ ಎಲೆಕ್ಟ್ರಿಕ್ ಇಂಜಿನ್ ನೊಂದಿಗೆ ರೈಲುಗಳನ್ನು ಸಂಚರಿಸುವುದು. ಇದರಿಂದ ಡೀಸಲ್ ಹಾಗೂ ಪಳೆಯುಳಿಕೆ ಇಂಧನ ಅವಲಂಬನೆಯಲ್ಲಿ ಕಡಿತವಾಗಿ ದಿನನಿತ್ಯದ ಇಂಧನದ ಬಳಕೆ ಗಣನೀಯವಾಗಿ ಕಡಿಮೆಯಾಗುವುದು. ಜೊತೆಗೆ ಮಾರ್ಗಗಳ ಸಾಮರ್ಥ್ಯ ಹೆಚ್ಚಿ ರೈಲುಗಳ ವೇಗವರ್ಧನೆ ಹಾಗೂ ಸಮಯ ಪಾಲನೆಯಲ್ಲಿ ಸುಧಾರಣೆಯಾಗುವುದು ಎಂದು ಹೇಳಿದ್ದಾರೆ.
2016 ರ ವರೆಗಿನ ಸುಮಾರು 200 ರೂಟ್ ಕಿ.ಮೀಗಳ ವಿದ್ಯುದೀಕರಣದಿಂದ ತನ್ನ ಒಟ್ಟು ಸಂಪರ್ಕಜಾಲದ 3566 ರೂಟ್ ಕಿ.ಮೀಗಳಲ್ಲಿ ನೈಋತ್ಯ ರೈಲ್ವೆಯು ಇಲ್ಲಿಯವರೆಗೆ, 1734 ರೂಟ್ ಕಿ.ಮೀಗಳ ವಿದ್ಯುದೀಕರಣ ವನ್ನು ಪೂರ್ಣಗೊಳಿಸಿದೆ ಎಂದಿದ್ದಾರೆ.
ವಿದ್ಯುದ್ದೀಕರಣ ಪೂರ್ಣಗೊಂಡಿರುವ ಮಾರ್ಗಗಳು:
ಯಲಹಂಕ – ಚಿಕ್ಕಬಳ್ಳಾಪುರ (45 ರೂಟ್ ಕಿ.ಮೀಗಳು.), ತುಮಕೂರು ನಿಟ್ಟೂರು (27 ರೂಟ್ ಕಿ.ಮೀಗಳು) ಸಿವಡಿ – ಒಮ್ಲೂರ್ (44 ರೂಟ್ ಕಿ.ಮೀಗಳು) ಹೊಸದುರ್ಗ –ಚಿಕ್ಕಜಾಜೂರು(30 ರೂಟ್ ಕಿ.ಮೀಗಳು) ಅಳ್ನಾವರ – ಅಂಬೇವಾಡಿ (26 ರೂಟ್ ಕಿ.ಮೀಗಳು), ಗದಗ – ಹೊಳೆಆಲೂರು(48 ರೂಟ್ ಕಿ.ಮೀಗಳು), ಕುಡಚಿ- ಘಟಪ್ರಭಾ(47 ರೂಟ್ ಕಿ.ಮೀಗಳು) ಹಾಗೂ ಲೋಂಡಾ – ತಿನೈಘಾಟ್ (11 ರೂಟ್ ಕಿ.ಮೀಗಳು)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post