ಕನ್ನಡ ಚಿತ್ರರಂಗ ಹಾಗೂ ರಂಗಭೂಮಿಯಲ್ಲಿ ತಮ್ಮದೇ ಆದ ವಿಭಿನ್ನ ಛಾಪು ಮೂಡಿಸಿರುವ ನಟ ಅನಿರುದ್ ಜತ್ಕರ್ ಈಗಾಗಲೇ ಹಲವಾರು ಚಿತ್ರಗಳಲ್ಲಿ ನಾಯಕರಾಗಿ ನಟಿಸಿದ್ದು, ಈಗ ಬಹುವರ್ಷಗಳ ನಂತರ ಮತ್ತೆ ಕಿರುತೆರೆಗೆ ಕಾಲಿಡುತ್ತಿದ್ದಾರೆ.
ಹೌದು… ಅನಿರುದ್ ಅವರು ಬೆಳ್ಳಿತೆರೆಗೆ ಕಾಲಿಡುವ ಮುನ್ನ ಕೆಲವು ಧಾರಾವಾಹಿಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ಆನಂತರ ಚಲನಚಿತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಇವರು ಇಲ್ಲಿ ಹಲವಾರು ವಿಭಾಗಗಳಲ್ಲಿ ತೆರೆಮರೆಯಲ್ಲಿಯೇ ಸಾಧನೆಗೈದವರು.
ಇಂತಹ ಪ್ರತಿಭಾನ್ವಿತ ನಟ ಅನಿರುದ್ ಈಗ ನಾಯಕರಾಗಿ ಅಭಿನಯಿಸಿರುವ ’ಜೊತೆ ಜೊತೆಯಲಿ’ ಕನ್ನಡ ಧಾರಾವಾಹಿ ಝೀ ಕನ್ನಡ ವಾಹಿನಿಯಲ್ಲಿ ಇದೇ ಸೆ.11ರಿಂದ ರಾತ್ರಿ 8.30ಕ್ಕೆ ಪ್ರಸಾರವಾಗಲಿದೆ.
ಮಧ್ಯ ವಯಸ್ಸಿನ ಓರ್ವ ಯಶಸ್ವಿ ಸರ್ವ ಶ್ರೀಮಂತ ಉದ್ಯಮಿ ನಾಯಕ ಆರ್ಯವರ್ಧನ್ ಆಗಿ ಅನಿರುದ್ ಕಾಣಿಸಿಕೊಂಡಿದ್ದಾರೆ. ಇಲ್ಲಿ ನಾಯಕನಿಗೆ ಬ್ಯುಸಿನೆಸ್ ಮೇಲಿರುವ ಆಸಕ್ತಿ ಮದುವೆ ಹಾಗೂ ಸಂಸಾರದಲ್ಲಿ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಬಡತನದಲ್ಲಿಯೇ ಬೆಳದರೂ ಕನಸಿನ ಅರಮನೆಯನ್ನು ಕಟ್ಟಿಕೊಂಡು ಆಶಾಭಾವನೆಯಲ್ಲಿ ಬದುಕುವ ಓರ್ವ ನಾಯಕಿಯ ಮೇಲೆ ಪ್ರೀತಿ ಮೂಡುತ್ತದೆ ಎಂಬ ಕುರಿತಾಗಿ ಕಥಾ ಹಂದರ ಧಾರಾವಾಹಿಯಲ್ಲಿದೆ ಎನ್ನುವುದು ಪ್ರೋಮೋದಲ್ಲಿ ಕಂಡುಬರುವ ಅಂಶ.
ಧಾರಾವಾಹಿಯ ನಾಯಕಿಯಾಗಿ ಯುವ ನಟಿ ಮೇಘಾ ಶೆಟ್ಟಿ ಆಭಿನಯಿಸುತ್ತಿದ್ದು, ಜೋಡಿಹಕ್ಕಿ ಧಾರಾವಾಹಿ ನಿರ್ದೇಶಿಸಿದ್ದ ಆರೂರು ಜಗದೀಶ್ ಜೊತೆ ಜೊತೆಯಲಿ ಕತೆಗೆ ಆಕ್ಷನ್ ಕಟ್ ಹೇಳಿದ್ದಾರೆ.
