ರಾಜಕಾರಣಿಗೆ ಈ ಕಾರಣಕ್ಕೆ ಶನಿ ಯಾಕೆ ಬಲಿಷ್ಠನಾಗಿರಬೇಕು: ಪ್ರಕಾಶ್ ಅಮ್ಮಣ್ಣಾಯ ವಿಶ್ಲೇಷಣೆ
ರಾಜಕಾರಣಿಗೆ ಮುಖ್ಯವಾಗಿ ಶನಿ ಗ್ರಹದ ಸ್ಥಿತಿ ಉತ್ತಮ ಇರಬೇಕು. ಶನಿಯನ್ನು ‘ವೃದ್ಧನು’ ಎಂದು ಕರೆದಿದ್ದಾರೆ. ವೃದ್ಧ ಎಂದರೆ ಮುತ್ಸದಿ, ಮೇಧಾವಿ ಎಂಬ ಅರ್ಥಗಳಿವೆ. ಮುದುಕ ಎಂದು ತಿಳಿಯಬಾರದು. ಈ ಶನಿ ಉತ್ತಮ ಸ್ಥಿತಿಯಲ್ಲಿ ಇರುವವರು, ಇರದವರು ಹೇಗೆ ಹೇಗೆ ಇದ್ದಾರೆ? ಎಂಬುದನ್ನು ನಮ್ಮ ಪ್ರತ್ಯಕ್ಷಾನುಭವದಿಂದ ತಿಳಿಯಬಹುದು.
ಒಂದು ಗ್ರಹನ ಬಲವನ್ನು ಷಡ್ಬಲದೊಳಗೆ ತಿಳಿಯಬೇಕು. ಸ್ಥಾನ ಬಲ, ಚೇಷ್ಟಾ ಬಲ, ಅಂಶ ಬಲ, ಕೇಂದ್ರಾದಿ ಬಲ, ಕಾಲ ಬಲ, ನೈಸರ್ಗಿಕ ಬಲ.
ಸ್ಥಾನ ಬಲದಲ್ಲಿ ಉಚ್ಚ, ಮೂಲ ತ್ರಿಕೋಣಗಳೇ ಪ್ರಮುಖ. ಅಂಶ ಬಲದಲ್ಲಿ ಆ ಗ್ರಹನು ರಾಶಿಯಲ್ಲಿ ಎಷ್ಟು ದೂರ ಕ್ರಮಿಸಿದ್ದಾನೆ ಎಂದು ತಿಳಿಯುವುದು. ದಿಗ್ಬಲದಲ್ಲಿ ಪ್ರತೀ ಗ್ರಹರಿಗೂ ನಿರ್ಧಿಷ್ಟ ಸ್ಥಾನಗಳಿವೆ.
ಈ ಗ್ರಹರ ಬಲಾಬಲ ವಿಚಾರದಲ್ಲಿ ಯಾವ ಕರ್ಮಕ್ಕೆ ಯಾರು ಅಗತ್ಯವೋ ಅವರ ಚಿಂತನೆ ಅಗತ್ಯ. ರಾಜಕೀಯಕ್ಕೆ ಮುಖ್ಯವಾಗಿ ಶನಿಯ ಬಲಿಷ್ಟತೆಯು ಬೇಕು. ಬಲಿಷ್ಟನೆಂದಲ್ಲಿಗೇ ಸಾಕಾಗುವುದಿಲ್ಲ. ಯಾವ ವಿಚಾರದಲ್ಲಿ ಬಲಿಷ್ಟ ಎಂದು ನೋಡಬೇಕಾದರೆ ಗುರು, ರವಿ ಬುಧರ ಪಾತ್ರ ಬಹಳ ಇದೆ.
ಉದಾ: ಒಬ್ಬ ರಾಜಕಾರಣಿಗೆ ಶನಿಯು ಅತ್ಯಂತ ಬಲಿಷ್ಟನಿದ್ದು ಅದು ದುರಾಗ್ರಹ ದುರ್ಬುದ್ದಿಗೆ ಪೂರಕವಾದರೆ? ಇಲ್ಲಿ ವಿವೇಚನಾ ಸ್ವರೂಪ ನೋಡಲು ಗುರು ಹಾಗೂ ಇನ್ನಿತರ ವಿಚಾರಬೇಕು. ಅತ್ಯಂತ ಬಲಿಷ್ಟ ಶನಿ ಇದ್ದು, ರಣ ಹೇಡಿ ರಾಜಕಾರಣಿಗಳನ್ನೂ ನೋಡುತ್ತೇವೆ.
