Wednesday, September 3, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಜಿಲ್ಲೆ ದಕ್ಷಿಣ ಕನ್ನಡ

ಗೋಸಂರಕ್ಷಣೆಗೆ ಸ್ಫೂರ್ತಿ ಸಿಕ್ಕಿದರೆ ಗೋಸ್ವರ್ಗ ಸಾರ್ಥಕ: ರಾಘವೇಶ್ವರಶ್ರೀ

July 14, 2018
in ದಕ್ಷಿಣ ಕನ್ನಡ
0 0
0
Share on facebookShare on TwitterWhatsapp
Read - 2 minutes

ಮಂಗಳೂರು: ಗೋಸ್ವರ್ಗವನ್ನು ವೀಕ್ಷಿಸಿದ ಪ್ರತಿಯೊಬ್ಬರಿಗೂ ಗೋಸಂರಕ್ಷಣೆಗೆ ಸ್ಫೂರ್ತಿ ದೊರಕಬೇಕು ಎನ್ನುವುದೇ ಗೋಸ್ವರ್ಗದ ಆಶಯ. ಪ್ರಥಮ ಗೋಸ್ವರ್ಗವನ್ನು ಎಲ್ಲರೂ ಸೇರಿ ಕಟ್ಟೋಣ. ಗೋಸ್ವರ್ಗ ನಮ್ಮ ಸ್ವಂತ ಹಕ್ಕಲ್ಲ; ಇದು ಇಡೀ ಸಮಾಜಕ್ಕೆ ಸೇರಿದ್ದು. ಗೋಸ್ವರ್ಗಕ್ಕೆ ಎಲ್ಲರ ಸೇವೆ ಸಲ್ಲಬೇಕು ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಸ್ವಾಮೀಜಿ ಆಶಿಸಿದರು.

ನಗರದ ಪುರಭವನದಲ್ಲಿ ನಡೆದ ಸ್ವರ್ಗಸಂವಾದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಗೋವು ನಮ್ಮ ತಾಯಿ; ಆದರೆ ನಮ್ಮ ತಾಯಿ ಮಾತ್ರವಲ್ಲ; ನಿಮ್ಮೆಲ್ಲರ ತಾಯಿ ಕೂಡಾ. ಪ್ರತಿಯೊಬ್ಬರಿಗೂ ತಾಯಿಯ ಸೇವೆಗೆ ಅವಕಾಶ ನೀಡಬೇಕು ಎನ್ನುವ ಸಲುವಾಗಿ ಪ್ರತಿಯೊಬ್ಬರಿಗೂ ಸೇವೆಯ ಅವಕಾಶ ಕಲ್ಪಿಸಲಾಗಿದೆ. ಈ ಬಾರಿಯ ಗೋಸ್ವರ್ಗ ಚಾತುರ್ಮಾಸ್ಯಕ್ಕೆ ಆಗಮಿಸಿದ ಪ್ರತಿಯೊಬ್ಬರೂ ಒಂದೊಂದು ಗಿಡ ನೆಟ್ಟು ಗೋಸ್ವರ್ಗಕ್ಕೆ ವಿಶೇಷ ಮೆರುಗು ನೀಡಲಿದ್ದಾರೆ ಎಂದು ಬಣ್ಣಿಸಿದರು.

ಜನ, ಗೋವು ಹಾಗೂ ದೇವರ ತ್ರಿವೇಣಿ ಸಂಗಮ. ಇದು ಗೋಸೌಖ್ಯ ಕೇಂದ್ರ. ಗೋವುಗಳು ಸುಖವಾಗಿರಬೇಕು. ಗೋಸ್ವರ್ಗದ ಪರಿಕಲ್ಪನೆಯ ಮೂಲ. ಗೋವು ಸುಖವಾಗಿದ್ದರೆ, ಭೂಮಿ ಸ್ವರ್ಗವಾಗುತ್ತದೆ ಎಂದರು.

