ಮಂಗಳೂರು: ಪ್ರಸಕ್ತ ಚುನಾವಣೆಯಲ್ಲಿ ಮಹಾಘಟಬಂಧನ್ ಅಧಿಕಾರಕ್ಕೆ ಬಂದರೆ ಎಚ್.ಡಿ. ದೇವೇಗೌಡ ಪ್ರಧಾನಿಯಾಗುವುದಿಲ್ಲ. ಬದಲಾಗಿ, ಕೇಂದ್ರ ಸರ್ಕಾರಕ್ಕೆ ಸಲಹೆಗಾರರಾಗುತ್ತಾರೆ ಎಂದು ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ನಿನ್ನೆ ರಾತ್ರಿ ಮಂಗಳೂರಿನಲ್ಲಿ ಮಾತನಾಡಿರುವ ಅವರು, ಮಹಾಘಟಬಂಧನ್ ಅಧಿಕಾರಕ್ಕೆ ಬಂದರೆ ದೇವೇಗೌಡರು ಪ್ರಧಾನಿಯಾಗುವುದಿಲ್ಲ. ಆದರೆ, ದೇಶದ ಹಿತದೃಷ್ಠಿಯಿಂದ ಹಾಗೂ ಭದ್ರತೆ ದೃಷ್ಠಿಯಿಂದ ಕೈಗೊಳ್ಳಬೇಕಾದ ಸಲಹೆಗಳನ್ನು ನೀಡುವ ವಿಶೇಷ ಸಲಹೆಗಾರರಾಗಿರುತ್ತಾರೆ. ಒಂದು ರೀತಿಯಲ್ಲಿ ಎರಡನೆಯ ಪ್ರಧಾನಿಯಲ್ಲೇ ಕಾರ್ಯ ನಿರ್ವಹಿಸುತ್ತಾರೆ ಎಂದಿದ್ದಾರೆ.
Discussion about this post