ಅಮೆರಿಕಾ ಹನ್ನೊಂದು ಬಾರಿ ವಿಫಲವಾಗಿದೆ….ಚೀನಾ ಮತ್ತು ರಷ್ಯಾ ದೇಶಗಳು ಬೆರಳೆಣಿಕೆಯ ಬಾರಿ ಅಸಫಲತೆ ಕಂಡು ಚಂದ್ರನನ್ನು ಮುಟ್ಟಲು ಸಫಲವಾಗಿವೆ. ಆದರೆ, ಭಾರತದ ವಿಜ್ಞಾನಿಗಳು ಮೊದಲ ಬಾರಿಗೆ ಶೇಕಡಾ ತೊಂಭತ್ತೈದರಷ್ಟು ಸಫಲರಾದರೂ ಕೊನೆಯ ಹೆಜ್ಜೆಯಲ್ಲಿ ತಾಂತ್ರಿಕವಾಗಿ ಯಶಸ್ವಿಯಾಗದೆ ಚಂದ್ರಯಾನ-2 ರ ವಿಕ್ರಮ್ ಭಾರತದ ನೆಲದ ಸಂಪರ್ಕಕ್ಕೆ ಸಿಗದೆ ಭರವಸೆಯ ಬೆಳಕಾಗಿ ನಿಶ್ಚಿತ ಪರಿಧಿಯನ್ನು ಬಿಟ್ಟು ಚಂದ್ರನ ಸುತ್ತ ಸುತ್ತತ್ತಿರಬಹುದೇನೊ.
ವಿಜ್ಞಾನಿಗಳು ಭಾರತ ವಾಸಿಗಳನ್ನು ವಿಜ್ಞಾನ ಕ್ಷೇತ್ರದಲ್ಲಿ ಎದೆಯುಬ್ಬಿಸುವಂತೆ ಮಾಡುವಲ್ಲಿ ಯಶಸ್ವಿಯಾದರೂ ಕೊನೆ ಮುಟ್ಟಲಾಗದ ಬಗ್ಗೆ ಯಾರಿಗೂ ಬೇಸರವೇನೂ ಆಗಿಲ್ಲ. ಯಾಕೆಂದರೆ ನಮ್ಮ ವಿಜ್ಞಾನಿಗಳು ಭವಿಷ್ಯದಲ್ಲಿ ಅಸಾಮಾನ್ಯವಾದುದ್ದನ್ನು ಸಾಧಿಸಬಲ್ಲ ಪ್ರತಿಭಾನ್ವಿತರಿದ್ದಾರೆ.
ಈ ಕ್ಲಿಷ್ಟಕರವಾದ ಸನ್ನಿವೇಶದಲ್ಲಿ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿಯವರ ನಡುವಳಿಕೆ ಮಾತ್ರ ದೇಶದ ನಾಗರಿಕರ ಪಾಲಿಗೆ ವರ್ಣನಾತೀತ. ರಷ್ಯಾ ಪ್ರವಾಸ ಮುಗಿಸಿ ದೆಹಲಿಗೆ ಬಂದ ಪ್ರಧಾನಿ ತಮ್ಮ ಕಚೇರಿ ಕೆಲಸ ಅದೊಡನೆಯೇ ಬೆಂಗಳೂರಿಗೆ ಧಾವಿಸಿ ಮಧ್ಯರಾತ್ರಿಯವರೆಗೆ ಇಸ್ರೋ ವಿಜ್ಞಾನಿಗಳೊಂದಿಗಿದ್ದವರು. ಚಂದ್ರಯಾನ-2 ರ ವಿಕ್ರಮ್ ಸರಿಯಾಗಿ ಚಂದ್ರನ ನೆಲಕ್ಕಿಳಿಯದ ವಿಚಾರದ ಬಗ್ಗೆ ಬೇಸರಿಸದಂತೆ ವಿಜ್ಞಾನಿಗಳನ್ನು ಹುರಿದುಂಬಿಸಿ ತೆರಳಿದವರು ಮತ್ತೆ ಬೆಳಿಗ್ಗೆ ಎಂಟಕ್ಕೆ ಇಸ್ರೋ ಕಚೇರಿಗೆ ಏನೂ ಆಗದವರಂತೆ ಫ್ರೆಷ್ ಮೂಡಿನಲ್ಲಿ ವಿಜ್ಞಾನಿಗಳು ಮತ್ತು ದೇಶವನ್ನುದ್ದೇಶಿಸಿ ಮಾತನಾಡುತ್ತಾ ನಾನು ಮತ್ತು ನನ್ನ ದೇಶದ ನಿಮ್ಮ ಜೊತೆಗಿದ್ದೇವೆ, ಚಿಂತೆ ಬಿಡಿ ಸಾಧನೆಗೆ ಕೈ ಹಚ್ಚಿ ಎಂದು ಭಾವುಕರಾಗಿ ಹರಸುತ್ತಾರೆ. ಚಿಂತಿತರಾಗಿದ್ದ ಇಸ್ರೋ ಅದ್ಯಕ್ಷ ಕೆ. ಸಿವನ್ ಅವರನ್ನು ಭಾವುಕರಾಗಿ ತಬ್ಬಿ ಸಂತೈಸುತ್ತಾರೆ.
ಇದು ದೇಶವನ್ನು ಪ್ರೀತಿಸುವ ಎಲ್ಲರನ್ನೂ ಭಾವುಕರನ್ನಾಗಿ ಜೊತೆಗೆ ಪ್ರೇರಿತರನ್ನಾಗಿ ಮಾಡುವ ಸಂಗತಿ. ಮೋದಿಯವರ ನಡುವಳಿಕೆ ನನ್ನಲ್ಲಂತೂ ಅವರ್ಣನೀಯ ಆನಂದ ನೀಡಿದೆ. ನಿಮಗೂ ಹಾಗೇ ಆಗಿರಲು ಸಾಕು.
ಇಸ್ರೋ ವಿಜ್ಞಾನಿಗಳೆಲ್ಲರಿಗೂ ಹಾರ್ದಿಕ ಅಭಿನಂದನೆಗಳು.
ಲೇಖನ: ಕೆ.ಜಿ. ಕೃಷ್ಣಾನಂದ
Discussion about this post