ಪ್ರಕೃತಿಯ ರಮ್ಯ ತಾಣದ ನಡುವೆ ನಂದಿಶಾಲೆ, ಬಾಲವತ್ಸ ಶಾಲೆ, ಹಾಲು ಕರೆಯುವ ಹಸುಗಳಿಗೆ ಧೇನು, ಪ್ರತೀಕ್ಷಾ ಶಾಲೆ, ವತ್ಸ ಶಾಲೆ, ಗೋಸಾಕಾಣಿಕೆ ಚರಿತ್ರೆಯಲ್ಲೇ ಪ್ರಥಮ ಎನಿಸಿದ ಪ್ರಸವ ಶಾಲೆ, ಮುದಿ ಹಾಗೂ ಅಶಕ್ತ ಹಸುಗಳಿಗೆ ಕರುಣಾ ಭರಣ, ಸರ್ವಸುಸಜ್ಜಿತ ಅತ್ಯುತ್ಕøಷ್ಣ ಪಶು ಚಿಕಿತ್ಸಾಲಯ, ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಪ್ರಯೋಗಾಲಯ, ಪಂಚಗವ್ಯ ಚಿಕಿತ್ಸೆಗಾಗಿ ಸುಸಜ್ಜಿತ ನಿರಾಮಯ ಆಸ್ಪತ್ರೆ, ಗೋವಿನ ಬಗೆಗಿನ ಚಿತ್ರಗಳ ಪ್ರದರ್ಶನಕ್ಕೆ ಥಿಯೇಟರ್, ಗೋಮ್ಯೂಸಿಯಂ ಗವ್ಯ ಆಹಾರ ವ್ಯವಸ್ಥೆಯಂಥ ಸೌಲಭ್ಯವಿದೆ ಎಂದು ವಿವರಿಸಿದರು.

ಸಾವಿರ ಗೋವುಗಳ ಸೆಗಣಿಯನ್ನು ಸಂಗ್ರಹಿಸುವ ಸೆಗಣಿ ಯಂತ್ರ, ದೂರಸಂವೇದನೆ ವ್ಯವಸ್ಥೆಯಂಥ ಅತ್ಯಾಧುನಿಕ ಸೌಲಭ್ಯಗಳನ್ನೂ ಕಲ್ಪಿಸಲಾಗಿದೆ. ಗೋಪೂಜೆ, ತುಲಾಭಾರ, ತೆಪ್ಪೋತ್ಸವ, ರಥೋತ್ಸವದಂಥ ಸೇವೆಗಳ ವ್ಯವಸ್ಥೆಯೂ ಗೋಸ್ವರ್ಗದಲ್ಲಿ ಇದೆ. ಸಿಸಿ ಟಿವಿ ಕಣ್ಗಾವಲಿನ ವ್ಯವಸ್ಥೆಯೂ ಇದೆ. ಗೋಫಲ ಎನ್ನುವ ಹೆಸರಿನಲ್ಲಿ ದೇಶದಲ್ಲೇ ಅತ್ಯಂತ ಉತ್ಕøಷ್ಟ ಗವ್ಯೋತ್ಪನ್ನಗಳನ್ನು ನೀಡುವ ಗೋಫಲ ಉದ್ಯಮ ಇಲ್ಲಿರುತ್ತದೆ ಎಂದು ಹೇಳಿದರು.