ಇನ್ನೊಂದೆಡೆ ಬಲಿಷ್ಟರು ಬಲಿಷ್ಟರಿಗೆ ಪ್ರಿಯರಾಗುತ್ತಾರೆ. ಆದರೆ ಕಾಲೆಳೆಯುವ ಪ್ರವೃತ್ತಿ ಇರಬಾರದು. ಆದರೆ ಬಲಿಷ್ಟರು ಒಟ್ಟಿಗಿದ್ದರೆ ಕಾಲೆಳೆಯಲು ಹೋಗುವುದೇ ಇಲ್ಲ. ಅವನು ಎಳೆದರೆ ಇವನೂ ಎಳೆದಾನು ಎಂಬ ಭಯ ಅವರೊಳಗಿರುತ್ತದೆ.
ಈಗ ಕೇಂದ್ರದ ಪ್ರಮುಖ ನಾಯಕರ ವಿಚಾರ ಮೊದಲಾಗಿ ನೋಡೋಣ.
ಮೋದಿ-ಅಮಿತ್ ಜೋಡಿಯ ಮೋಡಿ ಯಾಕೆ?
ಅಮಿತ್ ಷಾ ಅವರ ಜಾತಕದಲ್ಲಿ ಶನಿಯು 5° ಕುಂಭದಲ್ಲಿ ವಕ್ರ. ಇವರ ಶನಿಗೆ ಬಲಿಷ್ಟ ಸ್ಥಾನ ಬಲವಿದೆ. ಆದರೆ ಅಂಶ ಬಲವಿಲ್ಲ. ಶನಿಗೆ ಬಾಲ್ಯವಾಯಿತು. ಆದರೆ ಶನಿಯು ತನ್ನ ಮೂಲ ತ್ರಿಕೋಣದಲ್ಲಿ ಬಲಿಷ್ಟನು. ಇವರ ಅತ್ಯಂತ ನಿಕಟ ಸಂಪರ್ಕ ನರೇಂದ್ರ ಮೋದಿಯವರ ಜತೆ.
ನರೇಂದ್ರ ಮೋದಿಯವರಿಗೆ ತ್ರಿಕೋಣ ವೀಕ್ಷಕ ಶನಿ. 29.5° ಬಲಿಷ್ಟ! ಚಾಪೆಯಡಿಯಲ್ಲಿ ನುಗ್ಗಿ ಬಂದರೆ, ರಂಗೋಲಿ ಅಡಿಯಲ್ಲಿ ನುಗ್ಗಿ ಬರಬಹುದು ಎಂಬ ಗಾದೆ ಮಾತು ಇವರಿಗೆ ಒಪ್ಪುತ್ತದೆ. ಇವರ ಶನಿಗೆ ಸ್ಥಾನ ಬಲವೂ, ಅಂಶಬಲವೂ ಇರುವುದರಿಂದ ಮಹಾಬಲಿಷ್ಟ ರಾಜಕಾರಣಿಯಾದರು. ಅಮಿತ್ ಷಾ ಇಂತಹ ರಾಜಕಾರಣಿಯ ಜತೆಗಿದ್ದಾಗ ಅವರ ಮುತ್ಸದಿತನಕ್ಕೆ ಬಲ ಜಾಸ್ತಿ. ಉದಾ: ವಕೀಲರು ಎಷ್ಟೇ ಬಲಿಷ್ಟ ಇದ್ದರೂ ಅವರ Clint ದುರ್ಬಲನಾಗಿ ಬೆಬ್ಬೇ..! ಆದರೆ ವಕೀಲನಿಗೆ ಲಾಭವಿದೆಯೇ? ಅದೇ ರೀತಿ ಅಮಿತ್ ಷಾ ಅವರ ಬೆಂಬಲವು ತುಂಬಾ ಪರಿಣಾಮಕಾರಿಯಾಗುತ್ತದೆ. ಮೋದಿಗೆ ಅಮಿತ್ ಶಾ ಚಾಣಕ್ಯನಂತಾಗುತ್ತಾರೆ.
ಕಾಂಗ್ರೆಸ್ ಪತನಗೊಳ್ಳಲು ಇದೂ ಒಂದು ಕಾರಣ
ಕಾಂಗ್ರೆಸ್ ಪಕ್ಷ ಅತ್ಯಂತ ಭದ್ರಬುನಾದಿ ಇದ್ದಂತಹ ಬಲಿಷ್ಟ ಪಕ್ಷವಾಗಿತ್ತು. ಆದರೆ ಅದರ ಅಧ್ಯಕ್ಷ ಸ್ಥಾನ ಯಾವಾಗ ಸೋನಿಯಾ, ರಾಹುಲ್ ಗಾಂಧಿಗೆ ಬಂತೋ ಅಲ್ಲಿಂದ ಹಿನ್ನಡೆಯಾಗಲು ಶುರುವಾಯ್ತು. ಕಾರಣ, ಸೋನಿಯಾ ಗಾಂಧಿಯ ಕುಂಡಲಿಯಲ್ಲಿ ಸ್ಥಾನ ಬಲವಿಲ್ಲದ ಅಂಶ ಬಲ ಇರುವ ಶನಿ(24° ಇದ್ದರೂ ಸ್ಥಾನ ಬಲವಿಲ್ಲ) ಕರ್ಕದಲ್ಲಿ. ಅಲ್ಲದೆ ಕರ್ಕ ಲಗ್ನವೂ ಕೂಡ. ಹಾಗಾಗಿ ಸ್ವಾರ್ಥಕ್ಕಾಗಿ ಶನಿಯ ಬಲದ ಉಪಯೋಗವಾಯ್ತು. ರಾಹುಲ್ ಗಾಂಧಿಗೆ ವಾಕ್ ಸ್ಥಾನಾಧಿಪತಿಯಾಗಿ ನೀಚ ಶನಿ. ಅಂಶ ಬಲ ಇದ್ದರೂ ಸ್ಥಾನ ಬಲವಿಲ್ಲ. ಶನಿಯು 21° ಡಿಗ್ರಿ. ಹಾಗಾಗಿ ಅಸಂಭದ್ದ ವಾಕ್ ಪ್ರಾವೀಣ್ಯತೆ.
