ಕಾಂಬೋಡಿಯನ್ ಮೈನ್ ವಿಕ್ಟಿಮ್ ಇನ್‌ಪೋರ್ಮೇಷನ್ ಸರ್ವಿಸ್ (CMVIS) ಪ್ರಕಾರ ಈ ದೇಶದಲ್ಲಿ ಲ್ಯಾಂಡ್‌ಮೈನ್‌ಗಳಿಂದಾಗಿ ಅತಿ ಹೆಚ್ಚು ಜನ ಜೀವ ಕಳೆದುಕೊಳ್ಳುತ್ತಿದ್ದಾರೆ. ಇಲ್ಲವೇ ಜನ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 89 ಜನ ಅಂಗವಿಕಲರಾಗಿದ್ದಾರೆ.
ಕುತೂಹಲಕ್ಕಾಗಿ ಹುಡುಕಲು ಮತ್ತು ಅಧ್ಯಯನ ನಡೆಸಲು ಬರುವ ಯುವಕರೇ ಹೆಚ್ಚಾಗಿ ಈ ಲ್ಯಾಂಡ್‌ಮೈನ್‌ಗೆ ಬಲಿಯಾಗುತ್ತಿದ್ದಾರೆ.
ಯಾವುದೇ ನಕಾಶೆ ಇಲ್ಲವೇ, ಸರಿಯಾದ ಮಾಹಿತಿಯಿಲ್ಲದೆ ಈ ಲ್ಯಾಂಡ್‌ಮೈನ್‌ಗಳನ್ನು ಹುಡುಕುವುದು ತುಂಬಾ ಕಷ್ಟ. ಇವುಗಳನ್ನು ಹುಡುಕಲು ಹಲವು ವಿಶಿಷ್ಟ ಉಪಕರಣಗಳು ಬೇಕಾಗುತ್ತದೆ. ನುರಿತ ತಜ್ಞರು ಬೇಕಾಗುತ್ತದೆ. ಹಾಗಾಗಿ ಇವನ್ನು ಹುಡುಕಿ ನಿಷ್ಕ್ರಿಯಗೊಳಿಸಲು ಸಾಕಷ್ಟು ಹಣವನ್ನು ವ್ಯಯಿಸಬೇಕಾಗುತ್ತಿದೆ.
ಲೋಟಸ್ ಜಾಟರೀಸ್ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕಿ ಎರಿಕಾ ಕೇವ್‌ನಿ ಪ್ರಕಾರ, ಒಂದು ಲ್ಯಾಂಡ್‌ಮೈನ್‌ನ್ನು ಸಿದ್ಧಪಡಿಸಿ ಸಕ್ರಿಯಗೊಳಿಸಲು ಮೂರು ಅಮೆರಿಕನ್ ಡಾಲರ್ ಸಾಕು. ಆದರೆ ಒಂದು ಜೀವಂತ ಲ್ಯಾಂಡ್‌ಮೈನ್‌ನ್ನು ಹುಡುಕಿ ನಿಷ್ಕ್ರಿಯಗೊಳಿಸಲು ಒಂದು ಸಾವಿರ ಅಮೆರಿಕನ್ ಡಾಲರ್ (1000) ಬೇಕು. ಒಂದು ಅಂದಾಜಿನ ಪ್ರಕಾರ ಕಾಂಬೋಡಿಯಾ ಇನ್ನು ಹಲವು ವರ್ಷಗಳಷ್ಟು ಪ್ರಯತ್ನ ನಡೆಸಿದರೂ ಲ್ಯಾಂಡ್ ಮೈನ್‌ಗಳನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಲು ಸಾಧ್ಯವಿಲ್ಲವೆಷ್ಟು ಲ್ಯಾಂಡ್ ಮೈನ್‌ಗಳನ್ನು ಇಡಲಾಗಿದೆ.
ಈ ಲ್ಯಾಂಡ್‌ಮೈನ್‌ಗಳನ್ನು ಹಳ್ಳಿಗಾಡಿನ ಜನರನ್ನು ತುಂಬಾನೇ ಬಾಧಿಸುತ್ತಿದೆ. ಸಮಸ್ಯೆಗಳು ಕೇವಲ ಲ್ಯಾಂಡ್‌ಮೈನ್ ಸ್ಫೋಟದಿಂದ ಗಾಯಗೊಂಡ ವ್ಯಕ್ತಿಯನ್ನು ಮಾತ್ರ ಬಾಧಿಸುವುದಿಲ್ಲ. ಬದಲಿಗೆ ಇಡೀ ಕುಟುಂಬವನ್ನೇ ಬಾಧಿಸುತ್ತದೆ.
ಉದಾಹರಣೆಗೆ, ‘ಟುವಾನ್ ಸಂಫಾ’ ಎಂಬ 16ರ ಬಾಲೆಯ ಬದುಕು ಈಕೆಯ ತಂದೆ ಬಿದರನ್ನು ಅರಸಿ ಕಾಡಿನಲ್ಲಿ ಅಲೆಯುವಾಗ ಅಕಸ್ಮಾತಾಗಿ ಲ್ಯಾಂಡ್‌ಮೈನ್ ಮೇಲೆ ಕಾಲಿಟ್ಟಾಗ ಉಂಟಾದ ಸ್ಫೋಟದಿಂದ ಬೆರಳುಗಳನ್ನು ಮತ್ತು ತನ್ನ ಎರಡು ಕಣ್ಣುಗಳನ್ನು ಕಳೆದುಕೊಳ್ಳಬೇಕಾಯಿತು. ಸ್ಫೋಟದ ನಂತರ ಸತತ 10 ಘಂಟೆಗಳ ಕಾಲ ಯಾವುದೇ ವೈದ್ಯಕೀಯ ಉಪಚಾರವಿಲ್ಲದೆ ಬದುಕಿದ್ದೇ ಒಂದು ಪವಾಡ. ಈಗಿನ ಪರಿಸ್ಥಿತಿಯಲ್ಲಿ ಟುವಾನಳೇ ತನ್ನ ತಂದೆಯ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗಿದೆ. (ಮುಂದುವರೆಯುವುದು)
Discussion about this post