3 ಲಕ್ಷ ಚದರ ಅಡಿಯ ಗೋಸ್ವರ್ಗದಲ್ಲಿ ಗೋಡೆ, ಕಿಟಕಿ ಅಥವಾ ಬಂಧನವಿಲ್ಲ. ಗೋವುಗಳು ಸದಾ ತೃಪ್ತಿಯಾಗುವಂತೆ ದಿನದ 24 ಗಂಟೆಯೂ ಗೋವಿಗೆ ಬೇಕಾದಾಗ ಆಹಾರ ಸ್ವೀಕರಿಸಲು ಅವಕಾಶವಿದೆ. ಶಿಲಾಮಯ ಮಹಾಪಾತ್ರಗಳಲ್ಲಿ ಅಮೃತಮಯ ಜಲಸೌಲಭ್ಯವಿದೆ. ನೀರು ಹಾಗೂ ದೇವರ ನಡುವೆ ಗೋವುಗಳು ಇಲ್ಲಿ ಗೋವುಗಳು ಸ್ವಚ್ಛಂದವಾಗಿ ವಿಹರಿಸುತ್ತವೆ ಎಂದು ಬಣ್ಣಿಸಿದರು.

ಕಾಮಧೇನು ಸ್ತೂಪದ ಮೂಲಕ ಇಡೀ ಗೋಸ್ವರ್ಗವನ್ನು ವೀಕ್ಷಿಸುವ ಅವಕಾಶವಿದೆ. ಗೋಸ್ವರ್ಗದ ಪರಿಕಲ್ಪನೆ ನವನವೀನ. ಗೋಸೌಖ್ಯ ಕೇಂದ್ರದ ಪರಿಕಲ್ಪನೆಯೇ ಇದರ ಮೂಲ. ಗೋವುಗಳಿಗೆ ಕಸಾಯಿಖಾನೆಯಲ್ಲಿ ಮಾತ್ರವಲ್ಲ; ಮನೆಗಳಲ್ಲೂ ಗೋವಿಗೆ, ಕರುವಿಗೆ ಸೌಖ್ಯವಿಲ್ಲ. ಹುಟ್ಟಿದ ಪುಟ್ಟ ಕರುವಿಗೇ ಅಮ್ಮನ ಸಖ್ಯ ಇಲ್ಲ. ಕರುವಿನ ಪಾಲಿನ ಹಾಲನ್ನೇ ಕಿತ್ತುಕೊಳ್ಳುತ್ತೇವೆ. ಜೀವನ ಪರ್ಯಂತ ಬಂಧನದ ಶಿಕ್ಷೆ. ಇದನ್ನು ತಪ್ಪಿಸುವುದು ಗೋಸ್ವರ್ಗ ಪರಿಕಲ್ಪನೆಗೆ ಪ್ರೇರಣೆ ಎಂದರು.

ಕಸಾಯಿಖಾನೆಯಲ್ಲಿ ಮಾತ್ರವಲ್ಲ; ಗೋವಿನ ಬದುಕು ಕೂಡಾ ದುಃಖಮಯ. ಎಂಜಲು, ಹಳಸಲು ವಸ್ತುಗಳನ್ನು ಹಸುಗಳಿಗೆ ನೀಡುತ್ತೇವೆ ಎಂದು ವಿವರಿಸಿದರು.

ಕಾರಾಗೃಹದ ಕೈದಿಗಳ ಬದುಕಿಗಿಂತಲೂ ಬವಣೆಪಡುತ್ತಿವೆ. ಪ್ರಕೃತಿ- ಪುರುಷ ಸಂಯೋಗದ ಸುಖವೂ ಇಲ್ಲ. ಬೇಕಾದ ಆಹಾರ, ಬೇಕಾದಷ್ಟು ಪ್ರಮಾಣದಲ್ಲಿ ಇಲ್ಲ. ಗೋಸಾಕಣೆ ಸಂಪೂರ್ಣ ವ್ಯಾವಹಾರಿಕ. ವಿದೇಶಗಳಲ್ಲಿ ಮಾತ್ರವಲ್ಲ; ಭಾರತದಲ್ಲೂ ಪರಿಸ್ಥಿತಿ ಭಿನ್ನವಿಲ್ಲ. ಗೋವಿಗೆ ನೀರು, ಆಹಾರದಷ್ಟೇ ಸೂರ್ಯಕಿರಣ ಕೂಡಾ ಅಗತ್ಯ. ಅದರಿಂದಲೇ ವಂಚಿತರನ್ನಾಗಿ ಮಾಡುತ್ತೇವೆ. ನಿರಂತರ ದುಡಿತ- ಬಡಿತದಿಂದ ಗೋವಿನ ಬದುಕು ಬರ್ಬರವಾಗಿದೆ ಎಂದು ವಿಷಾದಿಸಿದರು.

