ರಿಯಾದ್: ನಾನು ನನ್ನ ಜೀವನದಲ್ಲಿ ಬಡತನವನ್ನು ಪುಸ್ತಕಗಳಲ್ಲಿ ಓದಿ ತಿಳಿದಿಲ್ಲ. ಬದಲಾಗಿ ನನ್ನ ಜೀವನದಲ್ಲಿಯೇ ಅನುಭವಿಸಿ, ಅದರಿಂದ ಪಾಠ ಕಲಿತು ಈ ಹಂತಕ್ಕೆ ಬಂದು ನಿಂತಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸೌದಿ ಅರೇಬಿಯಾ ಪ್ರವಾಸದ ವೇಳೆ ಮಾತನಾಡಿರುವ ಅವರು, ನಾನು ಯಾವುದೇ ರಾಜಕೀಯ ಕುಟುಂಬದ ಹಿನ್ನೆಲೆಯಿಂದ ಬಂದವನಲ್ಲ. ಯಾವ ರಾಜಕೀಯ ಪುಸ್ತಕಗಳನ್ನು ಓದಿಯೂ ಸಹ ಕಲಿತವನಲ್ಲ. ಬದಲಾಗಿ, ರೈಲ್ವೆ ಪ್ಲಾಟ್ ಫಾರಂನಲ್ಲಿ ಚಹಾ ಮಾಡುವ ಮಾರಿದ್ದೇನೆ. ಬಡತನವನ್ನು ನಾನು ಪುಸ್ತಕದಲ್ಲಿ ಓದಿ ತಿಳಿದಿಲ್ಲ. ಬದಲಾಗಿ, ನನ್ನ ಜೀವನದಲ್ಲಿಯೇ ಅನುಭವಿಸಿ, ಅದರಿಂದ ಪಾಠ ಕಲಿತು ಈ ಹಂತಕ್ಕೆ ಬಂದು ತಲುಪಿದ್ದೇನೆ ಎಂದು ತಮ್ಮ ಜೀವನದ ಹಿಂದಿನ ಘಟನೆಗಳನ್ನು ನೆನಪಿಸಿಕೊಂಡರು.
Discussion about this post