ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ವಿದ್ಯಾರ್ಥಿಗಳು ಅಚಲವಾದ ನಿಷ್ಠೆ ಏಕಾಗ್ರತೆ ಪರಿಶ್ರಮ, ನಿಖರವಾದ ಗುರಿ ಯನ್ನು ಹೊಂದಿದ್ದರೆ, ನೀವು ಏನನ್ನಾದರೂ ಸಾಧಿಸಬಹುದು ಎಂದು ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಶಿವಕುಮಾರ್ ಹೇಳಿದರು.
ಕುಮದ್ವತಿ ಪದವಿಪೂರ್ವ ಕಾಲೇಜಿನ ಸೈನ್ಸ್ ಫೊರಂ ಹಾಗೂ ನೀಟ್ ಸಿಟಿ ಸೆಲ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದಿನ ಮಕ್ಕಳಿಗೆ ಅತಿಯಾದ ಒತ್ತಡವಿದೆ. ಇದರ ಜೊತೆಗೆ ಕಠಿಣವಾದ ಸ್ಪರ್ಧಿಯು ಇದೆ. ಆದ್ದರಿಂದ ವಿದ್ಯಾರ್ಥಿಗಳು ಸಮಾಜದ ಪ್ರಮುಖ ವಾಹಿನಿಯಲ್ಲಿ ಗಣ್ಯ ವ್ಯಕ್ತಿಗಳಾಗಿ ಎಂದು ಶುಭ ಹಾರೈಸಿದರು.
Also read: Indian Railway | ವಿಶಾಖಪಟ್ಟಣಂ–ಬೆಂಗಳೂರು ವಿಶೇಷ ರೈಲು ಸೇವೆ ವಿಸ್ತರಣೆ
ಪ್ರಾಸ್ತವಿಕ ನುಡಿಗಳನ್ನಾಡಿದ ಕುಮದ್ವತಿ ಪಿಯು ಕಾಲೇಜ್ ಪ್ರಾಚಾರ್ಯ ಡಾ. ವೀರೇಂದ್ರ, ವಿದ್ಯಾರ್ಥಿಗಳು ಪ್ರತಿ ವರ್ಷವೂ ಕೂಡ ಈ ರೀತಿಯ ಸಂಘಗಳನ್ನು ಉದ್ಘಾಟನೆ ಮಾಡುತ್ತಿದ್ದು ಇದರ ಉದ್ದೇಶ ಈ ಎಲ್ಲಾ ಪೋರಂ ಗಳ ಮುಖಾಂತರ ಶೈಕ್ಷಣಿಕ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು. ತಂದೆ ತಾಯಿಯ ಕನಸುಗಳ ಜೊತೆಗೆ ನಿಮ್ಮ ಕನಸುಗಳು ನೆರವೇರಲಿ ಹಾಗೂ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಯುವುದರ ಜೊತೆಗೆ ಜೀವನದಲ್ಲಿ ಶಿಸ್ತನ್ನು ರೂಡಿಸಿಕೊಳ್ಳಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಿಇಟಿ ನೀಟ್ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಕಾರ್ಯಾಗಾರವನ್ನು ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಪರ್ವಿಸ್ ಅಹಮದ್ ಟಿಪಿಟಿ ಪ್ರೆಸೆಂಟೇಷನ್ ಮೂಲಕ ವಿದ್ಯಾರ್ಥಿಗಳಲ್ಲಿ ಪ್ರತಿಯೊಂದು ವಿಭಾಗದ ಮಹತ್ವ ಹಾಗೂ ಅವುಗಳ ರ್‍ಯಾಂಕಿಂಗ್ ಮಾಹಿತಿ, ಕಾಲೇಜುಗಳ ಆಯ್ಕೆ ಇತ್ಯಾದಿಗಳ ಕುರಿತು ಸಮಂಜಸವಾದ ಮಾಹಿತಿಯನ್ನು ನೀಡಿದರು.
ಕುಮದ್ವತಿ ಪ್ರೌಢಶಾಲೆಯ ಪ್ರಾಚಾರ್ಯರಾದ ವಿಶ್ವನಾಥ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಉಪನ್ಯಾಸಕರಾದ ಕುಮಾರಸ್ವಾಮಿ ಸ್ವಾಗತಿಸಿ, ಲವ ವಂದಿಸಿ, ಚೈತ್ರ ಕಾರ್ಯಕ್ರಮ ನಿರೂಪಣೆ ಮಾಡಿದರು. ಕಾರ್ಯಕ್ರಮದಲ್ಲಿ ವಿಜ್ಞಾನ ವಿಭಾಗದ ಉಪನ್ಯಾಸಕರಾದ ಅಶ್ವಿನಿ, ಮೇಘನಾ, ವೀಣಾ ದೀಪಿಕಾ, ಸುಷ್ಮಾ, ನಯನ, ಸುಪ್ರಿಯಾ, ಸುಪ್ರಿಯ, ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








