ಪಂಜಾಬ್: ಇನ್ನು ಮುಂದೆ ನಮ್ಮ ಸೇನೆಯ ಒಬ್ಬನೇ ಒಬ್ಬ ಯೋಧ ಹುತಾತ್ಮನಾದರೆ, ಅದಕ್ಕೆ ಪ್ರತಿಯಾಗಿ ಇಬ್ಬರು ಪಾಕಿಸ್ಥಾನಿ ಯೋಧರ ತಲೆ ತೆಗೆಯುತ್ತೇವೆ ಎಂಬ ಕಠಿಣ ಸಂದೇಶವನ್ನು ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ರವಾನಿಸಿದ್ದಾರೆ.
ಈ ಕುರಿತಂತೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪಾಕಿಸ್ಥಾನಿಗಳಿಗೆ ಈ ಭಾಷೆಯೇ ಅರ್ಥವಾಗುವುದು. ಅಂತಹ ಭಾಷೆಯ ಕ್ರಮವನ್ನೇ ತೆಗೆದುಕೊಳ್ಳಬೇಕು. ನಾವು ಈಗಾಗಲೇ ಹೇಳಿರುವಂತೆ ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೈಗೊಳ್ಳುವ ಯಾವುದೇ ನಿರ್ಧಾರಕ್ಕೆ ನಮ್ಮ ಬೆಂಬಲವಿದೆ ಎಂದಿದ್ದಾರೆ.
ಪುಲ್ವಾಮಾ ದಾಳಿ ವಿಚಾರದಲ್ಲಿ ಸಾಕ್ಷಿ ನೀಡಿ ಎಂದು ಕೇಳಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್’ಗೆ ತಿರುಗೇಟು ನೀಡಿರುವ ಅವರು, ಇನ್ನು ಏನು ಸಾಕ್ಷಿ ಬೇಕು ನಿಮಗೆ. ದಾಳಿ ರೂವಾರಿ ಮಸೂದ್ ಅಜರ್ ನಿಮ್ಮಲ್ಲಿಯೇ ಕುಳಿತಿದ್ದಾನೆ. ನಮ್ಮ ನೆಲೆಗಳಿಗೆ ಬಂದು ಕುಳಿತಿರುವ ಉಗ್ರರನ್ನು ನಮ್ಮ ಸೇನಾಪಡೆಗಳು ಬಲಿ ಹಾಕುತ್ತಿದ್ದು, ಈ ಶವಗಳನ್ನು ತೋರಿಸಿದರೆ ನಿಮಗೆ ಸಾಕ್ಷಿ ದೊರೆಯುತ್ತದೆಯೇ? ಎಂದು ಪ್ರಶ್ನಿಸಿರುವ ಅಮರೀಂದರ್ ಸಿಂಗ್, ಯಾವ ರೀತಿಯ ಹೇಳಿಕೆಯನ್ನು ನೀವು ನೀಡುತ್ತೀರಿ? ಸತ್ಯ ಏನು ಎಂಬುದನ್ನು ಇಡಿಯ ಜಗತ್ತೇ ತಿಳಿದಿದೆ ಎಂದು ಚಾಟಿ ಬೀಸಿದ್ದಾರೆ.
Discussion about this post