ಕಾಂಬೋಡಿಯನ್ ಸೆಲ್ಫ್ ಹೆಲ್ಪ್ ಡೀ ಮೈನಿಂಗ್
ಸಮಾಜಕ್ಕೆ ಉಪಕಾರಿಯಾಗಿ, ದೇಶದ ನಾಗರಿಕರಿಗೆ ಸಹಾಯ ಮಾಡಲು ಮುಂದಾದ ಫಲವಾಗಿ ಅಕಿರಾ ಜೈಲಿನ ದರ್ಶನ ಮಾಡಬೇಕಾಯಿತು. ಅದು ಎರಡೆರಡು ಬಾರಿ. ಕಾಂಬೋಡಿಯಾದ ಸರ್ಕಾರಿ ಅಧಿಕಾರಿಗಳು ಯಾವುದೇ ತರಬೇತಿಯಿಲ್ಲದೆ, ಪ್ರಮಾಣ ಪತ್ರವಿಲ್ಲದೆ ಡೀ ಮೈನಿಂಗ್ (ಲ್ಯಾಂಡ್ಮೈನ್ ನಿಷ್ಕ್ರಿಯಗೊಳಿಸುವಿಕೆ) ಅಕಿರಾನನ್ನು 2001ರಲ್ಲಿ ಮತ್ತು 2006ರಲ್ಲಿ ಜೈಲಿಗೆ ತಳ್ಳಲಾಯಿತು ಮತ್ತು ಲ್ಯಾಂಡ್ಮೈನ್ ಮ್ಯೂಸಿಯಂನ್ನು ಮುಚ್ಚಿಸಿದರು.
2005ರಲ್ಲಿ ಲಂಡನ್ಗೆ ತೆರಳಿದ ಅಕಿರಾ, ಅಲ್ಲಿ ಸ್ಫೋಟಕ ವಿಲೇವಾರಿಯ (Ordnance Disposal) ಮೇಲೆ ಇಂಟರ್ನ್ಯಾಷನಲ್ ಸ್ಕೂಲ್ ಆಫ್ ಸೆಕ್ಯೂರಿಟಿ ಅಂಡ್ ಎಕ್ಸ್ಪ್ಲೋಸಿವ್ಸ್ ಎಜುಕೇಷನ್ನಿಂದ ತರಬೇತಿ ಪಡೆದ. 2005ರಲ್ಲಿ ಲ್ಯಾಂಡ್ಮೈನ್ ರಿಲೀಫ್ ಫಂಡ್ನ (Landmine Relef Fund) ಸಹಾಯದೊಂದಿಗೆ ವಿಯೆಟ್ನಾಂ ವೆಟರನ್ಸ್ ಮೈನ್ ಕ್ಲಿಯರಿಂಗ್ ಟೀಮ್ – ಕಾಂಬೋಡಿಯಾ ಮತ್ತು ಆಸ್ಟ್ರೇಲಿಯಾದ ಸೈನಿಕರಿಂದ ತರಬೇತಿ ಪಡೆದು ನಿಷ್ಕ್ರಿಯಗೊಳಿಸುವ ಪ್ರಮಾಣಪತ್ರ ಪಡೆದ ಮತ್ತು ಕಾಂಬೋಡಿಯನ್ ಸೆಲ್ಫ್ ಹೆಲ್ಪ್ ಡೀಮೈನಿಂಗ್ (CSHD) ಎಂಬ ಎನ್ಜಿಒ ಒಂದನ್ನು ಸ್ಥಾಪನೆ ಮಾಡಿದ್ದಾನೆ.
ಈ ಎನ್ಜಿಒ ಕಾಂಬೋಡಿಯನ್ ಮೈನ್ ಆ್ಯಕ್ಷನ್ ಅಥಾರಿಟಿಯಿಂದ ಅಧಿಕೃತ ಮಾನ್ಯತೆಯನ್ನು ಹೊಂದಿದೆ. CMAA ಕಾಲಕಾಲಕ್ಕೆ ಎನ್ಜಿಒನ ಇನ್ಸ್ಪೆಕ್ಷನ್ ಮಾಡುತ್ತದೆ. ಅಮೆರಿಕಾದ ಚ್ಯಾರಿಟಿ ಸಂಸ್ಥೆ Landmine Relef Fund ತನ್ನೊಬ್ಬ ಪ್ರತಿನಿಧಿಯನ್ನು ಕಾಂಬೋಡಿಯಾದಲ್ಲಿ CSHD ಜೊತೆ ಕೈ ಜೋಡಿಸಲು ನೇಮಿಸಿದೆ.
ಚಿತ್ರನಟ ರಿಚರ್ಡ್ ಫಿಟೌಸಿ ಮತ್ತು ಟಾಮ್ ಶಾಡಿಯಾಕ್ ಡಿಮೈನಿಂಗ್ ಅಕಿರಾನ ಜೊತೆ ಕೈ ಜೋಡಿಸಿ ಸಾಕಷ್ಟು ಅರ್ಥಿಕ ನೆರವು ನೀಡಿದ್ದಾನೆ. ಇಷ್ಟೆಲ್ಲಾ ಕಷ್ಟಗಳನ್ನೆದುರಿಸಿದ ಅಕಿರಾ 2008ರಲ್ಲಿ ತನ್ನ ಲ್ಯಾಂಡ್ಮೈನ್ ಮ್ಯೂಸಿಯಂನ್ನು ಸ್ಥಳಾಂತರಿಸಿ ಮತ್ತೊಮ್ಮೆ ಪ್ರವಾಸಿಗರು ವೀಕ್ಷಿಸಲು ಅನುವು ಮಾಡಿಕೊಟ್ಟಿದ್ದಾನೆ.
(ಮುಂದುವರೆಯುವುದು)
Discussion about this post