ಕಾಂಬೋಡಿಯಾ ದಕ್ಷಿಣ -ಪೂರ್ವ ಏಷ್ಯಾದಲ್ಲಿನ ಒಂದು ಪುಟ್ಟ ದೇಶ. ಸರಿಯಾಗಿ ಹೇಳಬೇಕೆಂದರೆ, ಥೈಲಾಂಡಿನ ಪಕ್ಕದಲ್ಲಿರುವ ದೇಶ. ಒಂದು ಕಾಲಕ್ಕೆ ಹಿಂದೂ ಸಾಮ್ರಾಜ್ಯವಾಗಿ ‘ಖಮೇರ್ ರಾಜವಂಶದ’ (Khmer dynasty) ಆಳ್ವಿಕೆಗೆ ಒಳಪಟ್ಟ ದೇಶ. ಕಾಂಬೋಡಿಯಾದ ಆಂಗ್‌ಕಾರ್ ವಾಟ್‌ನ (Angkor wat) ದೇವಸ್ಥಾನ ಅತಿ ದೊಡ್ಡ ದೇವಾಲಯ ಸಂಕೀರ್ಣ ಎಂಬ ಖ್ಯಾತಿ ಹೊಂದಿದೆ. ಸುಮಾರು 162.6 ಹೆಕ್ಟೇರ್‌ನಷ್ಟು ವಿಸ್ತಾರವಾಗಿದೆ. ಮೂಲತಃ ಹಿಂದು ದೇವಾಲಯವಾಗಿದ್ದ ಈ ಸ್ಥಳ ಕಾಲಾಂತರದಲ್ಲಿ ಬೌದ್ಧ ದೇವಾಲಯವಾಗಿ ಮಾರ್ಪಟ್ಟಿದೆ. ಸೂರ್ಯವರ್ಮನ್-2 ನಿಂದ ಸ್ಥಾಪಿಸಲ್ಪಟ್ಟ ಈ ದೇವಸ್ಥಾನ ವಿಶ್ವಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇಷ್ಟು ಶ್ರೀಮಂತ ಇತಿಹಾಸ ಹೊಂದಿರುವ ಈ ದೇಶದ ಜನಸಂಖ್ಯೆ ನಮ್ಮ ಬೆಂಗಳೂರಿನ ಎರಡರಷ್ಟಿರಬಹುದು. ಅಂದರೆ 1.5 ಕೋಟಿ.
ಇಂತಹ ದೇಶ ಸದ್ಯದ ಪರಿಸ್ಥಿತಿಯಲ್ಲಿ ಕೆಟ್ಟ ಪರಿಸ್ಥಿತಿಯೊಂದನ್ನು ಎದುರಿಸುತ್ತಿದೆ. ಪರಿಸ್ಥಿತಿಗೆ ತುಂಬಾ ದೊಡ್ಡ ಇತಿಹಾಸವೇನೂ ಇಲ್ಲ. ಹುಡುಕುತ್ತಾ ಹೊರಟರೆ 40 ರಿಂದ 45 ವರ್ಷಗಳ ಹಿಂದೆ ಶುರುವಾದ ಯುದ್ಧ ಕಾರಣ. ಏನು ಆ ಪರಿಸ್ಥಿತಿ ಅಂದರೆ, ಭೂ ಸ್ಫೋಟಕಗಳು ಅರ್ಥಾತ್ ಲ್ಯಾಂಡ್‌ಮೈನ್ಸ್. ಈ ಲ್ಯಾಂಡ್‌ಮೈನ್‌ಗಳನ್ನು ಹಲವು ಸರ್ಕಾರಗಳೇ ಹುದುಗಿಸಿಟ್ಟಿವೆ. ಲಾಸ್ ನೋಲ್, ಖಮೇರ್ ರೂಜ್, ಹೆಂಗ್ ಸಾಮ್ರಿನ್, ಹನ್ ಸೇನ್‌ರ ಆಳ್ವಿಕೆಯ ಕಾಲದಲ್ಲಿ ಈ ಸ್ಫೋಟಕಗಳನ್ನು ಇಡಲಾಗಿದೆ. ಈ ಲ್ಯಾಂಡ್‌ಮೈನ್‌ಗಳಿಂದಾಗಿ 40,000 ಜನ ಅಂಗವಿಕಲರಾಗಿದ್ದಾರೆ. ಇದು ಪ್ರಪಂಚದಲ್ಲಿಯೇ ಲ್ಯಾಂಡ್‌ಮೈನ್‌ಗಳಿಂದಾಗಿ ಇರುವ ದೇಶ. ಕಾಂಬೋಡಿಯನ್ ಮೈನ್ ಆ್ಯಕ್ಷನ್ ಸೆಂಟರ್ (CMAC) ಪ್ರಕಾರ ದೇಶದಲ್ಲಿ ಇನ್ನೂ 40 ಲಕ್ಷದಿಂದ 60 ಲಕ್ಷದಷ್ಟು ಲ್ಯಾಂಡ್‌ಮೈನ್‌ಗಳು ಸಿಡಿಯದೆ ಬಲಿಗಾಗಿ ಕಾದು ಕುಳಿತಿವೆ.
ಇವನ್ನು ಆ್ಯಂಟಿ- ಪರ್ಸನಲ್ ಮೈನ್ಸ್ (Anti-personal mines) ಎಂದು ಕರೆಯುತ್ತಾರೆ. ಇವನ್ನು ನೆಲದಲ್ಲಿ ಅಲ್ಲಲ್ಲಿ ಹುದುಗಿಸಿಡಲಾಗಿರು ತ್ತದೆ. ಈ ಮೈನ್‌ಗಳ ಮೇಲೆ ಮನುಷ್ಯ ಕಾಲಿಟ್ಟ ತಕ್ಷಣ ಸಕ್ರಿಯಗೊಳ್ಳುತ್ತವೆ ಮತ್ತು ಭಾರೀ ತೀವ್ರತೆಯಲ್ಲಿ ಸಿಡಿಯುತ್ತವೆ. ಹಲವಾರು ಪ್ರಕರಣಗಳಲ್ಲಿ ಆ ವ್ಯಕ್ತಿಯ ಕಾಲು ಸಂಪೂರ್ಣ ಈ ಮೈನ್‌ಗಳನ್ನು ಮನುಷ್ಯನ ಜೀವಕ್ಕೆ ಹಾನಿಯಾಗದಂತೆ ಮತ್ತು ಅಂಗವಿಕಲನನ್ನಾಗಿ ಮಾಡುವಷ್ಟು ತೀವ್ರದಲ್ಲಿ ಸಿಡಿಯುವಂತೆ ಸಿದ್ಧಪಡಿಸಲಾಗುತ್ತದೆ. ಕಾರಣ ಒಬ್ಬ ಸೈನಿಕ ಗಾಯಗೊಂಡಾಗ ಸಹಾಯಕ್ಕೆ ಬರುವ ಇತರೆ ಸೈನಿಕರು ಸಹ ಗಾಯಗೊಳ್ಳುತ್ತಾರೆ. ಈ ಯುದ್ಧದ ಸಮಯದಲ್ಲಿ ಎಷ್ಟು ಲ್ಯಾಂಡ್‌ಮೈನ್ ಗಳನ್ನು ಇಡಲಾಗಿದೆಯೆಂದರೆ ಅದನ್ನು ಇಟ್ಟ ವ್ಯಕ್ತಿಯೇ ತಾನು ಇಟ್ಟ ಜಾಗವನ್ನು ಮರೆಯುವಷ್ಟು.
(ಮುಂದುವರೆಯುವುದು)
Discussion about this post