ನವದೆಹಲಿ: ಭಾರತದ ಆರ್ಥಿಕ ಬೆಳವಣಿಗೆ 2018ರಲ್ಲಿ 7.3ರಷ್ಟು ಇರಲಿದ್ದು, ಇದು 2009ರಲ್ಲಿ 7.4ಕ್ಕೆ ಏರಿಕೆಯಾಗಲಿದೆ ಎಂದು ಐಎಂಎಫ್ ಅಂದಾಜು ಮಾಡಿದೆ.
ಈ ಕುರಿತಂತೆ ಇಂದು ವರದಿ ಬಿಡುಗಡೆ ಮಾಡಿರುವ ಐಎಂಎಫ್ 2017ರಲ್ಲಿ ಬೆಳವಣಿಗೆ ದರ 6.7ರಷ್ಟಿತ್ತು. ಇದು 2019ರಲ್ಲಿ 7.4ಕ್ಕೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಇತ್ತೀಚೆಗೆ ಏರಿಕೆಯಾದ ತೈಲ ದರ ಹಾಗೂ ಜಾಗತಿಕ ಆರ್ಥಿಕ ಬೆಳವಣಿಗೆಗಳು ಭಾರತದ ಮೇಲೆ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಕೊಂಚ ಮಾತ್ರ ಅಂದರೆ 2019ರಲ್ಲಿ 7.4ಕ್ಕೆ ಮಾತ್ರ ಏರಿಕೆಯಾಗಲು ಸಾಧ್ಯ ಎಂದು ವರದಿ ಹೇಳಿದೆ.
HIGHLIGHTS
- IMF predicted a growth rate of 7.4% in 2019
- In 2017, India had clocked a 6.7% growth rate
- IMF said inflation in India is on the rise, estimated at 3.6% in FY18
ಭಾರತದಲ್ಲಿ ಪ್ರಸ್ತುತ ನಡೆಯುತ್ತಿರುವ ರಚನಾತ್ಮಕ ಸುಧಾರಣೆಯಿಂದ ಲಾಭದಾಯಕವಾಗಿದ್ದ ಭಾರತದ ಮಧ್ಯಮ-ಅವಧಿಯ ಬೆಳವಣಿಗೆ ನಿರೀಕ್ಷೆಗಳು 7¾% ನಷ್ಟು ಬಲವಾಗಿ ಉಳಿದಿವೆ. ಆದರೆ ಏಪ್ರಿಲ್ 2018 ರ ಡಬ್ಲ್ಯೂಇಒಗೆ ಹೋಲಿಸಿದರೆ ಕೇವಲ ½ ಶೇಕಡಾವಾರು ಹಂತದಲ್ಲಿ ಅದನ್ನು ಗುರುತಿಸಲಾಗಿದೆ ಎಂದು ವರದಿ ಹೇಳಿದೆ.
ಒಂದು ವೇಳೆ ಈ ಅಂದಾಜು ನಿಜವಾದರೆ, ಅತ್ಯಂತ ವೇಗವಾಗಿ ಬೆಳವಣಿಗೆಯಾಗುತ್ತಿರುವ ಪ್ರಮುಖ ರಾಷ್ಟ್ರಗಳ ಸಾಲಿನಲ್ಲಿ ಭಾರತವೂ ಸಹ ಇರಲಿದೆ. ಅಲ್ಲದೇ, 2018ರಲ್ಲಿ ಚೀನಾವನ್ನು ಭಾರತ ಶೇ.0.7ರಷ್ಟು ಅಂಕಿ ಅಂಶದಲ್ಲಿ ಹಿಂದಿಕ್ಕಿದ್ದು, ಜಾಗತಿಕ ಮಟ್ಟದಲ್ಲಿ 2019ರಲ್ಲಿ ಭಾರತ 1.2ರಷ್ಟು ಪ್ರಮಾಣದಷ್ಟು ಮುಂದಿದೆ ಎಂದು ವರದಿ ಹೇಳಿದೆ.
2017ರಲ್ಲಿ ಚೀನಾ ಅತಿ ವೇಗವಾಗಿ ಬೆಳವಣಿಗೆಯಾಗುತ್ತಿರುವ ದೇಶವಾಗಿ ಶೇ.0.2 ಪ್ರಮಾಣದಲ್ಲಿ ಭಾರತಕ್ಕಿಂತಲೂ ಮುಂದಿತ್ತು.
Discussion about this post