ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಎಳೆ ಮರದಲ್ಲಿ ಹೊಸ ಚಿಗುರು ಚಿಗುರಿದಾಗ ಆ ಮರಕ್ಕೆ ಇನ್ನಷ್ಟು ಸೊಬಗು ಎಂಬ ಮಾತಿನಂತೆ ಉಳ್ಳಾಲದ ಒಬ್ಬಳು ಸಾಧಕಿ ತನ್ನ ಕಿರಿಯ ವಯಸ್ಸಿನಲ್ಲಿಯೇ ಅತೀ ದೊಡ್ಡ ಕನಸನ್ನು ಕಂಡು ಸಾಧಿಸಿದ ಪ್ರತಿಭೆ.
ರಾಣಿ ಅಬ್ಬಕ್ಕ ದೇವಿ ಜನಿಸಿದ ಪುಣ್ಯ ನೆಲೆ ಉಳ್ಳಾಲದ ಮಣ್ಣಿನಲ್ಲಿ ಜೀವನ್ ಕುಮಾರ್ ಉಳ್ಳಾಲ್ ಮತ್ತು ಸುರೇಖಾ ಎಂಬ ದಂಪತಿಯ ಅರಮನೆಯ ಕನಸಿನ ಯುವರಾಣಿಯಾಗಿ ಅನನ್ಯ ಜೀವನ್ ಉಳ್ಳಾಲ್ ಜನಿಸಿದರು. ಈಕೆ ಬಾಲ್ಯದಲ್ಲಿಯೇ ಸಾಧನೆಯ ಪಥ ಆರಂಭಿಸಿದಳು ಈ ಪ್ರತಿಭೆ. ಬಾಲ್ಯದಿಂದಲೇ ಈಕೆಗೆ ಹಾಡುಗಾರಿಕೆ, ನೃತ್ಯ ಮತ್ತು ರಂಗಭೂಮಿಯಲ್ಲಿ ತುಂಬಾ ಆಸಕ್ತಿ. ಈಕೆಯ ಪ್ರತಿಭೆಗೆ ನಮ್ಮ ತುಳುನಾಡಿನ ಹೆಸರಾಂತ ಮಾಧ್ಯಮಗಳಲ್ಲಿ ಒಂದಾದ ನಮ್ಮ ಟಿವಿ ಚಾನೆಲ್ ಆಯೋಜಿಸಿದ್ದ ಪಟ್ಟಾಂಗ ಅನ್ನೋ ಕಾರ್ಯಕ್ರಮಕ್ಕೆ ಈಕೆಯನ್ನು ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಆಗ ಆಕೆಗೆ ಕೇವಲ 7 ವರ್ಷ.
ಅಂತಹ ಕಿರಿಯ ವಯಸ್ಸಿನಲ್ಲಿಯೇ ಇಂತಹ ಸಾಧನೆಗೈದ ಈಕೆಯು ನಮ್ಮ ಊರಿಗೆ ಒಂದು ಹೆಮ್ಮೆ. ಈಕೆಯು NMPT ಇಂಗ್ಲಿಷ್ ಮಾಧ್ಯಮ ಶಾಲೆ, ಪಣಂಬೂರು ಶಾಲೆಯಲ್ಲಿ ತನ್ನ ವಿದ್ಯಾಭ್ಯಾಸ ಪ್ರಾರಂಭಗೊಳಿಸಿದಳು. ಪ್ರಸ್ತುತ ಸುರತ್ಕಲ್’ನ BCA ಪದವಿ ಶಿಕ್ಷಣವನ್ನು ಗೋವಿಂದ ದಾಸ ಕಾಲೇಜಿನಲ್ಲಿ ಪಡೆಯುತ್ತಿದ್ದಾಳೆ. ಈ ಸಾಧಕಿಗೆ ಇವಳ ತಂದೆ-ತಾಯಿಯ ಆಶೀರ್ವಾದ ಮತ್ತು ಸ್ನೇಹಿತರ, ಊರಿನವರ ಬೆಂಬಲವೇ ಆಯುಧ.
