ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸಾಮಾನ್ಯವಾಗಿ ಮಲೆನಾಡು, ಕರಾವಳಿ ಮಾತ್ರವಲ್ಲ ನೀರು ಹರಿಯುವ ತಂಪಾದ ಪ್ರದೇಶದಲ್ಲಿ ಬೆಳೆಯುವ ಒಂದೆಲಗ(ಬ್ರಾಹ್ಮಿ) ಸೊಪ್ಪು ಒಂದು ನೈಸರ್ಗಿಕ ಅಚ್ಚರಿಯೇ ಹೌದು. ಹಲವಾರು ಔಷಧೀಯ ಗುಣಗಳನ್ನು ತನ್ನಲ್ಲಿ ಅಡಗಿಸಿಕೊಂಡಿರುವ ಒಂದೆಲಗ ಕುರಿತಾಗಿ ಬಹಳಷ್ಟು ಪ್ರಯೋಗಗಳು ದೃಢಪಡಿಸಿವೆ. ಅಲ್ಲದೇ, ಹಿಂದಿನಿಂದಲೂ ನಮ್ಮ ಹಿರಿಯರು ಹಲವು ರೋಗಗಳನ್ನು ತಡಗೆಟ್ಟಲು, ದೈಹಿಕ ಶಕ್ತಿಗಾಗಿ ಈ ಸೊಪ್ಪನ್ನು ಆಹಾರದಲ್ಲಿ ಬಳಸುವ ರೂಢಿಯೂ ಸಹ ಇದೆ. ಈ ಹಿನ್ನೆಲೆಯಲ್ಲಿ ಒಂದೆಲಗ ಸೊಪ್ಪಿನಿಂದ ದೊರೆಯುವ ಪ್ರಯೋಜನೆಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.
- ಗರ್ಭಿಣಿಯರು ಪ್ರತಿನಿತ್ಯ ಇದನ್ನು ಸೇವಿಸಿದರೆ, ಶಿಶುವಿನ ನರ ಮಂಡಲ, ಮೆದುಳು ಬೆಳವಣಿಗೆ ಉತ್ತಮವಾಗುತ್ತದೆ.
- ಬೆಳೆಯುವ ಮಕ್ಕಳಿಗೆ ಪ್ರತಿನಿತ್ಯ ಇದರ ಜ್ಯೂಸ್ ಕುಡಿಸುವುದರಿಂದ ಬುದ್ಧಿಶಕ್ತಿ ಹೆಚ್ಚಾಗುತ್ತದೆ.
- ಕೈ-ಕಾಲು ನೋವು, ಸೆಳೆತ ಹೊಂದಿರುವವರು ಇದನ್ನು ಸೇವಿಸಿದರೆ ನರಗಳಿಗೆ ಶಕ್ತಿ ಬರುತ್ತದೆ.
- ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕು ನಿವಾರಿಸುವ ಗುಣವನ್ನು ಇದು ಹೊಂದಿದೆ.
- ಬಳಲಿಕೆ ನಿವಾರಿಸುವುದು ಇದು ಬಳಲಿಕೆ ನಿವಾರಣೆ ಮಾಡಲು ತುಂಬಾ ಸಹಕಾರಿ.
- ಒಂದೆಲಗ ನೆನಪಿನ ಶಕ್ತಿ ಹಾಗೂ ಬುದ್ಧಿ ಹೆಚ್ಚಿಸಿ, ಅಲ್ಝೈರ್ಮ, ಖಿನ್ನತೆ ಮತ್ತು ಆತಂಕ ದೂರಕ್ಕೆ ಸಹಕಾರಿ.
- ಗಾಯ, ಸುಟ್ಟ ಗಾಯ, ಸೋರಿಯಾಸಿಸ್, ಡರ್ಮಟೈಟಿಸ್ ಇತ್ಯಾದಿಗಳ ಚಿಕಿತ್ಸೆಗೆ ಬಳಸಬಹುದು.
