ನವದೆಹಲಿ: ಭಯೋತ್ಪಾದಕ ಮುಕ್ತ ಕಾಶ್ಮೀರ ಮಾಡುವುದು ನಮ್ಮ ಗುರಿಯಾಗಿದ್ದು, ಇದಕ್ಕಾಗಿ ಇಲ್ಲಿ ತೊಂದರೆ ನೀಡುತ್ತಿರುವ ಯಾವುದೇ ಉಗ್ರರನ್ನು ಬಿಡುವುದಿಲ್ಲ ಎಂದು ಭಾರತೀಯ ಸೇನೆ ಅಬ್ಬರಿಸಿದೆ.
ಈ ಕುರಿತಂತೆ ಹೇಳಿಕೆ ನೀಡಿರುವ ಭಾರತೀಯ ಸೇನೆ ಉಗ್ರರ ಮುಕ್ತ ಕಾಶ್ಮೀರ ಮಾಡುವ ನಮ್ಮ ಗುರಿಯ ದಾರಿ ಸಾಗುತ್ತಿದ್ದು, ಕ್ರೂರಿಗಳಾದ ಜೈಷ್ ಎ ಮೊಹಮದ್, ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗಳ ನಾಶ ನಮ್ಮ ಪಣ. ಈ ಹೋರಾಟದಲ್ಲಿ ಸೇನೆಯೊಂದಿಗೆ ಜಮ್ಮು ಕಾಶ್ಮೀರ ಪೊಲೀಸ್, ಸಿಆರ್’ಪಿಎಫ್ ಕೈಜೋಡಿಸಿದ್ದು, ಇಂದು ಜಂಟಿಯಾಗಿ ಆರು ಉಗ್ರರನ್ನು ಹೊಸಕಿ ಹಾಕಿದ್ದೇವೆ ಎಂದು ಹೇಳಿದೆ.
ಇನ್ನು, ಗುರುವಾರದ ಬೆಳವಣಿಗೆ ನೋಡುವುದಾದರೆ, ಪುಲ್ವಾಮಾ ಹಾಗೂ ಶೋಪಿಯಾನ್ ಬಳಿ ಭದ್ರತಾ ಪಡೆಗಳು ನಡೆಸಿದ ಪ್ರತ್ಯೇಕ ಎನ್ ಕೌಂಟರ್ ಗಳಲ್ಲಿ ಆರು ಉಗ್ರರು ಹತ್ಯೆಯಾಗಿದ್ದಾರೆ. ಈ ಮಧ್ಯೆ ಯೋಧರು ಹುತಾತ್ಮರಾಗಿದ್ದು, ನಾಗರಿಕರೊಬ್ಬರು ಮೃತಪಟ್ಟಿದ್ದಾರೆ.
ಪುಲ್ವಾಮಾ ಜಿಲ್ಲೆಯ ಡೆಲಿಪೊರಾ ಪ್ರದೇಶದಲ್ಲಿ ಪೊಲೀಸರು ಹಾಗೂ ಭದ್ರತಾ ಪಡೆಗಳು ಬೆಳಗ್ಗೆಯಿಂದಲೂ ಶೋಧ ಕಾರ್ಯಾಚರಣೆ ನಡೆಸಿದ್ದು, ಉಗ್ರರ ಅಡಗುತಾಣಗಳನ್ನು ಪತ್ತೆ ಹಚ್ಚಿ ಗುಂಡಿನ ದಾಳಿ ನಡೆಸಿದ್ದಾರೆ. ಕಾರ್ಯಾಚರಣೆ ವೇಳೆ ಸೆಪೊಯ್ ಸಂದೀಪ್ ಎಂಬ ಯೋಧ ಹುತಾತ್ಮರಾಗಿದ್ದು, ರಾಯೇಸ್ ಡಾರ್ ಎಂಬ ಸ್ಥಳೀಯ ನಾಗರಿಕರೊಬ್ಬರು ಮೃತರಾಗಿದ್ದಾರೆ.
Discussion about this post