ಮಧುರೈ: ಪತಿ-ಪತ್ನಿಯರ ನಡುವಿನ ಜಗಳ ವಿಕೋಪಕ್ಕೆ ತಿರುಗಿದ ಪರಿಣಾಮ ಶಾಲೆಗೆ ನುಗ್ಗಿನ ಪತಿ ತನ್ನ ಪತ್ನಿಯನ್ನು ವಿದ್ಯಾರ್ಥಿಗಳ ಎದುರೇ ಹತ್ಯೆ ಮಾಡಿರುವ ಭೀಕರ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಮಧುರೈನ ತಿರುಮಂಗಲಂನಲ್ಲಿರುವ ಸರ್ಕಾರಿ ಅನುದಾನಿತ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಹಿಳೆ ವಿಜ್ಞಾನ ಪಾಠ ಮಾಡುತ್ತಿದ್ದರು. ಈ ವೇಳೆ ತರಗತಿಗೆ ನುಗ್ಗಿದ ಪತಿ ತನ್ನ ಪತ್ನಿಯೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾನೆ. ಈ ವೇಳೆ ಉಗ್ರಗೊಂಡ ಪತಿ ಮಕ್ಕಳ ಎದುರಿನಲ್ಲಿಯೇ ತನ್ನ ಪತ್ನಿಗೆ ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾನೆ.
ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನು, ವಿದ್ಯಾರ್ಥಿಗಳ ಎದುರೇ ಈ ಭೀಕರ ಕೃತ್ಯ ಮಕ್ಕಳ ಮನಸ್ಸಿನ ಮೇಲೆ ಬೀರಿರಬಹುದಾದ ದುಷ್ಪರಿಣಾಮದ ಹಿನ್ನೆಲೆಯಲ್ಲಿ ಎಲ್ಲ ಮಕ್ಕಳಿಗೂ ಕೌನ್ಸಿಲಿಂಗ್ ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.
Stiff fingers every morning? Your joints may be sending an early warning
Kalpa Media House | Special Article | The alarm rings, and you reach out to switch it off. But your...
Read moreDetails






