ಕಲ್ಪ ಮೀಡಿಯಾ ಹೌಸ್ | ಹೈದರಾಬಾದ್ |
ಅಕ್ರಮ ಕಟ್ಟಡಗಳ ಮೇಲೆ ಸಮರ ಸಾರಿರುವ ಹೈದರಾಬಾದ್ ಡಿಸಾಸ್ಟರ್ ರೆಸ್ಪಾನ್ಸ್ ಅಂಡ್ ಅಸೆಟ್ಸ್ ಮಾನಿಟರಿಂಗ್ ಅಂಡ್ ಪ್ರೊಟೆಕ್ಷನ್(ಹೈಡ್ರಾ) ಈಗ ಖ್ಯಾತ ಟಾಲಿವುಡ್ ನಟ ಅಕ್ಕಿನೇನಿ ನಾಗಾರ್ಜುನ #Akkineni Nagarjuna ಅವರಿಗೆ ಸೇರಿದ ಐಶಾರಾಮಿ ಕನ್ವೆನ್ಷನ್ ಸೆಂಟರನ್ನು ನೆಲಸಮಗೊಳಿಸಿದೆ.
ಮಾದಾಪುರದಲ್ಲಿ ನಿರ್ಮಾಣ ಮಾಡಲಾಗಿದ್ದ ಎನ್ ಕನ್ವೆನ್ಷನ್ ಸೆಂಟರನ್ನು ಹೈಡ್ರಾ ಅಧಿಕಾರಿಗಳು ಬಿಗಿ ಭದ್ರತೆಯ ನಡುವೆ ಜೆಸಿಬಿಗಳ ಮೂಲಕ ಧ್ವಂಸಗೊಳಿಸಿದ್ದಾರೆ.
Also read: ರಾಜ್ಯ ಸರ್ಕಾರದಿಂದ ಬಿಗ್ ಶಾಕ್ | KSRTC ಪ್ರಯಾಣದರ ಏರಿಕೆ ಬಹುತೇಕ ಖಚಿತ
ಧ್ವಂಸಕ್ಕೆ ಕಾರಣವೇನು?
ಎನ್ ಕನ್ವೆನ್ಷನ್ ಸೆಂಟರ್ ಪಕ್ಕದ ತಮ್ಮಿಡಿ ಕೆರೆಯನ್ನು ಒತ್ತುವರಿ ಮಾಡಿಕೊಂಡು ಈ ಎನ್ ಕನ್ವೆನ್ಷನ್ ಸೆಂಟರ್ ನಿರ್ಮಾಣ ಮಾಡಲಾಗಿತ್ತು ಎಂಬ ಆರೋಪವಿತ್ತು. ಇದೀಗ ನೇರವಾಗಿ ಹೈಡ್ರಾ ಅಧಿಕಾರಿಗಳು ಸುಮಾರು ಮೂರೂವರೆ ಎಕರೆ ಜಾಗದಲ್ಲಿ ನಿರ್ಮಾಣವಾಗಿದ್ದ ಕನ್ವೆನ್ಷನ್ ಸೆಂಟರನ್ನು ತೆರವುಗೊಳಿಸಿದ್ದಾರೆ.
ಹೈಡ್ರಾ ಅಧಿಕಾರಿಗಳು ಇತ್ತೀಚೆಗೆ ನಾಗಾರ್ಜುನ ಅವರ ಎನ್ ಕನ್ವೆನ್ಷನ್ ಸೆಂಟರ್ ವಿರುದ್ಧ ದೂರು ಸ್ವೀಕರಿಸಿದ್ದರು. ಎನ್ ಕನ್ವೆನ್ಷನ್ ಒಳಗೆ ಹೋಗುವ ಎಲ್ಲಾ ರಸ್ತೆಗಳನ್ನು ಅಧಿಕಾರಿಗಳು ಮುಚ್ಚಿ, ಮಾಧ್ಯಮಗಳಿಗೆ ಪ್ರವೇಶ ನಿರಾಕರಿಸಿ, ಎಲ್ಲಾ ರಸ್ತೆಗಳಲ್ಲಿ ಬ್ಯಾರಿಕೇಡ್’ಗಳನ್ನು ಹಾಕಿ ಸೆಂಟರ್ ನೆಲಸಮ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















