ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: 12 ನೆಯ ಶತಮಾನದಲ್ಲಿ ಸಮಾಜಿಕ ಕಾಂತ್ರಿಗೆ ಕಾರಣರಾದ ಮಹಾನ್ ವ್ಯಕಿಗಳಲ್ಲಿ ಜಗಜ್ಯೋತಿ ಬಸವಣ್ಣನವರು ಒಬ್ಬರು ಬಸವಣ್ಣನವರು ಜಗತ್ತನ ಸುಧಾರಣೆಗಾಗಿ ಟೊಂಕಕಟ್ಟಿ ನಿಂತು ಜೀವನದ ಮೌಲ್ಯವನ್ನು ಜಗತ್ತಿಗೆ ಸಾರಿದ ಮಾನವತವಾದಿಯಾಗಿದ್ದರು ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.
ನಗರದ ತಾಲೂಕು ಕಚೇರಿಯಲ್ಲಿ ವಿಶ್ವಗುರು ಬಸವೇಶ್ವರರ 887 ಜಯಂತಿ ಕಾರ್ಯಕ್ರಮವನ್ನು ಬಸವಣ್ಣ ಭಾವಚಿತ್ರಕ್ಕೆ ಪುಷ್ಪ ಹಾಕುವುದರ ಮೂಲಕ ಕೊರೋನಾ ವೈರಸ್ ಹರಡುವ ಹಿನ್ನೆಲೆಯಲ್ಲಿ ಲಾಕ್ ಟೌನ್ ಇರುವ ಕಾರಣದಿಂದ ಸರಳವಾಗಿ ಆಚರಿಸಿ ಅವರು ಮಾತನಾಡಿದರು.
ಬಸವಣ್ಣನವರು ಕಾಯಕವೇ ಕೈಲಾಸ ನುಡಿದಂತೆ ನಡೆ ಮತ್ತು ದಯವೇ ಧರ್ಮದ ಮೂಲ ಎಂಬ ತತ್ತವನ್ನು ಜೀವನದಲ್ಲಿ ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಮಾನತೆ ಸಾಮಾಜಿಕ ನ್ಯಾಯ, ಕಾಯಕ ಯೋಗಿ, ಮಹಿಳಾ ಸಬಲೀಕರಣ, ದಲಿತೋದ್ದಾರ ಮತ್ತು ಸಮಾಜಿಕ ಕ್ರಾಂತಿಯ ಸಣದೇಶವನ್ನು ಜನತೆಗೆ ನೀಡಿದರು. ಜಾತಿ ವ್ಯವಸ್ಥೆ ಮತ್ತು ಅಅಸ್ಪಶ್ಯತೆಯನ್ನು ಹೋಗಲಾಡಿಸಲು ಬಸವಣ್ಣನವರು ಸಮಾಜದಲ್ಲಿ ಬೆಳಗಿಸಿದ ಜ್ಯೋತಿಯ ಪ್ರಾಮುಖ್ಯತೆ ಇಂದಿಗೂ ಅವಶ್ಯಕ ಸಮಾಜದಲ್ಲಿ ಎಲ್ಲೆಡೆ ಸಮಾನತೆ ತರುವ ನಿಟ್ಟಿನಲ್ಲಿ ಹಾಗೂ ಪ್ರತಿಯೊಬ್ಬರು ಉದ್ದಾರಕ್ಕೆ ಎಲ್ಲಾರು ಕೈಜೋಡಿಸಬೇಕು ಎಂದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಕೆ.ಸಿ. ನಾಗರಾಜ , ತಹಶೀಲ್ದರ್ ಎಂ. ಮಲ್ಲಿಕಾಜುನ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್. ವೆಂಕಟೇಶಪ್ಪ, ಉಪ ತಹಶೀಲ್ದಾರ್ ಚಂದ್ರಶೇಖರ್, ಆರ್.ಐ. ರಾಜೇಶ, ವೀರಶೈವ ಸಂಘದ ಪದಾಧಿಕಾರಿ ಜಗದೀಶ, ರಾಷ್ಠೀಯ ಹಬ್ಬಗಳ ಸಮಿತಿಯ ನಿರೂಪಕ ಡಿ. ಶ್ರೀನಿವಾಸ್, ಇತರರಿದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Get in Touch With Us info@kalpa.news Whatsapp: 9481252093
Discussion about this post