- ಇದರ ಎಣ್ಣೆಯನ್ನು ಪ್ರತಿದಿನ ತಲೆಗೆ ಹಚ್ಚುವುದರಿಂದ ನಿದ್ರಾಹೀನತೆ, ಕೂದಲು ಉದುರುವಿಕೆ ದೂರವಾಗುತ್ತದೆ.
- ಇದರ ಪೇಸ್ಟನ್ನು ಮುಖಕ್ಕೆ ಪ್ರತಿದಿನ ಹಚ್ಚುವುದರಿಂದ ಚರ್ಮ ಸುಕ್ಕುಕಟ್ಟುವಿಕೆಯ ಪ್ರಮಾಣ ಕಡಿಮೆಯಾಗುತ್ತದೆ.
- ಇದರ ಜ್ಯೂಸ್ ಸೇವನೆ ಹಾಗೂ ಎಣ್ಣೆ ಹಚ್ಚಿ ಸ್ನಾನ ಮಾಡುವುದರಿಂದ ದೇಹದ ರಕ್ತ ಸಂಚಾರ ಕ್ರಮಬದ್ಧವಾಗಿರುತ್ತದೆ.
- ಸಾಮಾನ್ಯ ಶೀತ, ಮೂತ್ರನಾಳದ ಸೋಂಕು, ಸರ್ಪಸುತ್ತು, ಕ್ಷಯರೋಗ, ಕುಷ್ಟರೋಗ, ಹಂದಿಜ್ವರ, ಭೇದಿ, ಕಾಲರಾ ರೋಗ ನಿಯಂತ್ರಣಕ್ಕೆ ಸಹಕಾರಿ.
- ಈ ಸೊಪ್ಪನ್ನು ಚರ್ಮದಲ್ಲಿ ಸೆಲ್ಯೂಲೈಟ್ ವಿರುದ್ಧ ಹೋರಾಡಲು ಹಿಂದಿನಿಂದಲೂ ಬಳಸಲಾಗುತ್ತಿದೆ. ಸೆಲ್ಯೂಲೈಟ್ ಬೊಕ್ಕೆ, ಮೊಡವೆ ಉಂಟು ಮಾಡುತ್ತದೆ.
- ಇದರ ಸೇವನೆ ಸೆಲ್ಯೂಲೈಟ್ ಕೈಯ ಮೇಲ್ಭಾಗ, ತೊಡೆ ಹಾಗೂ ಪೃಷ್ಠ ಭಾಗದಲ್ಲಿ ರಕ್ತಸಂಚಾರವನ್ನು ಹೆಚ್ಚಿಸಿ, ಉರಿಯೂತ ಕಡಿಮೆ ಮಾಡುತ್ತದೆ.
- ತಲೆಬುರುಡೆಗೆ ಪೋಷಣೆ ನೀಡುವಲ್ಲಿ ಒಂದೆಲಗ ಪ್ರಮುಖ ಪಾತ್ರ ವಹಿಸುತ್ತದೆ. ಕೂದಲು ಉದುರುವುದನ್ನು ತಡೆಯುವುದು ಮತ್ತು ಕೂದಲು ಬೆಳೆಯಲು ನೆರವಾಗುತ್ತದೆ.
- ಪ್ರತಿದಿನ ಹಾಲು ಅಥವಾ ಮಜ್ಜಿಗೆಯೊಂದಿಗೆ ಒಂದೆಲಗ ರಸ ಸೇರಿಸಿ ಕುಡಿಯುವುದರಿಂದ ಲವಲವಿಕೆಯಿಂದಿರಲು ಸಾಧ್ಯವಾಗುತ್ತದೆ.
- ಒಂದೆಲಗದ ಸೊಪ್ಪಿನ ಪೇಸ್ಟ್ ಮಾಡಿ ನಿಯಮಿತವಾಗಿ ಮುಖಕ್ಕೆ ಹಚ್ಚುವುದರಿಂದ ಬೊಕ್ಕೆ, ಮೊಡವೆಗಳನ್ನು ಹೋಗಲಾಡಿಸಬಹುದು.
Get in Touch With Us info@kalpa.news Whatsapp: 9481252093
Discussion about this post