ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಆಪರೇಶನ್ ಸಿಂಧೂರದ ನಂತರ ಭಾರತದ ತಾಕತ್ತು ಏನು ಎಂಬುದನ್ನು ವಿಶ್ವವೇ ನೋಡಿದ್ದು, ನಮ್ಮ ಮೇಲೆ ಯಾರದ್ದೇ ಅಣುಬಾಂಬ್ ದಾಳಿಯ ಬೆದರಿಗೆ ನಡೆಯಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಆಪರೇಶನ್ ಸಿಂಧೂರ ಕಾರ್ಯಾಚರಣೆ ಮೇಲೆ ಸಂಸತ್’ನಲ್ಲಿ ಅವರು ಮಾತನಾಡಿದರು.
ನಮ್ಮಲ್ಲಿ ನುಗ್ಗಿ ಧರ್ಮ ಕೇಳಿ ಅಮಾಯಕರನ್ನು ಕೊಂದರು. ಅಂದೇ ಹೇಳಿದ್ದೆ, ಎಲ್ಲರಿಗೂ ತಿಳಿಯುವಂತೆ ಬಹಿರಂಗವಾಗಿ ಶಿಕ್ಷೆ ಆಗುತ್ತದೆ ಎಂದಿದೆ. ಅದರಂತೆ ನಮ್ಮ ಸೇನಾ ಪಡೆಗಳು ಶತ್ರುಗಳಿಗೆ ತಕ್ಕ ಪಾಠ ಕಲಿಸಿದ್ದು, ಅವರ ನೆಲೆಗಳನ್ನು ಧ್ವಂಸ ಮಾಡಿವೆ. ಇದರಿಂದ ನಮ್ಮ ದೇಶದ ತಾಕತ್ತು ಏನು ಎಂಬುದನ್ನು ನಮ್ಮ ಸೇನಾ ಪಡೆಗಳು ವಿಶ್ವಕ್ಕೆ ತೋರಿಸಿದ್ದ, ಇನ್ನು ಮುಂದೆ ಯಾರದ್ದೇ ಆಟ ನಮ್ಮ ಮುಂದೆ ನಡೆಯಲ್ಲ ಎಂದು ಎಚ್ಚರಿಕೆ ನೀಡಿದರು.
193 ರಲ್ಲಿ ಕೇವಲ 3 ರಾಷ್ಟçಗಳು ಮಾತ್ರ ಪಾಕಿಸ್ಥಾನವನ್ನು ಬೇಂಬಲಿಸಿದವು. ಆದರೆ ಉಳಿದ ಯಾವ ರಾಷ್ಟçಗಳೂ ಸಹ ಭಾರತ ನಡೆಸಿದ ದಾಳಿ ತಪ್ಪು ಎಂದು ಹೇಳಲಿಲ್ಲ ಎಂದರು.
ಪಾಕಿಸ್ಥಾನದ ಮೂಲೆ ಮೂಲೆಗಳಲ್ಲಿ ನಮ್ಮ ಸೇನಾ ಕ್ಷಿಪಣಿಗಳು ನುಗ್ಗಿದವು. ಪಾಕಿಸ್ತಾನ ಅಕ್ಷರಶಃ ತತ್ತರಿಸಿ ಹೋಗಿತ್ತು. ಅಲ್ಲಿನ ಅಧಿಕಾರಿಯೊಬ್ಬರು ಕರೆ ಮಾಡಿ, ದಯಮಾಡಿ ಕದನವಿರಾಮ ಘೋಷಿಸಿ, ಇನ್ನೂ ದಾಳಿ ನಡೆಸಿದರೆ ನಮಗೆ ತಡೆದುಕೊಳ್ಳುವ ಶಕ್ತಿಯಿಲ್ಲ ಎಂದು ಬೇಡಿದ್ದರು ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













Discussion about this post