ಈ ಧಾರಾವಾಹಿ ಕುರಿತಾಗಿ ಈಗಾಗಲೇ ಸಾಕಷ್ಟು ಪ್ರಚಾರ ಮಾಡಲಾಗಿದ್ದು, ಇದಕ್ಕಾಗಿ ರೂಪಿಸಲಾಗಿರುವ ಪ್ರಮೋಷನಲ್ ಸಾಂಗ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಹಿಟ್ ಆಗಿದೆ. ಅಲ್ಲದೇ, ಜೊತೆ ಜೊತೆಯಲಿ ಪ್ರೋಮೋ ಸಹ ಈಗಾಗಲೇ ವೀಕ್ಷಕರನ್ನು ಕುತೂಹಲದ ಘಟ್ಟಕ್ಕೆ ತಂದು ನಿಲ್ಲಿಸಿದೆ.
ಕಿರುತೆರೆಯಲ್ಲಿ ನಿರ್ಮಾಣವಾಗುತ್ತಿರುವ ಅತ್ಯಂತ ಅದ್ದೂರಿ ಧಾರಾವಾಹಿ ಇದಾಗಿದೆ.
ಅನಿರುದ್ ಕುರಿತಾಗಿ ಒಂದಷ್ಟು:
ಕನ್ನಡ ಚಿತ್ರರಂಗ ಹಾಗೂ ರಂಗಭೂಮಿ ಕಂಡ ಪ್ರತಿಭಾನ್ವಿತ ನಟ ಅನಿರುದ್ ಅವರು, ಸಾಹಸ ಸಿಂಹ, ದಿವಂಗತ ಡಾ.ವಿಷ್ಣುವರ್ಧನ್ ಅವರ ಅಳಿಯರಾಗಿದ್ದರೂ ಎಂದಿಗೂ ತಮ್ಮ ಪ್ರತಿಭೆ ಹಾಗೂ ಛಲದಿಂದಲೇ ಬೆಳೆದವರು.
ನಟನೆಯಲ್ಲಿ ಸಹಜತೆ ಹಾಗೂ ಪ್ರೌಢಿಮೆಯನ್ನು ರೂಢಿಸಿಕೊಂಡಿರುವ ಅನಿರುದ್ ಕೇವಲ ನಟನೆಗೆ ಮಾತ್ರ ಸೀಮಿತವಾಗದೇ ನಿರ್ದೇಶನದಲ್ಲೂ ಸಹ ಸೈ ಎನಿಸಿಕೊಂಡವರು. ಇಷ್ಟು ಮಾತ್ರವಲ್ಲದೇ ವಿಭಾ ಟ್ರಸ್ಟ್ ಸ್ಥಾಪಿಸಿ ಈ ಮೂಲಕ ಕಲೆಯನ್ನು ಉಳಿಸಿ, ಬೆಳೆಸುವ ಕಾರ್ಯಕ್ಕೆ ಪಣತೊಟ್ಟು ನಿಂತಿದ್ದಾರೆ.
ತಮ್ಮಲ್ಲಿ ಕಲಿತ ಯುವ ಪ್ರತಿಭೆಗಳನ್ನು ಸೇರಿಸಿಕೊಂಡು ಸಾಮಾಜಿಕ ಸಂದೇಶಗಳನ್ನು ಸಾರುವ ಹಲವು ಕಿರುಚಿತ್ರಗಳನ್ನು ಸಾಲುಸಾಲಾಗಿ ನಿರ್ದೇಶಿಸಿರುವ ಅನಿರುದ್ ಅವರನ್ನು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಅರಸಿಬಂದಿವೆ.
