ಒಂದು ಮಾಹಿತಿಯಂತೆ, 1975ರಲ್ಲಿ ಯುದ್ಧಗಳು ಪ್ರಾರಂಭವಾದ ನಂತರ ಇಲ್ಲಿಯವರೆಗೂ ಸುಮಾರು 20 ಸಾವಿರ ಜನ ಲ್ಯಾಂಡ್‌ಮೈನ್‌ಗಳಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಕಾಂಬೋಡಿಯಾವನ್ನು ಲ್ಯಾಂಡ್‌ಮೈನ್ ಮುಕ್ತಗೊಳಿಸಲು CMPC ಸಾಕಷ್ಟು ಪ್ರಯತ್ನ ಪಡುತ್ತಿದೆ. ಈ ಕಾರ್ಯದಲ್ಲಿ ಕೇವಲ ಮನುಷ್ಯರು ಮಾತ್ರವಲ್ಲದೆ ಇಲಿಗಳೂ ಸಹ ಸಹಾಯ ಮಾಡುತ್ತಿವೆ.
ಹೌದು, Gambian Pouched Rats ಗಾತ್ರದಲ್ಲಿ ಸಾಮಾನ್ಯ ಇಲಿಗಳಿಗಿಂತ ದೊಡ್ಡವು. ಈ ಇಲಿಗಳ ದೃಷ್ಟಿ ಸ್ವಲ್ಪ ಆದರೆ ಇವುಗಳ ವಾಸನಾಗ್ರಹಿಕೆ ಮತ್ತು ಶಬ್ಧ ಆಲಿಸುವ ಶಕ್ತಿ ಅಧಿಕ. ತಮ್ಮ ಈ ಶಕ್ತಿಯಿಂದ ಇವು ಲ್ಯಾಂಡ್‌ಮೈನ್‌ಗಳನ್ನು ಪತ್ತೆ ಹಚ್ಚುತ್ತವೆ. ಇಲಿಗಳನ್ನು ಉಪಯೋಗಿಸುವುದರಿಂದ ಲ್ಯಾಂಡ್‌ಮೈನ್ ಪತ್ತೆಕಾರ್ಯ ತುಂಬ ಚುರುಕಾಗಿ ನಡೆಯುತ್ತದೆ ಮತ್ತು ಲ್ಯಾಂಡ್‌ಮೈನ್‌ಗಳು ಸ್ಫೋಟವಾಗುವುದಿಲ್ಲ. ಏಕೆಂದರೆ ಈ ಇಲಿಗಳ ತೂಕ ಲ್ಯಾಂಡ್ ಮೈನನ್ನು ಸಕ್ರಿಯಗೊಳಿಸಲು ಸಾಕಾಗುವುದಿಲ್ಲ.
ಇಲಿಗಳನ್ನು ಬಳಸುವುದರಿಂದ ಈ ಕಾರ್ಯ 5 ರಿಂದ 6 ಪಟ್ಟು ಚುರುಕುಗೊಳ್ಳುತ್ತದೆ. ಇಲಿಗಳಿಂದ 100 ಸ್ಕ್ವೇರ್ ಮೀಟರ್ ಭೂಮಿಯನ್ನು ಸಂಪೂರ್ಣವಾಗಿ ಪರೀಕ್ಷಿಸಲು ನಿಮಿಷಕ್ಕಿಂತ ಕಡಿಮೆ ಸಮಯ ಸಾಕು. ಆದರೆ ಅಷ್ಟೇ ಭೂಮಿಯನ್ನು ಪರೀಕ್ಷಿಸಲು ಮನುಷ್ಯರಿಗೆ 4 ರಿಂದ 5 ದಿನ ಬೇಕು.
ಇಲಿಗಳು ಒಂದು ತಿಂಗಳ ಮರಿಯಾಗಿರುವಾಗಲೇ ಅವುಗಳಿಗೆ ಟ್ರೈನಿಂಗ್ ಶುರುವಾಗುತ್ತದೆ. ಟ್ರೈನಿಂಗ್ ಪಡೆದ ಇಲಿಗಳನ್ನು HeroRats ಎಂದು ಕರೆಯುತ್ತಾರೆ. ಲ್ಯಾಂಡ್‌ಮೈನ್‌ಗಳನ್ನು ಹುಡುಕುವ ನಾಯಿಗಳನ್ನು ಟ್ರೈನ್ ಮಾಡುವ ವೆಚ್ಚಕ್ಕೆ ಹೋಲಿಸಿದರೆ, ಇಲಿಗಳನ್ನು ಟ್ರೈನ್ ಮಾಡುವ ವೆಚ್ಚ ತುಂಬಾ ಕಡಿಮೆ. ಒಂಭತ್ತು ತಿಂಗಳ ಕಾಲ ಒಂದು ಇಲಿಯನ್ನು ಟ್ರೈನ್ ಮಾಡಲು 7,300 ಅಮೆರಿಕನ್ ಸಾಕು. ಆದರೆ ಲ್ಯಾಂಡ್‌ಮೈನ್ ಪತ್ತೆ ಹಚ್ಚುವ ನಾಯಿಯನ್ನು ಟ್ರೈನ್ ಮಾಡಲು 25 ಸಾವಿರ ಅಮೆರಿಕನ್ ಡಾಲರ್ ಬೇಕಾಗುತ್ತದೆ.
ಇಲಿಗಳು ಲ್ಯಾಂಡ್‌ಮೈನ್‌ಗಳನ್ನು ಪತ್ತೆಹಚ್ಚಿದ ನಂತರ ತಮ್ಮ ಉಗುರಿನಿಂದ ನೆಲದ ಮೇಲೆ ಗುರುತು ಮಾಡುತ್ತವೆ. ಮತ್ತು ಪ್ರತಿ ಬಾರಿ ಸರಿಯಾಗಿ ಪತ್ತೆ ಹಚ್ಚಿದಾಗ ಅವುಗಳಿಗೆ ಬಾಳೆ ಹಣ್ಣೊಂದನ್ನು ಬಹುಮಾನವಾಗಿ ಕೊಡಲಾಗುತ್ತದೆ.
(ಮುಂದುವರೆಯುವುದು)
Discussion about this post