ಕಲ್ಪ ಮೀಡಿಯಾ ಹೌಸ್ | ಹೈದರಾಬಾದ್ |
ತೆಲುಗು ಚಿತ್ರರಂಗದ ಖ್ಯಾತ ಹಿರಿಯ ನಟ ಚಂದ್ರಮೋಹನ್ (82) Telugu Actor Chandramohan ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಹೈದರಾಬಾದ್’ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ನಿನ್ನೆ ರಾತ್ರಿ ತೀವ್ರ ಹೃದಯಾಘಾತ ಸಂಭವಿಸಿದ ಅವರು ಕೊನೆಯುಸಿರೆಳೆದಿದ್ದಾರೆ.
ಸುಮಾರು 900ಕ್ಕೂ ಅಧಿಕ ಚಿತ್ರಗಳಲ್ಲಿ ದಾಖಲೆ ಎನ್ನುವಷ್ಟು ಚಿತ್ರಗಳಲ್ಲಿ ಪ್ರಮುಖ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. 1966ರಲ್ಲಿ ರಂಗುಲ ರತ್ನಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಂತರ ಮತ್ತೆ ಅವರು ಹಿಂತಿರುಗಿ ನೋಡಿದ್ದೆ ಇಲ್ಲ. ಅಲ್ಲಿಂದ ತೆಲುಗು ಚಿತ್ರರಂಗದಲ್ಲಿ ಒಂದು ಇತಿಹಾಸವನ್ನೇ ಸೃಷ್ಠಿಸುತ್ತಾ ಹೋದರು.
Also read: ವಿಜಯೇಂದ್ರ ಪದಗ್ರಹಣ ಯಾವಾಗ? ಎಲ್ಲಿ ನಡೆಯಲಿದೆ ಅದ್ದೂರಿ ಕಾರ್ಯಕ್ರಮ?
ತೆಲುಗಿನ ಎಲ್ಲ ಪ್ರಮುಖ ನಟರ ಜೊತೆಯಲ್ಲಿ ನಟಿಸಿರುವ ಇವರು ಹಾಸ್ಯ ಪಾತ್ರಗಳ ಮೂಲಕವೇ ಹೆಚ್ಚು ಗಮನ ಸೆಳೆದವರು. ಹಿರಿಯ ನಟನ ನಿಧನಕ್ಕೆ ತೆಲುಗು ಚಿತ್ರರಂಗ ಕಂಬನಿ ಮಿಡಿದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post