ಮುಂಬೈ: ಮಹಿಳೆಯರು ಸ್ನಾನ ಮಾಡುವ ದೃಶ್ಯವನ್ನು ಕದ್ದುಮುಚ್ಚಿ ವೀಡಿಯೋ ಚಿತ್ರೀಕರಣ ಮಾಡುತ್ತಿದ್ದ ಪ್ರತಿಷ್ಠಿತ ಐಐಟಿ ಬಾಂಬೆಯ ವಿದ್ಯಾರ್ಥಿಯೊಬ್ಬನನ್ನು ಪೊಲೀಸರು ಇಂದು ಬಂಧಿಸಿದ್ದಾರೆ.
ಆರೋಪಿಯನ್ನು ಥಾಣೆಯ ನಿವಾಸಿ ಅವಿನಾಶ್ ಕುಮಾರ್ ಯಾದವ್(34) ಎಂದು ಗುರುತಿಸಲಾಗಿದ್ದು, ಈತನ ವಿರುದ್ಧ ಸೆಕ್ಷನ್ 345(ಯಾವುದೇ ವ್ಯಕ್ತಿ, ಯುವತಿ/ಮಹಿಳೆ ಸ್ನಾನ ಮಾಡುವುದು ಅಥವಾ ಖಾಸಗಿ ಕೆಲಸಗಳ ಚಿತ್ರೀಕರಣ ಐಪಿಸಿ ಪ್ರಕಾರ ಅಪರಾಧ ಕೃತ್ಯವಾಗಿದೆ)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕಳೆದ ಶುಕ್ರವಾರ ರಾತ್ರಿ ತಾನು ಸ್ನಾನ ಮಾಡುತ್ತಿದ್ದ ವೇಳೆ ಬಾತ್ ರೂಂನಲ್ಲಿ ಮೊಬೈಲ್ ಫೋನ್ ಇಟ್ಟಿರುವುದನ್ನು ಗಮನಿಸಿದ ಮಹಿಳೆ, ಈ ವಿಷಯವನ್ನು ಪತಿಗೆ ತಿಳಿಸಿದ್ದರು. ಈ ಸಂದರ್ಭದಲ್ಲಿ ಹೊರಗಡೆ ಬಂದಾಗ ಆರೋಪಿ ಹಿಂಬದಿಯಿಂದ ಓಡಿ ಹೋಗುತ್ತಿರುವುದನ್ನು ದಂಪತಿ ಗಮಿಸಿದ್ದರು ಎಂದು ವರದಿಯಾಗಿದೆ.
Discussion about this post