ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಜನವರಿ 2025 ರಿಂದ ಶೂನ್ಯ ಅಪಘಾತಗಳೊಂದಿಗೆ ಭಾರತೀಯ ರೈಲ್ವೆಯಲ್ಲಿ ಅತ್ಯುತ್ತಮ ಸುರಕ್ಷತಾ ದಾಖಲೆಗಳಲ್ಲಿ ಒಂದನ್ನು ಕಾಯ್ದುಕೊಂಡಿದೆ ಎಂದು ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಮುಕುಲ್ ಸರನ್ ಮಾಥುರ್ ಹೇಳಿದರು.
ಹುಬ್ಬಳ್ಳಿಯ ರೈಲ್ ಸೌಧದಲ್ಲಿ ನಡೆದ 79ನೇ ಸ್ವಾತಂತ್ರ ದಿನಾಚರಣೆಯ ಸಂದರ್ಭದಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ನೈಋತ್ಯ ರೈಲ್ವೆ ಪ್ರಾದೇಶಿಕ ಸಾಮಾಜಿಕ ಆರ್ಥಿಕ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿದ್ದು, ಸುರಕ್ಷತೆ, ಮೂಲಸೌಕರ್ಯ ವಿಸ್ತರಣೆ ಹಾಗೂ ಸಂಪರ್ಕತೆಯಲ್ಲಿ ಅಸಾಧಾರಣ ಪ್ರಗತಿ ಸಾಧಿಸಿದೆ ಎಂದು ಹೇಳಿದರು. ಪ್ರಸ್ತುತ ರೈಲು ಜಾಲದ 89% ಭಾಗವನ್ನು ವಿದ್ಯುದ್ದೀಕರಿಸಲಾಗಿದೆ ಎಂದರು.
ಸುರಕ್ಷತೆ, ವೇಗ, ಆದಾಯ ಮತ್ತು ಪ್ರಯಾಣಿಕರ ಸೌಲಭ್ಯಗಳಲ್ಲಿ ದಾಖಲೆಯ ಕಾರ್ಯP್ಷÀಮತೆಯನ್ನು ನೈಋತ್ಯ ರೈಲ್ವೆ ಸಾಧಿಸಿದೆ. ರೈಲು ಕಾರ್ಯಾಚರಣೆಗಳಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಮತ್ತು ಸಂಪರ್ಕದಲ್ಲಿ ಅಸಾಧಾರಣ ಬೆಳವಣಿಗೆ ಕಂಡುಬಂದಿದೆ ಮತ್ತು ನೈಋತ್ಯ ರೈಲ್ವೆಯ ಜಾಲದ 89% ಅನ್ನು ವಿದ್ಯುದ್ದೀಕರಿಸಿದೆ ಎಂದರು.
29.55 ಮಿಲಿಯನ್ ಟನ್’ಗಳಷ್ಟು ಐತಿಹಾಸಿಕ ಸರಕು ಸಾಗಣೆಯನ್ನು ಸಾಧಿಸಿದೆ (ಜನವರಿ-ಜುಲೈ 2025), ಒಟ್ಟು 3,056.47 ಕೋಟಿ ಆದಾಯವನ್ನು ಗಳಿಸಿದೆ, ಇದು 5,468 ಕೋಟಿ ಮೂಲ ಆದಾಯಕ್ಕೆ ತಲುಪಿದೆ ಎಂದು ಹೇಳಿದರು.
ದೊಡ್ಡ ಪ್ರಮಾಣದ ಟ್ರಾಕ್ ನವೀಕರಣದಲ್ಲಿ 1,015 ಕೋಟಿ ಹೂಡಿಕೆಯೊಂದಿಗೆ ಪ್ರಮುಖ ಮಾರ್ಗಗಳಲ್ಲಿ 130 ಕಿಮೀ/ಗಂಟೆಗೆ ವೇಗವನ್ನು ಹೆಚ್ಚಿಸಲಾಗಿದೆ ಎಂದರು.
ಜನವರಿ 2025ರಿಂದ ಶೂನ್ಯ ಪರಿಣಾಮ ಬೀರುವ ಅಪಘಾತಗಳು ಮತ್ತು ಸಿಗ್ನಲ್ ಪಾಸ್ ಅಟ್ ಡೇಂಜರ್ ಪ್ರಕರಣಗಳಿಲ್ಲದೇ, ಕಳೆದ ಐದು ವರ್ಷಗಳಲ್ಲಿ ಭಾರತೀಯ ರೈಲ್ವೆಯ ಒಟ್ಟು ಅಪಘಾತಗಳಲ್ಲಿ ಕೇವಲ 3.92% ಹಂಚಿಕೆಯೊಂದಿಗೆ ನೈಋತ್ಯ ರೈಲ್ವೆ ದೇಶದ ಅತ್ಯಂತ ಸುರಕ್ಷಿತ ವಲಯಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ ಎಂದರು.