ಅನಿರುದ್ ಸಾಧನೆಯ ಹಾದಿ:
1) ಅತಿ ಹೆಚ್ಚು ಕಿರುಚಿತ್ರಗಳು 6 ಒಂದೇ ದಿನ ಬಿಡುಗಡೆ ಮಾಡಿದ್ದು, ಅವುಗಳು ಕೀರ್ತಿ ಇನೋವೇಶನ್ಸ್ ನಿರ್ಮಾಣದಲ್ಲಿ, ಬರಹಗಾರ ಮತ್ತು ನಿರ್ದೇಶಕರಾಗಿದ್ದ ಅನಿರುದ್ಧ ಜತಕರ ಅವರು ಬೆಂಗಳೂರು, ಕರ್ನಾಟಕದಲ್ಲಿ ಸೆಪ್ಟೆಂಬರ್18, 2018 ರಂದು ದಾಖಲೆಯನ್ನ ನಿರ್ಮಿಸಿದ್ದಾರೆ.
2) ಅತಿ ಹೆಚ್ಚು ಕಿರುಚಿತ್ರಗಳು 6 ಸಾಮಾಜದ ಸಮಸ್ಸೆಗಳನ್ನ ಕುರಿತಾಗಿ ಇದ್ದು ಒಂದೇ ದಿನ ಬಿಡುಗಡೆ ಮಾಡಿದ್ದು, ಅವುಗಳು ಕೀರ್ತಿ ಇನೋವೇಶನ್ಸ್ ನಿರ್ಮಾಣದಲ್ಲಿ, ಬರಹಗಾರ ಮತ್ತು ನಿರ್ದೇಶಕರಾಗಿದ್ದ ಅನಿರುದ್ಧ ಜತಕರ ಅವರು ಬೆಂಗಳೂರು, ಕರ್ನಾಟಕದಲ್ಲಿ ಸೆಪ್ಟೆಂಬರ್18, 2018 ರಂದು ದಾಖಲೆಯನ್ನ ನಿರ್ಮಿಸಿದ್ದಾರೆ.
3) ಅತಿ ಹೆಚ್ಚು ಕಿರುಚಿತ್ರಗಳು 6 ಯಾವುದೇ ಸಂಭಾಷಣೆ ಇಲ್ಲದೆ ಇದ್ದು ಒಂದೇ ದಿನ ಬಿಡುಗಡೆ ಮಾಡಿದ್ದು, ಅವುಗಳು ಕೀರ್ತಿ ಇನೋವೇಶನ್ಸ್ ನಿರ್ಮಾಣದಲ್ಲಿ, ಬರಹಗಾರ ಮತ್ತು ನಿರ್ದೇಶಕರಾಗಿದ್ದ ಅನಿರುದ್ಧ ಜತಕರ ಅವರು ಬೆಂಗಳೂರು, ಕರ್ನಾಟಕದಲ್ಲಿ ಸೆಪ್ಟೆಂಬರ್18, 2018 ರಂದು ದಾಖಲೆಯನ್ನ ನಿರ್ಮಿಸಿದ್ದಾರೆ.
4) ಅತಿ ಹೆಚ್ಚು ಕಿರುಚಿತ್ರಗಳು 6 ಬೇರೆ ಬೇರೆ ಶೈಲಿಗಳಲ್ಲಿ ಚಿತ್ರೀಕರಣ ಮಾಡಿ ಒಂದೇ ದಿನ ಬಿಡುಗಡೆ ಮಾಡಿದ್ದು, ಅವುಗಳು ಕೀರ್ತಿ ಇನೋವೇಶನ್ಸ್ ನಿರ್ಮಾಣದಲ್ಲಿ, ಬರಹಗಾರ ಮತ್ತು ನಿರ್ದೇಶಕರಾಗಿದ್ದ ಅನಿರುದ್ಧ ಜತಕರ ಅವರು ಬೆಂಗಳೂರು, ಕರ್ನಾಟಕದಲ್ಲಿ ಸೆಪ್ಟೆಂಬರ್18, 2018 ರಂದು ದಾಖಲೆಯನ್ನ ನಿರ್ಮಿಸಿದ್ದಾರೆ.
Discussion about this post