ಭಾರ್ಗವ ಪರಶುರಾಮ ಆದದ್ದು ಕಾಮಧೇನುವಿಗೆ ತೊಂದರೆ ಬಂದಾಗ. ತನ್ನ ಗೋಶಾಲೆಯ ಗೋವುಗಳಿಗೆ ಆಪತ್ತು ಬಂದಾಗ ಕೊಡಲಿ ಎತ್ತಿದವರು ಭಾರ್ಗವರಾಮ. ಇಂಥ ನೆಚ್ಚಿನ, ಕೆಚ್ಚಿನ ವೀರಭೂಮಿಯ ಜನತೆಗೆ ಗೋವಿನ ಮಹತ್ವದ ಬಗ್ಗೆ ಹೇಳಬೇಕಾದ್ದಿಲ್ಲ. ಗೋರಕ್ಷಣೆಯ ಎಚ್ಚರ ಕೂಡಾ ಹೆಚ್ಚಾಗಿದೆ ಎಂದು ವಿಶ್ಲೇಷಿಸಿದರು.

ನಿಟ್ಟೆ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ವಿನಯ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಉತ್ತರಕಾಶಿ ಕಪಿಲಾಶ್ರಮದ ಶ್ರಿ ರಾಮಚಂದ್ರ ಗುರೂಜಿ, ಎಂಆರ್‍ಪಿಎಲ್ ಆಡಳಿತ ನಿರ್ದೇಶಕ ವೆಂಕಟೇಶ್, ಕುಂಟಾರು ರವೀಶ್ ತಂತ್ರಿ, ಸಂಸದ ನಳಿನ್ ಕುಮಾರ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಎಸ್‍ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ರಾಜೇಂದ್ರ ಕುಮಾರ್, ಕೆಎಂಎಫ್ ಅಧ್ಯಕ್ಷ ರವಿರಾಜ್ ಹೆಗ್ಡೆ, ಕರ್ನಾಟಕ ರಾಜ್ಯ ಗೋಶಾಲೆಗಳ ಒಕ್ಕೂಟದ ಅಧ್ಯಕ್ಷ ಎಂ.ಬಿ.ಪುರಾಣಿಕ್, ಧರ್ಮದರ್ಶಿ ಹರಿಕೃಷ್ಣ ಪುನರೂರು, ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಡಾ.ಸುರೇಶ್ ಶೆಟ್ಟಿ ಗುರ್ಮೆ, ಶರಣ್ ಪಂಪ್‍ವೆಲ್, ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ಬೊಳಿಯಾರ್, ಪಾಲಿಕೆ ಸದಸ್ಯೆ ರೂಪಾ ಡಿ.ಬಂಗೇರ, ಹವ್ಯಕ ಮಹಾಮಂಡಲ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಗೋಸ್ವರ್ಗ ಸಂಸ್ಥಾನ ಸಮಿತಿ ಅಧ್ಯಕ್ಷ ಆರ್.ಎಸ್.ಹೆಗಡೆ, ದಿಗ್ದರ್ಶಕ ಡಾ.ವೈ.ವಿ.ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು. ಡಾ.ವಿಷ್ಣು ಭಟ್ ಪಾದೆಕಲ್ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಗೋ ಪರಿವಾರದ ಉಪಾಧ್ಯಕ್ಷ ಮುರಳಿ ಹಸಂತಡ್ಕ ಸಭಾಪೂಜೆ ನೆರವೇರಿಸಿದರು. ಮೇಧಾ ಪ್ರಾರ್ಥಿಸಿದರು. ಶ್ರೀಕೃಷ್ಣ ನೀರಮೂಲೆ ನಿರೂಪಿಸಿದರು.

