ಬೆಂಗಳೂರು: ರಾಜ್ಯದಲ್ಲೇ ಹೈವೋಲ್ಟೇಜ್ ಲೋಕಸಭಾ ಕ್ಷೇತ್ರವೆಂದೇ ಖ್ಯಾತವಾದ ಮಂಡ್ಯದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಸುಮಲತಾ ಅಂಬರೀಶ್ ಅವರ, ತಮಗೆ ಧೈರ್ಯ ತುಂಬಲು ಬರುವಂತೆ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.
ಈ ಕುರಿತಂತೆ ತಮ್ಮ ಫೇಸ್’ಬುಕ್ ಪೇಜಿನಲ್ಲಿ ಪೋಸ್ಟ್ ಮಾಡಿರುವ ಅವರು, ಮಂಡ್ಯ ಜನತೆಯ ನಿರ್ಧಾರದಂತೆ ಮಂಡ್ಯ ಲೋಕಸಭೆ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತಿದ್ದೇನೆ. ನನಗೆ ಧೈರ್ಯ ತುಂಬಲು ನೀವೆಲ್ಲಾ ಬರಬೇಕು, ನಿಮ್ಮೆಲ್ಲರ ಆಗಮನ ನನಗೆ ಶ್ರೀರಕ್ಷೆ ಎಂದು ಅಭಿಮಾನಿಗಳಲ್ಲಿ, ಮಂಡ್ಯ ಜನತೆಯಲ್ಲಿ ಮನವಿ ಮಾಡಿದ್ದಾರೆ.
ನನ್ನ ಜೀವನದಲ್ಲಿ ಎದುರಾದ ಹಠಾತ್ ಕ್ಷಣಗಳು, ಆಗ ಎದುರಿಸಿದ ಪರಿಸ್ಥಿತಿ, ಮಂಡ್ಯ ಜನತೆಯ ಪ್ರೀತಿ ಅಭಿಮಾನಗಳಿಂದ ತಾನು ಇಂದು ಜೀವನದಲ್ಲಿ ಪುಟಿದೇಳಲು ಸಾಧ್ಯವಾಯಿತು ಎಂದು ಸುದೀರ್ಘವಾದ ಪತ್ರವನ್ನು ಸುಮಲತಾ ಬರೆದಿದ್ದಾರೆ.
Discussion about this post