ನವದೆಹಲಿ: ಇನ್ನೊಂದು ಸರಿಯಾದರೂ ಮಾವನವರ ಜೊತೆಯಲ್ಲಿ ಮಾತನಾಡುವಂತಾಲಿ, ಅವರು ನಮ್ಮನ್ನೆಲ್ಲಾ ನೋಡುವಂತಾಗಲಿ ಎಂದು ನಿರಂತರವಾಗಿ ಪ್ರಾರ್ಥಿಸುತ್ತಿದ್ದೇವೆ ಎಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸೋದರ ಸೊಸೆ ಮನದಾಳದ ಪ್ರಾರ್ಥನೆಯನ್ನು ಹಂಚಿಕೊಂಡಿದ್ದಾರೆ.
I have been praying to god that just once I can see him give a speech again. Our family can never ever erase that image of his from our minds. I hope he gets well soon: Kanti Mishra, Niece of #AtalBihariVaajpayee pic.twitter.com/vxhz7ur1fZ
— ANI (@ANI) August 16, 2018
ಎಐಐಎಂಎಸ್ ಆಸ್ಪತ್ರೆಯ ಐಸಿಯುನ ಕೃತಕ ಉಸಿರಾಟದ ವ್ಯವಸ್ಥೆಯಲ್ಲಿರುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಶೀಘ್ರ ಗುಣಮುಖರಾಗಲಿ ಪ್ರಾರ್ಥಿಸಿ, ಮಾಧ್ಯಮದೊಂದಿಗೆ ಅವರು ಮಾತನಾಡಿದ್ದಾರೆ.
ನಮ್ಮ ಮನದಿಂದ ಅವರ ಎಂದಿಗೂ ಮರೆಯಾಗಲು ಸಾಧ್ಯವೇ ಇಲ್ಲ. ಮಾತ್ರವಲ್ಲ ನಮ್ಮೊಂದಿಗೆ ಅವರು ಇನ್ನಷ್ಟು ಕಾಲ ಬಾಳುವಂತಾಗಲಿ. ಅವರು ಶೀಘ್ರ ಗುಣಮುಖರಾಗಲಿ ಎಂದು ನಮ್ಮ ಇಡಿಯ ಕುಟುಂಬ ಪ್ರಾರ್ಥಿಸುತ್ತಿದೆ ಎಂದಿದ್ದಾರೆ.
ಇನ್ನು, ವಾಜಪೇಯಿಯವರು ಶೀಘ್ರ ಗುಣಮುಖರಾಗಲಿ ಎಂದು ಗ್ವಾಲಿಯರ್ ಸರ್ಕಾರಿ ಮೆಡಿಕಲ್ ಆರ್ಯುವೇದಿಕ್ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಇಂದು ಹೋಮ ನಡೆಸಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಇಂದು ಮುಂಜಾನೆಯಿಂದ ಗೃಹ ಸಚಿವ ರಾಜನಾಥ ಸಿಂಗ್, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೇರಿದಂತೆ ಹಲವು ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿದ್ದರು.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಎಐಐಎಂಎಸ್‌ಗೆ ಭೇಟಿ ನೀಡಿ, ಮಾಜಿ ಪ್ರಧಾನಿಯವರ ಆರೋಗ್ಯ ವಿಚಾರಿಸಿದರು.
BJP President Amit Shah arrives at All India Institute of Medical Sciences (AIIMS) where former Prime Minister Atal Bihari Vajpayee is admitted. Vajpayee’s condition is critical & he is on life support system. #Delhi pic.twitter.com/CbjIqyHruD
— ANI (@ANI) August 16, 2018
#Delhi: Union Home Minister Rajnath Singh arrives at All India Institute of Medical Sciences where former Prime Minister Atal Bihari Vajpayee is admitted. Vajpayee’s condition is critical & he is on life support system pic.twitter.com/X4YOLvwInm
— ANI (@ANI) August 16, 2018
ವಾಜಪೇಯಿಯವರ ಆರೋಗ್ಯ ವಿಚಾರಿಸಿ, ಅವರನ್ನು ನೋಡಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನವದೆಹಲಿಗೆ ಪ್ರಯಾಣ ಬೆಳೆಸಿದ್ದು, ಮಧ್ಯಾಹ್ನದ ವೇಳೆಗೆ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ.
Discussion about this post