ಸುರಕ್ಷತೆಯ ಭಾಗವಾಗಿ 16 ರಸ್ತೆ ಮೇಲ್ಸೇತುವೆಗಳು, 27 ರಸ್ತೆ ಕೆಳಸೇತುವೆಗಳು, 10 ಪಾದಚಾರಿ ಮೇಲ್ಸೇತುವೆಗಳು ನಿರ್ಮಾಣಗೊಂಡಿವೆ, 12 ಲೆವೆಲ್ ಕ್ರಾಸಿಂಗ್’ಗಳು ತೆರವುಗೊಂಡಿವೆ, 54 ಕಿಮೀ ಉದ್ದದ ಸುರಕ್ಷತಾ ಬೇಲಿಗಳು ಹಾಕಲ್ಪಟ್ಟಿವೆ ಹಾಗೂ ಸುಧಾರಿತ ಸಿಗ್ನಲಿಂಗ್, ಹಾಟ್ ಆಕ್ಸಲ್ ಡಿಟೆಕ್ಟರ್’ಗಳು ಮತ್ತು ಅಗ್ನಿಶಾಮಕ ಸುರಕ್ಷತಾ ವ್ಯವಸ್ಥೆಗಳು ಅಳವಡಿಸಲಾಗಿದೆ ಎಂದಿದ್ದಾರೆ.
ಮೂಲಸೌಕರ್ಯ ಅಭಿವೃದ್ಧಿಯ ಭಾಗವಾಗಿ, ಜನವರಿ 2025ರಿಂದ 53 ಕಿಮೀ ಹೊಸ ಮಾರ್ಗಗಳು ಪ್ರಾರಂಭವಾಗಿದ್ದು, 94 ಕಿ.ಮೀ. ಟ್ರಾಕ್ ವಿದ್ಯುದ್ದೀಕರಣದಿಂದ ಒಟ್ಟು ವಿದ್ಯುದ್ದೀಕೃತ ಮಾರ್ಗ 3,303 ರೂಟ್ ಕಿಮೀಗೆ ಏರಿಕೆಯಾಗಿದೆ. ಕಾರ್ಯಾಚರಣಾ ದಕ್ಷತೆಯಲ್ಲಿ 89% ಸಮಯಪಾಲನೆ ಸಾಧಿಸಲಾಗಿದ್ದು, ಬೆಂಗಳೂರು-ಜೋಲಾರಪೆಟೆ ಮಾರ್ಗದಲ್ಲಿ ಗರಿಷ್ಠ ವೇಗವನ್ನು ಗಂಟೆಗೆ 130 ಕಿ.ಮೀ.ಗೆ ಹೆಚ್ಚಿಸಲಾಗಿದೆ. ಹಳಿ ನವೀಕರಣಗಳಿಗೆ 1,015 ಕೋಟಿ ಹೂಡಿಕೆಯಾಗಿದೆ ಎಂದರು.
