ಕಲ್ಪ ಮೀಡಿಯಾ ಹೌಸ್ | ಹೈದರಾಬಾದ್ |
ರೈಲಿನ ಸ್ಲೀಪರ್ ಕೋಚ್’ನ ಕೆಳಗಿನ ಬರ್ತ್’ನಲ್ಲಿ ಮಲಗಿದ್ದ ವ್ಯಕ್ತಿಯ ಮೇಲೆ ಮೇಲೆ ಮಲಗಿದ್ದ ಯುವಕ ಬಿದ್ದ ಪರಿಣಾಮ ತೀವ್ರವಾಗಿ ಅಸ್ವಸ್ಥಗೊಂಡಿದ್ದ ವೃದ್ಧ ಸಾವನ್ನಪ್ಪಿರುವ ಘಟನೆ ನಡೆದಿದೆ.
ಹೈದರಾಬಾದ್’ನಲ್ಲಿ ಘಟನೆ ನಡೆದಿದ್ದು, ಮೃತ ವ್ಯಕ್ತಿಯನ್ನು ಕೇರಳ ಮೂಲದ ಅಲಿ ಖಾನ್(60) ಎಂದು ಗುರುತಿಸಲಾಗಿದೆ.
ಜೂನ್ 16 ರಂದು ಮಿಲೇನಿಯಂ ಎಕ್ಸ್’ಪ್ರೆಸ್’ನಲ್ಲಿ ತ್ರಿಶೂರ್’ನಿಂದ ಆಗ್ರಾ ಕಂಟೋನ್ಮೆಂಟ್’ಗೆ ಪ್ರಯಾಣಿಸುತ್ತಿದ್ದರು. ಅವರು ಸ್ಲೀಪರ್ ಕೋಚ್ ಕೆಳಗಿನ ಬರ್ತ್’ನಲ್ಲಿ ಪ್ರಯಾಣಿಸುತ್ತಿದ್ದರು ಎಂದು ವರದಿಯಾಗಿದೆ.
ಆದರೆ, ಮಧ್ಯದ ಬರ್ತ್ ನ ಚೈನ್ ಸರಿಯಾಗಿ ಲಾಕ್ ಮಾಡಲಾಗಿತ್ತು. ಆದರೆ ಪ್ರಯಾಣದ ಸಮಯದಲ್ಲಿ, ಕೊಕ್ಕೆ ಬೇರ್ಪಟ್ಟಿದೆ. ಮಧ್ಯದ ಬರ್ತ್ ಅವರ ಮೇಲೆ ಬಿದ್ದು ಕುತ್ತಿಗೆಗೆ ಗಾಯವಾಗಿತ್ತು. ಪರಿಣಾಮ ಆತ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ ಎಂದು ವರದಿಯಾಗಿದೆ.
ರೈಲ್ವೆ ಸಿಬ್ಬಂದಿ ಸಂಜೆ 6.30 ರ ಸುಮಾರಿಗೆ ಘಟನೆಯ ಬಗ್ಗೆ ಮಾಹಿತಿ ಪಡೆದು, ರಾಮಗುಂಡAನಲ್ಲಿ ರೈಲು ನಿಲ್ಲಿಸಿ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರು.
Also read: ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿಗೆ ಅನಾರೋಗ್ಯ | ಏಮ್ಸ್ ಆಸ್ಪತ್ರೆಗೆ ದಾಖಲು | ಆರೋಗ್ಯ ಹೇಗಿದೆ?
ಆದರೆ ಅವರು ತೀವ್ರ ಅಸ್ವಸ್ಥಗೊಂಡ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಾರಂಗಲ್’ನ ಖಾಸಗಿ ಆಸ್ಪತ್ರೆಗೆ ಮತ್ತು ಹೈದರಾಬಾದ್ ಬೇಗಂಪೇಟೆಯಲ್ಲಿರುವ ಮತ್ತೊಂದು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಜೂನ್ 24ರಂದು ಮೃತಪಟ್ಟಿದ್ದು, ಮಂಚೇರಿಯಲ್ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