ಸಿದ್ಧರಾಮಯ್ಯ ಜಾತಕದಲ್ಲಿ ಶನಿ ಸಿಂಹದಲ್ಲಿದ್ದು ತ್ರಿಕೋಣ ರಾಶಿ ಕುಂಭ ವೀಕ್ಷಣೆ. ಇದೊಂದು ಬಲವೂ, ಏಕಾದಶದಲ್ಲಿ ನಿಪುಣ ಯೋಗವೂ ಇದ್ದುದರಿಂದ ಮುಖ್ಯಮಂತ್ರಿಯಾದರು. ಆದರೆ ಅಂಶ ಬಲ ಇಲ್ಲದ ಶನಿಯು ಕೇವಲ 5° ಇದ್ದುದರಿಂದ ಅಸಂಭದ್ದ ಮಾತುಗಳಿಂದ ಪ್ರಭಾವ ಶೂನ್ಯರಾದರು.
ಹೀಗೆಯೇ ನೋಡುತ್ತಾ ಹೋದರೆ ಅನೇಕ ಉದಾಹರಣೆಗಳು ಸಿಗುತ್ತವೆ. ಕೇಜ್ರಿವಾಲ್ ಗೆ 1° ಮೇಷದ ಶನಿ. ಅತ್ಯಂತ ದುರ್ಬಲ. ಆದರೆ ಮೀನಕ್ಕೆ ವಕ್ರಿಯಾದುದರಿಂದ ದೆಹಲಿಗೆ ಮುಖ್ಯಮಂತ್ರಿಯಾಗಿಬಿಟ್ಟರು. ಇವರು ಅಲ್ಲಿಗೇ ಸೀಮಿತ. ಅದೊಂದು ಮುನಿಸಿಪಲ್ ಕಾರ್ಪೋರೇಶನ್ ತರಹ ಅಧಿಕಾರವಷ್ಟೆ.
ಬಿಜೆಪಿಗೆ ಮಾತ್ರ ದೈವ ಬಲವಿದೆ
ಕೇಂದ್ರ ಸರಕಾರದ ಮೋದಿ ಅಮಿತ್ ಶಾ ಅವರ ಜೋಡಿಯನ್ನು ಉರುಳಿಸಲು ಇದಕ್ಕಿಂತ ಬಲಿಷ್ಟರು ಬಂದರೆ ಮಾತ್ರ ಸಾಧ್ಯ. ಇದಕ್ಕೆ ದೈವ ಬಲ ಬೇಕು. ಸದ್ಯ ದೈವ ಬಲವಿರುವ ಪಕ್ಷ ಎಂದರೆ ಬಿಜೆಪಿ ಮಾತ್ರ. ಬೇರಾವ ಪಕ್ಷಗಳಲ್ಲೂ ಇದು ಸದ್ಯ ಕಾಣುತ್ತಿಲ್ಲ. ಉಳಿದ ತುಂಡು ಪಕ್ಷಗಳ ಮುಖಂಡರುಗಳು ಅವಕಾಶವಾದಿಗಳಷ್ಟೆ.
ಯಾರು ಅವಕಾಶವಾದಿಗಳೋ ಅವರು ದೈವ ಬಲ ಶೂನ್ಯರು. ಯಾರು ಆಕಾಶ ತತ್ವದ ಧರ್ಮ ಪ್ರತಿಪಾದಕರೋ ಅವರಿಗೆ ದೈವಬಲ ಪೂರ್ಣವಿದೆ. ಈಗಿನ ವಾತಾವರಣದಲ್ಲಿ ಮೋದಿ ಅಮಿತ್ ಶಾ ನೇತೃತ್ವವು ಉತ್ತಮ ಬಲಯುತ ಜೋಡಿ ಎಂದು ಹೇಳಬಹುದು.
Discussion about this post