ಶ್ರೀನಗರ: ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರ ನಿನ್ನೆ ಸೇನಾ ಕಾನ್ವೆ ಮೇಲೆ ನಡೆಸಿದ ಐಇಡಿ ಸ್ಫೋಟದಲ್ಲಿ ಗಾಯಗೊಂಡಿದ್ದ ಇಬ್ಬರು ಯೋಧರು ಇಂದು ವೀರಸ್ವರ್ಗ ಸೇರಿದ್ದಾರೆ.
ಅರಿಹಾಲ್-ಲಸ್ಸಿಪೋರಾ ರಸ್ತೆಯಲ್ಲಿ ಉಗ್ರರು 44 ರಾಷ್ಟ್ರೀಯ ರೈಫ್ಲ್‌್ಸ ಪಡೆಗಳ ಮೊಬೈಲ್ ಗಸ್ತು ವಾಹನವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದರು. ಪರಿಣಾಮ, 9 ಯೋಧರು, ಇಬ್ಬರು ನಾಗರಿಕರು ಗಾಯಗೊಂಡಿದ್ದರು. ಇದರಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಯೋಧರು ಇಂದು ಕೊನೆಯುಸಿರೆಳೆದಿದ್ದಾರೆ.
ಈ ವೇಳೆಯಲ್ಲಿ ಗಾಯಗೊಂಡಿದ್ದ ಸೇನಾ ವಾಹನದ ಚಾಲಕನ ಸ್ಥಿತಿ ಗಂಭೀರವಾಗಿದ್ದು, ಇವರಿಗೆ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ.
Discussion about this post