ಇನ್ನು ಈಕೆಯ ಸಾಧನೆ ಬಗ್ಗೆ ಹೇಳಲು ಪದಗಳೇ ಸಾಲದು. ನನಗೆ ತಿಳಿದಷ್ಟು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತೇನೆ. ಭಾಷಣ ಮಾಡಲು ಶುರು ಮಾಡಿದರೆ ಸಾಕು ಕೇಳುಗರ ಮನಸ್ಸು ಬೇರೇನೂ ಯೋಚಿಸದೆ ಅವಳ ಭಾಷಣವನ್ನೇ ಆಲಿಸುತ್ತದೆ. ಇಂತಹ ಭಾಷಣ ಮಾಡುವವಳಿಗೆ ಪ್ರಶಸ್ತಿ ಕೊಡದಿದ್ದರೆ ಹೇಗೆ? ಈಕೆಯ ಈ ಪ್ರತಿಭೆಗೆ ಹಲವು ಬಹುಮಾನ ದೊರಕಿದೆ. ಇದಲ್ಲದೆ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾಳೆ. ಉತ್ಸಾಹ ಭರಿತ ನಿರೂಪಣೆ ಇವಳದ್ದು.
ಟ್ಯಾಲೆಂಟ್ ಹಂಟ್ ಶೋ ಸೀಸನ್ -1 ಈ ಕಾರ್ಯಕ್ರಮ ನೀವೆಲ್ಲರೂ ನೋಡಿರಬಹುದು ಅಥವಾ ಕೇಳಿರಬಹುದು. ಆ ಕಾರ್ಯಕ್ರಮ ಇವಳ ನಿರೂಪಣೆಯಲ್ಲಿ ಮೂಡಿಬಂದಿತ್ತು ಮತ್ತು ಇದಕ್ಕಾಗಿ ಅದ್ಭುತ ನಿರೂಪಣೆಗೆ ಉತ್ತಮ ನಿರೂಪಣಾಕಾರಿ ಎಂಬ ರಾಷ್ಟ್ರ ಪ್ರಶಸ್ತಿ ದೊರಕಿದೆ. ಹೇಗೆ ನೂರಾರು ಪ್ರಶಸ್ತಿಯನ್ನು ತನ್ನ ಪ್ರತಿಭೆಯಿಂದ ಬಾಚಿಕೊಂಡಿದ್ದಾಳೆ.
ಕಲಾಕ್ಷೇತ್ರ ಮಾತ್ರವಲ್ಲದೇ ಶಿಕ್ಷಣದಲ್ಲಿಯೂ ಕೂಡ ಎತ್ತರದ ಶಿಖರವೇರಿದ್ದಾಳೆ. ಹತ್ತನೆಯ ತರಗತಿಯಲ್ಲಿ ಶೇ.92ರಷ್ಟು ಹಾಗೂ ದ್ವಿತೀಯ ಪದವಿ ಪೂರ್ವ ತರಗತಿಯಲ್ಲಿ ಶೇ. 80ರಷ್ಟು ಅಂಕವನ್ನು ಪಡೆದಿದ್ದಾಳೆ. ನಾನು ಅನನ್ಯ ಜೀವನ್ ಇಲ್ಲಿಯವರೆಗೆ ಭೇಟಿಯಾಗಿಲ್ಲ. ಆದರೆ ಇವಳ ಸಾಧನೆ ಕುರಿತಾದ ಮಾಹಿತಿಯನ್ನು ಮುಕ್ತವಾಹಿನಿಯಲ್ಲಿ ನೋಡಿದ್ದೇನೆ. ಹಾಗಾಗಿ ಈ ಪ್ರತಿಭೆಯ ಬಗ್ಗೆ ಲೇಖನ ರೂಪದಲ್ಲಿ ಬರೆಯಬೇಕು ಅನಿಸಿದಾಗ ಅದೇ ಸಮಯಕ್ಕೆ ಸರಿಯಾಗಿ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ನನ್ನಗೊಂದು ಅವಕಾಶ ಕೊಟ್ಟಿದೆ.
ಇನ್ನು ಹೆಚ್ಚಿನ ಮಾಹಿತಿಯನ್ನು ಇವರನ್ನು ಮುಖತಃ ಭೇಟಿಯಾಗಿ ಸಾಧನೆ ಕುರಿತಾದ ಲೇಖನವನ್ನು ಪತ್ರಿಕೆಯಲ್ಲಿ ಪ್ರಕಟಿಸಬೇಕೆಂದು ಮನದಾಳದ ಆಸೆ.
ತುಳುನಾಡಿನ ಈ ಪ್ರತಿಭೆಗೆ ನಮ್ಮೆಲ್ಲರ ಬೆಂಬಲ, ಪ್ರೋತ್ಸಾಹ ಇನ್ನಷ್ಟು ನೀಡೋಣ, ಇನ್ನಷ್ಟು ದೊಡ್ಡ ಮಟ್ಟಿನ ಸಾಧನೆಗೈಯಲ್ಲಿ ಈ ಸಾಧಕಿ.
ಧನ್ಯವಾದಗಳು
Get in Touch With Us info@kalpa.news Whatsapp: 9481252093
Discussion about this post