ಸಿಕ್ಕಿಂ: ಇಲ್ಲಿನ ಗ್ಯಾಂಟೋಕ್ ಸನಿಹದ ನಟುಲಾ ಪ್ರದೇಶದಲ್ಲಿ ಭಾರೀ ಹಿಮಪಾತದಲ್ಲಿ ಸಿಲುಕಿದ್ದ ಸುಮಾರು 2500 ಮಂದಿಯನ್ನು ಭಾರತೀಯ ಸೇನೆ ಕ್ಷಿಪ್ರ ಕಾರ್ಯಾಚರಣೆಯಲ್ಲಿ ರಕ್ಷಣೆ ಮಾಡಿದೆ.
ಈ ಪ್ರದೇಶದಲ್ಲಿ ಭಾರೀ ಹಿಮಪಾತವಾದ ಪರಿಣಾಮ ನೂರಾರು ವಾಹನಗಳು ಸಿಲುಕಿ, ಸಾವಿರಾರು ಮಂದಿ ಸಂಕಷ್ಟದಲ್ಲಿದ್ದರು. ತತಕ್ಷಣ ಕಾರ್ಯಾಚರಣೆ ಆರಂಭಿಸಿದ ಸೇನೆ, 2500 ಮಂದಿಯನ್ನು ರಕ್ಷಣೆ ಮಾಡಿದೆ.
ಇನ್ನು, ರಕ್ಷಿತ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗಿದ್ದು, ಅವರಿಗೆಲ್ಲಾ ನೀರು, ಊಟ ಹಾಗೂ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.
#Relief #RescueOperation.#IndianArmy rescued more than 2500 civilians stuck in more than 400 vehicles around Nathula, Sikkim due to heavy snowfall. All were provided food, shelter & medical care last night. #AlwaysWithYou pic.twitter.com/FoaXnGNXQV
— ADG PI – INDIAN ARMY (@adgpi) December 29, 2018
ಈ ಕುರಿತಂತೆ ಭಾರತೀಯ ಸೇನೆ ಟ್ವೀಟ್ ಮಾಡಿದ್ದು, ರಕ್ಷಿಸಲಾಗಿರುವ ಎಲ್ಲ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನೆ ಮಾಡಲಾಗಿದ್ದು, ಅಗತ್ಯ ಸಹಾಯ ಮಾಡಲಾಗಿದೆ ಎಂದಿದೆ.
ಈಶಾನ್ಯ ಸಿಕ್ಕಿಂ ಜಿಲ್ಲೆಯಲ್ಲಿ ಸಮುದ್ರ ಮಟ್ಟದಿಂದ ಸುಮಾರ್ 4,310 ಮೀಟರ್ ಎತ್ತರದಲ್ಲಿ ನಟುಲಾ ಪ್ರದೇಶವಿದೆ. ಈ ಪ್ರದೇಶಕ್ಕೆ ಕೇವಲ ಭಾರತೀಯ ಪ್ರಜೆಗಳಿಗೆ ತೆರಳಲು ಮಾತ್ರ ಅವಕಾಶವಿದೆ.
Discussion about this post