ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ನಗರದಲ್ಲಿ ಕೋವಿಡ್19 ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು ಜನ ಇನ್ನು ಜಾಗೃತರಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಭಾರೀ ಅನಾಹುತ ಕಾದಿದೆ ಎಂದು ಪಿಎಸ್’ಐ ಮಂಜುನಾಥ್ ಎನ್. ಲಿಂಗಾರೆಡ್ಡಿ ನಾಗರಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ನಗರದಲ್ಲಿ ಕೋವೀಡ್19 ದಿನೇ ದಿನೇ ಹೆಚ್ಚುತ್ತಿದ್ದು ಹೊರಗಿನಂದ ಬಂದವರಲ್ಲದೆ ಮನೆಯಲ್ಲಿ ಇದ್ದವರಿಗೂ ಸಹ ಪಾಸಿಟಿವ್ ಬರುತ್ತಿದೆ. ಪಾಸಿಟಿವ್ ಬಂದ ಏರಿಯಾಗಳನ್ನು ಸೀಲ್‌ಡೌನ್ ಮಾಡಲಾಗುತ್ತದೆ. ಆದರೂ ಅಕ್ಕಪಕ್ಕ ಮನೆಯವರು ಹೊರಬಂದು ಅನಾವಶ್ಯಕವಾಗಿ ಓಡಾಡುತ್ತಿರುವುದು ಗಮನಕ್ಕೆ ಬಂದಿದೆ. ದಯವಿಟ್ಟು ಇನ್ನಾದರು ಎಚ್ಚರಿಕೆ ವಹಿಸಿಬೇಕು ಎಂದರು.
ದಿನನಿತ್ಯ ನಗರದಲ್ಲಿ ಕೊರೋನಾ ಮಹಾಮಾರಿ ಅತಿವೇಗವಾಗಿ ಅಕ್ರಮಿಸಿ ಆಸ್ಪತ್ರೆಗಳಲ್ಲಿ ಬೆಡ್’ಗಳು ಸಿಗದೇ ರೋಗಿಗಳು ಪರಡಾಡುತ್ತಿರುವುದನ್ನು ನೋಡುತ್ತಿದ್ದೇವೆ. ಆದರೂ ಅನಾವಶ್ಯಕವಾಗಿ ಓಡಾಡುವುದು ಮುಖಕ್ಕೆ ಮಾಸ್ಕ್ ಹಾಕಿಕೊಳ್ಳದೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ, ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಜೂಜಾಟದಲ್ಲಿ ತೊಡಗುವುದು ಹೆಚ್ಚಾಗುತ್ತಿದೆ. ಇಂತಹ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಳ್ಳುವವರ ವಿರುದ್ದ ಕೇಸ್ ದಾಖಲಿಸಿಕೊಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಗರದಲ್ಲಿ ಪ್ರತಿದಿನ 2 ಗಂಟೆಯಿಂದ ಲಾಕ್ ಡೌನ್ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ಔಷಧಿ ಅಂಗಡಿಗಳನ್ನು ಬಿಟ್ಟು ಉಳಿದ ಎಲ್ಲಾ ಅಂಗಡಿ, ಹೊಟೇಲ್, ಮಾಲ್’ಗಳನ್ನು ಮುಚ್ಚಬೇಕು. ಇಲ್ಲವಾದರೆ ಕಾನೂನು ಕ್ರಮ ಜರುಗಿಸಲಾಗುವುದು. ಪ್ರತಿಯೊಬ್ಬರು ಮಾಸ್ಕ್ ಧರಿಸದೇ ಓಡಾಡಬಾರದು, ಕಾರಣವಿಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಗುಂಪಾಗಿ ಸೇರಬಾರದು. ಪೊಲೀಸ್ ಇಲಾಖೆ ಅರೋಗ್ಯ ಇಲಾಖೆ, ನಗರಸಭೆ ಕೊರೋನಾ ಹತೋಟಿಗೆ ಸಾಕಷ್ಟು ಶ್ರಮಹಿಸುತ್ತಿದೆ. ಪ್ರತಿಯೊಬ್ಬರು ತಾವೇ ಅರ್ಥ ಮಾಡಿಕೊಂಡು, ಕೊರೋನಾ ಹತೋಟಿಗೆ ಸಹಕರಿಸಿ ಎಂದು ಮನವಿ ಮಾಡಿದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Get In Touch With Us info@kalpa.news Whatsapp: 9481252093
Discussion about this post