ಕಲ್ಪ ಮೀಡಿಯಾ ಹೌಸ್ | ಹೈದರಾಬಾದ್ |
ಊಟದ ಮೆನವಿನಲ್ಲಿ ನಲ್ಲಿ ಮೂಳೆಯಿಲ್ಲ ಎಂಬ ಯಕಶ್ಚಿತ್ ಕಾರಣಕ್ಕಾಗಿ ವರ ಹಾಗೂ ವರನ ಕಡೆಯವರು ಮದುವೆಯನ್ನೇ ರದ್ದುಗೊಳಿಸಿರುವ ವಿಚಿತ್ರ ಘಟನೆ ತೆಲಂಗಾಣದಲ್ಲಿ ನಡೆದಿದೆ.
ನಿಜಾಮಾಬಾದ್ ಹಡುಗಿ ಹಾಗೂ ಜಗ್ತಿಯ ಹುಡುಗನಿಗೆ ಮದುವೆ ನಿಶ್ಚಯವಾಗಿದ್ದು, ಹುಡುಗಿಯ ಮನೆಯಲ್ಲಿ ನಿಶ್ಚಿತಾರ್ಥ ನಡೆದಿತ್ತು. ಈ ಕಾರ್ಯಕ್ರಮವನ್ನು ಹುಡುಗಿಯ ಮನೆಯವರು ಅದ್ದೂರಿಯಾಗಿ ಆಯೋಜಿಸಿದ್ದರು.
ಆದರೆ, ಊಟ ಮೆನುವಿನಲ್ಲಿ ಮಟನ್ ನಲ್ಲಿ ಮೂಳೆ ಇಲ್ಲ ಎಂಬ ಕಾರಣಕ್ಕೆ ಆರಂಭವಾದ ಜಗಳ ತಾರಕಕ್ಕೇರಿ, ಕೊನೆಯಲ್ಲಿ ಮದುವೆಯನ್ನೇ ರದ್ದು ಮಾಡಿರುವ ಘಟನೆ ನಡೆದಿದೆ.
Also read: Three-day Hampi Utsav from Feb 2, 2024: In-charge Minister Zameer Ahmed Khan
ನಿಶ್ಚಿತಾರ್ಥದ ನಂತರ ಭರ್ಜರಿಯಾಗಿ ಮಾಂಸದ ಊಟಕ್ಕೆ ಸಿದ್ದತೆ ನಡೆದಿತ್ತು. ಊಟ ಆರಂಭವಾದ ನಂತರ ಅದರಲ್ಲಿ ನಲ್ಲಿ ಮೂಳೆ ಇಲ್ಲ ಎಂಬ ಕಾರಣಕ್ಕಾಗಿ ಹುಡುಗನ ಕಡೆಯ ಅತಿಥಿಗಳು ತಗಾದೆ ತೆಗೆದಿದ್ದಾರೆ.
ಆದರೆ, ಹುಡುಗಿಯ ಕಡೆಯವರು ನಾವು ಮಾಡಿಸಿರುವ ಅಡುಗೆ ಪಟ್ಟಿಯಲ್ಲಿ ನಲ್ಲಿ ಮೂಳೆ ಇಲ್ಲ, ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ಆದರೆ, ಬೇಕಂತಲೇ ಊಟೋಪಚಾರದಲ್ಲಿ ಈ ರೀತಿ ಮಾಡಿ ಅವಮಾನ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಎರಡೂ ಕಡೆ ಮಾತು ವಾಗ್ವಾದಕ್ಕೆ ತಿರುಗಿ, ಜಗಳ ತಾರಕ್ಕೆ ಏರಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಎರಡೂ ಕಡೆಯವರಿಗೆ ತಳಿ ಹೇಳಿ ಸಮಾಧಾನ ಪಡಿಸಲು ಯತ್ನಿಸಿದ್ದಾರೆ.
ಆದರೆ, ಯಾವುದೇ ಪ್ರಯತ್ನ ಫಲ ನೀಡಿದೇ, ಉದ್ದೇಶಪೂರ್ವಕವಾಗಿ ನಮಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದ ವರನ ಕಡೆಯವರು, ಮದುವೆಯೂ ಸಹ ಬೇಡ ಎಂದು ರದ್ದು ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















