ನವದೆಹಲಿ: 2019ರ ಲೋಕಸಭಾ ಚುನಾವಣೆಗೆ ತಿಂಗಳುಗಳು ಉಳಿದಿರುವಂತೆಯೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಬೆಂಬಲಿಗರಿಗೆ ಸಂತಸ ವಿಚಾರ ಹೊರಬಿದ್ದಿದೆ.
ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಈಗಲೂ ಸಹ ಜಗತ್ತಿನಲ್ಲೇ ಅತಿ ವೇಗಗತಿಯಲ್ಲಿ ಬೆಳೆಯುತ್ತಿರುವ ದೇಶವಾಗಿದೆ ಎಂದು ಅಂತಾರಾಷ್ಟ್ರೀಯ ಆರ್ಥಿಕ ನಿಧಿ(ಐಎಂಎಫ್) ಹೇಳಿದೆ.
ಈ ಕುರಿತಂತೆ ವಿವರವಾದ ವರದಿ ಪ್ರಕಟಿಸಿರುವ ಐಎಂಎಫ್, ಸರ್ಕಾರದ ಸುಧಾರಣಾ ಕ್ರಮಗಳ ಪರಿಣಾಮ ಭಾರತ ಈಗಲೂ ಪ್ರಪಂಚದಲ್ಲಿ ವೇಗಗತಿಯಲ್ಲಿ ಬೆಳವಣಿಗೆ ಹೊಂದುತ್ತಿರುವ ರಾಷ್ಟ್ರವಾಗಿದೆ ಎಂದಿದೆ.
ಇನ್ನು, ಜಿಡಿಪಿ ಕುರಿತಾಗಿ ಹೇಳಿರುವ ಐಎಂಎಫ್ 2018-19ನೆಯ ಸಾಲಿಯಲ್ಲಿ ಶೇ.7.3 ರಿಂದ ಶೇ.7.5ರಷ್ಟಿದೆ ಎಂದು ಅಂದಾಜಿಸಿದೆ.
ಹೂಡಿಕೆ ಮತ್ತು ದೃಢವಾದ ಖಾಸಗಿ ಬಳಕೆಗಳನ್ನು ಬಲಪಡಿಸುವ ದೃಷ್ಟಿಯಿಂದ ಭಾರತವು ವಿಶಾಲವಾದ ಸಕಾರಾತ್ಮಕ ದೃಷ್ಟಿಕೋನವನ್ನು ಎದುರಿಸುತ್ತಿದೆ ಎಂದು ಐಎಮ್ಎಫ್ ತಿಳಿಸಿದೆ.
Discussion about this post