ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘ ಯಾವುದೇ ಪತ್ರಕರ್ತರ ಸಂಘಕ್ಕೆ ಪರ್ಯಾಯವಲ್ಲ ಎಂದು ಸಂಘದ ರಾಜ್ಯಾಧ್ಯಕ್ಷ ವಿಷ್ಣು ಹೇಳಿದರು.
ಬಿ. ಕೃಷ್ಣಪ್ಪ ವೃತ್ತದ ಲೋಕೋಪಯೋಗಿ ಇಲಾಖೆಯ ವಸತಿ ಗೃಹದಲ್ಲಿ ನಡೆದ ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘದ ಜಿಲ್ಲಾ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಹಲವಾರು ಪತ್ರಕರ್ತರ ಸಂಘಗಳು ಈಗಾಗಲೇ ಇವೆ. ಅದಾಗ್ಯೂ ಕೆಲವು ಸೌಲಭ್ಯ ವಂಚಿತ ಗ್ರಾಮೀಣ ಮತ್ತು ನಗರ ಪ್ರದೇಶಗಳ ದಿನಪತ್ರಿಕೆ, ಮಾಸ ಪತ್ರಿಕೆ, ವಾರ ಪತ್ರಿಕೆ ಹಾಗೂ ಪಾಕ್ಷಿಕಗಳ ವರದಿಗಾರಿಗೆ ಸರ್ಕಾರ ಮತ್ತು ಸಮಾಜದ ಸೌಲಭ್ಯಗಳನ್ನು ನ್ಯಾಯಯುತವಾಗಿ ದೊರಕಿಸುವ ಸದುದ್ದೇಶದಿಂದ ಈ ಸಂಘವನ್ನು ಸ್ಥಾಪಿಸಲಾಗಿದೆ. ರಾಜ್ಯದ ತುಂಬ ಹರಡಿರುವ ಅಸಂಘಟಿತ ಪತ್ರಕರ್ತರನ್ನು ಒಂದು ಸಂಘಟನೆಯ ಚೌಕಟ್ಟಿನಲ್ಲಿ ಸೇರಿಸಿ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಈ ಸಂಘಟನೆ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.
ಉಪ ಪೋಲಿಸ್ ಆಯುಕ್ತ ಸುಧಾಕರ್ ಎಸ್. ನಾಯ್ಕ್ ಮಾತನಾಡಿ ಕೋವಿಡ್-19 ಸಂದರ್ಭದಲ್ಲಿ ಕೊರೋನಾ ವಾರಿಯರ್ಸ್ ಜೊತೆಯಲ್ಲಿ ಪತ್ರಕರ್ತರು ಉತ್ತಮ ಕರ್ತವ್ಯ ನಿರ್ವಹಿಸಿದ್ದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ನೂತನ ಸದಸ್ಯರಿಗೆ ಗುರುತಿನ ಚೀಟಿಯನ್ನು ವಿತರಿಸಲಾಯಿತು.
ಸಮಾರಂಭದಲ್ಲಿ ಪೌರಾಯುಕ್ತ ಮನೋಹರ್, ಸಿಪಿಐ ಮಂಜುನಾಥ್ ಮಾತನಾಡಿದರು. ಕ ಸಂ ವ ಸಂಘದ ರಾಜ್ಯ ಪದಾಧಿಕಾರಿಗಳು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು. ಮಹಮ್ಮದ್ ಗೌಸ್ ಕಾರ್ಯಕ್ರಮ ಸ್ವಾಗತಿಸಿ ನಿರೂಪಿಸಿದರೆ, ಮಹೇಶ್ವರ ನಾಯ್ಕ ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post