ಕರ್ನಾಟಕ ಬ್ಯಾಂಕಿನ ಪರವಾಗಿ ಜಿಎಂ ಮಹಲಿಂಗೇಶ್ವರ ಭಟ್ ಅವರು ಗೋಸ್ವರ್ಗಕ್ಕೆ 25 ಲಕ್ಷ ರೂಪಾಯಿ, ಹಿರಣ್ಯ ಗಣಪತಿ ಭಟ್ 10 ಲಕ್ಷ ದೇಣಿಗೆ ನೀಡಿದರು.

Tags: Dakshina KannadaGou SwargaMangaloreRaghaveshwara SwamijiRamachandra pura mattಗೋಸಂರಕ್ಷಣೆ
Previous Post

Experience nostalgia as Raghu Dixit-Rasmika share their memories of Bangalore

Next Post

ಗೋಸ್ವಾತಂತ್ರ್ಯ ಹೋರಾಟಕ್ಕೆ ಶ್ರೀಮಠದಿಂದ ನಾಂದಿ: ಸಂಸದ ನಳಿನ್ ಕುಮಾರ್

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಗೋಸ್ವಾತಂತ್ರ್ಯ ಹೋರಾಟಕ್ಕೆ ಶ್ರೀಮಠದಿಂದ ನಾಂದಿ: ಸಂಸದ ನಳಿನ್ ಕುಮಾರ್

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಸ್ವಭಾಷಾ ಅಭಿಯಾನ ನಿರಂತರ: ರಾಘವೇಶ್ವರ ಶ್ರೀ

September 3, 2025

ವಿಶ್ವ ವಾಲಿಬಾಲ್ ಪಂದ್ಯಾಟ | ರಾಷ್ಟ್ರೀಯ ಅರ್ಹತಾ ತಂಡಕ್ಕೆ ಕ್ರೈಸ್ಟ್‌ಕಿಂಗ್ ಶಾಲೆಯ ಶಗುನ್ ಆಯ್ಕೆ

September 3, 2025

ಮುಂಜಾನೆ ಸುವಿಚಾರ | ಅಂತರಂಗ ಬಹಿರಂಗ ಎರಡರಲ್ಲೂ ಶುದ್ಧವಾಗಿರುವ ಮನುಷ್ಯ ಸಾತ್ವಿಕ

September 3, 2025

ಶಿವಮೊಗ್ಗ – ತಿರುನಲ್ವೇಲಿ ಸ್ಪೆಷಲ್ ಟ್ರೈನ್ | ಎಷ್ಟು ದಿನ? ಮಾರ್ಗ ಹೇಗೆ? ಎಲ್ಲೆಲ್ಲಿ ಸ್ಟಾಪ್?

September 2, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕಾನೂನು ಕಲ್ಪ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಸ್ವಭಾಷಾ ಅಭಿಯಾನ ನಿರಂತರ: ರಾಘವೇಶ್ವರ ಶ್ರೀ

September 3, 2025

ವಿಶ್ವ ವಾಲಿಬಾಲ್ ಪಂದ್ಯಾಟ | ರಾಷ್ಟ್ರೀಯ ಅರ್ಹತಾ ತಂಡಕ್ಕೆ ಕ್ರೈಸ್ಟ್‌ಕಿಂಗ್ ಶಾಲೆಯ ಶಗುನ್ ಆಯ್ಕೆ

September 3, 2025

ಮುಂಜಾನೆ ಸುವಿಚಾರ | ಅಂತರಂಗ ಬಹಿರಂಗ ಎರಡರಲ್ಲೂ ಶುದ್ಧವಾಗಿರುವ ಮನುಷ್ಯ ಸಾತ್ವಿಕ

September 3, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!