ಇಸ್ಲಾಮಾಬಾದ್: ಬಾಲ್ಕೋಟ್’ನಲ್ಲಿ ನುಗ್ಗಿ ಉಗ್ರರ ಅಡಗುತಾಣಗಳ ಮೇಲೆ ಭಾರತೀಯ ವಾಯುಸೇನೆ ದಾಳಿ ನಡೆಸಿದ ನಂತರ ಯುದ್ದದ ಭೀತಿಯಿಂದ ಹೆದರಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಭಾರತವನ್ನು ಉದ್ದೇಶಿಸಿ ಭಯ ಮಿಶ್ರಿತ ಮಾತುಗಳನ್ನು ಆಡಿದ್ದಾರೆ.
ಈ ಕುರಿತಂತೆ ಇಂದು ಮಾತನಾಡಿರುವ ಇಮ್ರಾನ್, ಒಂದು ವೇಳೆ ಯುದ್ಧ ಘೋಷಣೆಯಾದರೆ ಅದರ ನಿಯಂತ್ರಣ ನನ್ನ ಹಾಗೂ ನರೇಂದ್ರ ಮೋದಿ ಅವರ ಕೈಯಲ್ಲಿ ಇರುವುದಿಲ್ಲ. ಭಯೋತ್ಪಾದನೆ ವಿರುದ್ಧದ ಮಾತುಕತೆಯಲ್ಲಿ ನೀವು ಈ ಮಾರ್ಗವನ್ನೇ ಬಯಸುತ್ತೀರಾದರೆ ನಾವು ಅದಕ್ಕೆೆ ಸಿದ್ದರಿದ್ದೇವೆ. ಆದರೆ ಅದಕ್ಕಿಂತಲೂ ನಮ್ಮಲ್ಲಿ ಉತ್ತಮ ಮಾರ್ಗವಿದೆ. ಅದು ನಾವಿಬ್ಬರೂ ಕುಳಿತು ಮಾತನಾಡಿ, ಬಗೆಹರಿಸಿಕೊಳ್ಳುವುದು ಎಂದು ಹೇಳುವ ಮೂಲಕ ಯುದ್ಧ ಬೇಡ ಎಂಬ ಭೀತಿಯನ್ನು ಪರೋಕ್ಷವಾಗಿ ಹೊರಹಾಕಿದ್ದಾರೆ.
Discussion about this post