ಇಂದೋರ್: ನಾನು ರಾಷ್ಟ್ರೀಯವಾದಿಯಾಗಿದ್ದು ಎಲ್ಲ ಧರ್ಮವನ್ನೂ ಗೌರವಿಸುತ್ತೇನೆ. ಆದರೆ, ನಾನು ಹಿಂದೂವಾದಿಯಲ್ಲ. ಅಲ್ಲದೇ, ನನಗೆ ಬಿಜೆಪಿ ಸರ್ಟಿಫಿಕೇಟ್ ಅಗತ್ಯವಿಲ್ಲ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ.
ಇಂದೋರ್‌ನಲ್ಲಿ ಆಯ್ದ ಪತ್ರಕರ್ತರೊಂದಿಗೆ ಮಾತ್ರ ಮಾತನಾಡಿದ ರಾಹುಲ್‌ಗಾಂಧಿ, ನಾನು ಪ್ರತಿಯೊಂದೂ ಧರ್ಮಕ್ಕೂ ನಾಯಕನಾಗಿದ್ದು, ನಾನೊಬ್ಬ ರಾಷ್ಟ್ರೀಯವಾದಿ. ನಾನು ಎಲ್ಲ ಧರ್ಮ ಹಾಗೂ ಜಾತಿಗಳನ್ನೂ ಗೌರವಿಸುತ್ತೇನೆ ಎಂದಿದ್ದಾರೆ.
ನರೇಂದ್ರ ಮೋದಿ, ಅಮಿತ್ ಶಾ ಸೇರಿದಂತೆ ಬಿಜೆಪಿ ಮುಖಂಡರು ದೇವಾಲಯಗಳಿಗೆ ಭೇಟಿ ನೀಡಿದ ವೇಳೆ ಅಲ್ಲಿನ ಸಂಪ್ರದಾಯಕ್ಕೆ ತಕ್ಕಂತೆ ವಸ್ತ್ರ ಧರಿಸುತ್ತಾರೆ. ಅವರ ಕುರಿತಾಗಿ ಯಾರೂ ಮಾತನಾಡುವುದಿಲ್ಲ. ಆದರೆ, ನನ್ನ ವಿರುದ್ಧವೇ ಯಾಕೆ ಟೀಕಿಸುತ್ತಾರೆ? ಇದು ಸರಿಯೇ ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.
Discussion about this post