ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಭಾರತ–ಯುಎಇ ರಕ್ಷಣಾ ಸಹಭಾಗಿತ್ವದಲ್ಲಿ ಮಹತ್ವದ ಹೆಜ್ಜೆಯಾಗಿ, ಎಡ್ಜ್ ಘಟಕ ಕಾರಾಕಲ್ ಹಾಗೂ ಮೆಘಾ ಎಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ಸ್ ಸಮೂಹ ಗುಂಪಿನ ಐಕಾಂಮ್ ಟೆಲಿ ಲಿಮಿಟೆಡ್, ಭಾರತ ಕೇಂದ್ರ ಮೀಸಲು ಪಡೆ (ಸಿಆರ್‌ಪಿಎಫ್) ಗಾಗಿ #CRPF 200 ಅತ್ಯಾಧುನಿಕ ಸಿಎಸ್‌ಆರ್–338 ಸ್ನೈಪರ್ ರೈಫಲ್‌ಗಳನ್ನು ಪೂರೈಸುವ ಅವಕಾಶವನ್ನು ತನ್ನದಾಗಿಸಿಕೊಂಡಿದೆ.
ಈ ಸ್ನೈಪರ್ ರೈಫಲ್‌ಗಳನ್ನು ಹೈದರಾಬಾದ್‌ನಲ್ಲಿರುವ ಐಕಾಮ್–ಕಾರಾಕಲ್ ಸಣ್ಣ ಶಸ್ತ್ರಾಸ್ತ್ರ #SmallArms ಘಟಕದಲ್ಲಿ ತಯಾರಿಸಿ ಹಸ್ತಾಂತರಿಸಲು ಉದ್ದೇಶಿಸಲಾಗಿದೆ.
ಕಳೆದ ಏಪ್ರಿಲ್‌ನಲ್ಲಿ ಉದ್ಘಾಟನೆಯಾದ ಈ ಘಟಕವು ಭಾರತೀಯ ಸಶಸ್ತ್ರ ಪಡೆಗಳು #IndianArmedForces ಹಾಗೂ ಕೇಂದ್ರೀಯ ಸಶಸ್ತ್ರ ಪಡೆಗಳಿಗೆ ಶಸ್ತ್ರಾಸ್ತ್ರ ಪೂರೈಕೆಯ ಪ್ರಮುಖ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿದೆ.
ಕಾರಾಕಲ್ ಸಿಇಒ ಹಮಾದ್ ಅಲಾಮೇರಿ ಅವರು, “ಈ ತಂತ್ರಜ್ಞಾನ ವರ್ಗಾವಣೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ‘ಮೇಕ್ ಇನ್ ಇಂಡಿಯಾ’ ಉಪಕ್ರಮಕ್ಕೆ ಮಹತ್ವದ ಬೆಂಬಲವಾಗಿದ್ದು, ಯುಎಇ–ಭಾರತ ರಕ್ಷಣಾ ಸಹಭಾಗಿತ್ವದ ಐತಿಹಾಸಿಕ ಮೈಲಿಗಲ್ಲು” ಎಂದು ಬಣ್ಣಿಸಿದ್ದಾರೆ.
“ಈ ಒಪ್ಪಂದವು ಹೈದರಾಬಾದ್‌ನಲ್ಲಿ ಗುಣಮಟ್ಟದ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದರ ಜೊತೆ, ಭಾರತದ ರಕ್ಷಣಾ ಕೈಗಾರಿಕಾ ಪರಿಸರವನ್ನು ಬಲಪಡಿಸುತ್ತದೆ” ಎಂದು ಐಕಾಮ್ ನಿರ್ದೇಶಕ ಸುಮಂತ್ ಪಾಟೂರು ಹರ್ಷ ವ್ಯಕ್ತಪಡಿಸಿದ್ದಾರೆ.
ಸಿಎಸ್‌ಆರ್–338 ಸ್ನೈಪರ್ ರೈಫಲ್‌ಗಳನ್ನು 2025ರ ನಾಲ್ಕನೇ ತ್ರೈಮಾಸಿಕದಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಪೂರೈಸಲಾಗುವುದು. ಈ ಅತ್ಯಾಧುನಿಕ ಬೋಲ್ಟ್–ಆಕ್ಷನ್ ರೈಫಲ್ .338 ಲಾಪುವ ಮ್ಯಾಗ್ನಮ್‌ನಲ್ಲಿ ಚೇಂಬರ್ ಮಾಡಲ್ಪಟ್ಟಿದ್ದು, 27 ಇಂಚಿನ ಬ್ಯಾರೆಲ್ ಮತ್ತು 10 ರೌಂಡ್ ಮ್ಯಾಗಜೀನ್, ಟೆಲಿಸ್ಕೋಪ್ ನಂತಹ ಆಧುನಿಕ ಸಾಮಗ್ರಿಗಳನ್ನು ಹೊಂದಿರಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post