ಜನವರಿ-ಜುಲೈ 2025 ಅವಧಿಯಲ್ಲಿ ಐತಿಹಾಸಿಕ 29.55 ಮಿಲಿಯನ್ ಟನ್ ಸರಕು ಸಾಗಣೆ ನೆರವೇರಿಸಿ 3,056.47 ಕೋಟಿ ಆದಾಯ ಗಳಿಸಲಾಗಿದ್ದು, ಒಟ್ಟು ಆದಾಯ 5,468 ಕೋಟಿಗೆ ತಲುಪಿದೆ. ಪ್ರಯಾಣಿಕ ಸೇವೆಯಲ್ಲಿ 8 ಹೊಸ ರೈಲುಗಳು, 24 ವಿಸ್ತರಣೆಗಳು ಹಾಗೂ 232 ವಿಶೇಷ ರೈಲುಗಳನ್ನು ಪರಿಚಯಿಸಲಾಗಿದೆ. ಹನ್ನೊಂದು ಜೋಡಿ ವಂದೇ ಭಾರತ್ ರೈಲುಗಳು ಈಗ ಕರ್ನಾಟಕದಲ್ಲಿ ಸಂಚರಿಸುತ್ತಿವೆ. ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ 53 ನಿಲ್ದಾಣಗಳಲ್ಲಿ ಆಧುನಿಕ ಸೌಲಭ್ಯಗಳು, ಲಿಫ್ಟö್ಗಳು, ಎಸ್ಕಲೇಟರ್’ಗಳು ಮತ್ತು ಸ್ಮಾರ್ಟ್ ನ್ಯಾವಿಗೇಷನ್ ವ್ಯವಸ್ಥೆಗಳನ್ನು ಅಳವಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಭದ್ರತಾ ಕ್ರಮಗಳಲ್ಲಿ 102 ನಿಲ್ದಾಣಗಳಲ್ಲಿ ಸಿಸಿಟಿವಿ ಕಣ್ಗಾವಲು ವ್ಯವಸ್ಥೆ, 94 ಮಾದಕ ವಸ್ತು ಪ್ರಕರಣಗಳ ಪತ್ತೆ ಮತ್ತು 466 ಕ್ಕೂ ಹೆಚ್ಚು ಜನರನ್ನು ಕಳ್ಳಸಾಗಣೆಯಿಂದ ರಕ್ಷಿಸುವಲ್ಲಿ ಯಶಸ್ಸು ದೊರೆತಿದೆ. 3,500 ಕೋಟಿಗೂ ಹೆಚ್ಚು ಮೌಲ್ಯದ ಎರಡು ಪ್ರಮುಖ ದ್ವಿಗುಣಗೊಳಿಸುವ ಯೋಜನೆಗಳಿಗೆ ಅನುಮೋದನೆ ದೊರೆತಿದೆ. ಸಿಬ್ಬಂದಿಗಳ ಕಲ್ಯಾಣಕ್ಕಾಗಿ 1,490 ಬಡ್ತಿಗಳು, ಆಧುನೀಕರಿಸಿದ ಆರೋಗ್ಯಸೌಲಭ್ಯಗಳು, ಹುಬ್ಬಳ್ಳಿ ಮತ್ತು ಮೈಸೂರು ಕಾರ್ಯಾಗಾರಗಳಿಂದ ದಾಖಲೆಯ ಉತ್ಪಾದನೆ ಸಾಧಿಸಲಾಗಿದೆ. ಪರಿಸರ ಸುಸ್ಥಿರತೆಯ ಭಾಗವಾಗಿ 43 ಹೊಸ ವಿದ್ಯುತ್ ಲೋಕೋಮೋಟಿವ್’ಗಳು, 202 ಡೀಸೆಲ್ದಿಂದ ವಿದ್ಯುತ್ ಪರಿವರ್ತನೆಗಳಲ್ಲಿನ 147 ರುಪಾಂತರಗಳು ಹಾಗೂ 20 ಮೆಗಾವಾಟ್ ಗುರಿಯತ್ತ ಸೌರಶಕ್ತಿ ಸಾಮರ್ಥ್ಯ ವಿಸ್ತರಣೆಗಳನ್ನು ಮಾಡಲಾಗಿದೆ ಎಂದರು.
ನೈಋತ್ಯ ರೈಲ್ವೆ ಕ್ರೀಡಾ ಕ್ಷೇತ್ರದಲ್ಲಿಯೂ ಶ್ರೇಷ್ಠ ಸಾಧನೆ ಮಾಡಿದ್ದು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪದಕಗಳನ್ನು ಗೆದ್ದಿದೆ. ಕಾರ್ಯಾಚರಣೆ ಮತ್ತು ಆಸ್ತಿ ನಿರ್ವಹಣೆಯಲ್ಲಿ ಶ್ರೇಷ್ಠತೆಗಾಗಿ ಹಲವು ಪ್ರಶಸ್ತಿಗಳನ್ನು ಪಡೆದಿದೆ. ಈ ಎಲ್ಲಾ ಸಾಧನೆಗಳು ನೈಋತ್ಯ ರೈಲ್ವೆ ಸಿಬ್ಬಂದಿಯ ಸಾಮೂಹಿಕ ಪರಿಶ್ರಮ, ಕಾರ್ಯಪಟುತ್ವ, ಪ್ರಯಾಣಿಕರ ಸೌಲಭ್ಯ ಮತ್ತು ರಾಷ್ಟ್ರ ನಿರ್ಮಾಣದತ್ತದ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಕೆ.ಎಸ್. ಜೈನ್, ಪ್ರಧಾನ ವಿಭಾಗಗಳ ಮುಖ್ಯಸ್ಥರು, ಪ್ರಧಾನ ಕಚೇರಿಯ ಹಿರಿಯ ಅಧಿಕಾರಿಗಳು ಹಾಗೂ ಹುಬ್ಬಳ್ಳಿ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post