ಕಲ್ಪ ಮೀಡಿಯಾ ಹೌಸ್ | ಇಸ್ಲಾಮಾಬಾದ್ |
ಪಾಕಿಸ್ತಾನದ ಮೇಲೆ ಆಪರೇಶನ್ ಸಿಂಧೂರ ಕಾರ್ಯಾಚರಣೆ ಇಂದು ರಾತ್ರಿಯೂ ಮುಂದುವರೆದಿದ್ದು, ಪಾಕಿಸ್ತಾನ ಪ್ರಧಾನಿ ನಿವಾಸದ ನಿವಾಸದ ಬಳಿಯಲ್ಲೇ ಭಾರತೀಯ ಸೈನ್ಯದ ಭಾರಿ ದಾಳಿ ನಡೆದಿದೆ.
ಭಾರತ ನಡೆಸಿದ ಮಿಸೈಲ್ ದಾಳಿಗೆ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ನಡುಗುವಂತಾಗಿದೆ. ಪಾಕ್ ಪ್ರಧಾನಿ ಮನೆ ಬಳಿಯೇ ದಾಳಿಯಾಗಿದೆ ಎಂದು ವರದಿಯಾಗಿದೆ.
ರಸ್ತೆಗಳಿಗೆ ಬಾರದಂತೆ ಪಾಕ್ ನಾಗರಿಕರಿಗೆ ಅಲ್ಲಿನ ಸ್ಥಳೀಯ ಆಡಳಿತಗಳಿಂದ ಸೂಚನೆ ನೀಡಿದೆ.
ಭಾರತೀಯ ಸೇನೆಯ ದಾಳಿಗೆ ತತ್ತರಿಸಿ ಹೋಗಿರುವ ಪಾಕಿಸ್ತಾನ ದೇಶದ ಹಲವು ನಗರಗಳು ಕತ್ತಲಲ್ಲಿ ಸಿಲುಕಿವೆ. ಕೆಲವು ನಗರಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post